ಮತ್ತೊಂದಿಷ್ಟು ತರಲೆ ಕವನಗಳು

ಮತ್ತೊಂದಿಷ್ಟು ತರಲೆ ಕವನಗಳು

ಆತ್ಮಹತ್ಯೆ ಮಾಡಿಕೊಳ್ಳೋಣ

ನಾನು: ಗೆಳೆಯ! ಈ ಕ್ಷಣವೇ ಆತ್ಮಹತ್ಯೆ ಮಾಡಿಕೊಳ್ಳೋಣವೆನಿಸಿದೆ

        ಯಾವುದು ಲೇಸು? ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಳ್ಳಲೆ?

        ಟಿಕ್-೨೦ ಕುಡಿದು ತಿಗಣೆಯಂತೆ ಒದ್ದಾಡಿ ಸತ್ತುಹೋಗಲೆ?

        ಸ್ಲೀಪಿಂಗ್ ಪಿಲ್ಲುಗಳ ಸೇವಿಸಿ ನಿದ್ರೆಯಲ್ಲಿ ಶಾಶ್ವತ ಪವಡಿಸಲೆ?

        ಯುಟಿಲಿಟಿ ಬ್ಯುಲ್ಡಿಂಗಿನಿಂ ಜಂಪಿಸಿ ಕ್ಷಣದಲೇ ಉಸಿರನು ಬಿಡಲೆ?

        ಟ್ರೈನಿಗೆ ತಲೆ ನೀಡಿ ಚಟ್ನಿಯಾಗಿ ಕಾಗೆಗಳ ಹೊಟ್ಟೆ ತುಂಬಿಸಲೆ?

ಗೆಳೆಯ: ಇದ್ಯಾವುದು ಬೇಡ ಮಿತ್ರ! ಅಪ್ಪಿತಪ್ಪಿ ಬದುಕುಳಿಯಬಹುದು

        ಟೈಂ ಟೆಸ್ಟೆಡ್ ವಿಧಾನವ ಉಸುರುವೆ! ಈಗಲೇ ಮದುವೆಯಾಗು!!

-------------

ನತದೃಷ್ಟ

ನಾನು ಬದುಕಲ್ಲಿ ಬಯಸಿದ ಎಲ್ಲವೆಲ್ಲ ವಸ್ತುಗಳು

ಕಾನೂನು ವಿರುದ್ಧವಾಗಿವೆ, ದುಬಾರಿಯಾಗಿವೆ

ಇಲ್ಲವೇ ಮತ್ತೊಬ್ಬರನ್ನು ಮದುವೆಯಾಗಿಬಿಟ್ಟಿವೆ!

------------

ಮಾರ್ಗದರ್ಶನ ಬೇಕಿದೆ

ಸೋಮಾರಿತನ ನಮ್ಮೆಲ್ಲರ ಶತ್ರು ಎಂದರು ಚಾಚಾಜಿ

ನಿಮ್ಮ ಶತ್ರುಗಳನ್ನು ಪ್ರೀತಿಸಿ ಎಂದರು ಗಾಂಧೀಜಿ

ಗೆಳೆಯ! ಏನು ಮಾಡಲಿ? ಯಾರ ಮಾತ ಕೇಳಲಿ?

------------

ಸತ್ಯ

೧೦% ರಷ್ಟು ರಸ್ತೆ ಅಪಘಾತಗಳು ಕುಡುಕರಿಂದ ಆಗುತ್ತವೆಯಂತೆ

ಅಂದರೆ ೯೦%ರಷ್ಟು ಕುಡಿಯದವರಿಂದ ಆಗುತ್ತವೆಯೆಂದಾಯಿತು!

ಇದು ದಿಟವಾಗಿದ್ದಲ್ಲಿ, ಬಾ ಗೆಳೆಯ ಈಗಲೇ ಕ್ವಾರ್ಟರನ್ನೇರಿಸುವ!!

------------

ಕ್ರೌರ್ಯ

ಮಡದಿಯ ಬತ್ತೀಸ ರಾಗ ದಿನ ದಿನ ಕೇಳಿ ಕೇಳಿ ಕಿವುಡಾದ

ಪತಿ ಪುರುಷೋತ್ತಮ ಎಸೆದನು ತನ್ನವಳ ಮೊಸಳೆಯ ಬಾಯಿಗೆ!

ಈಗ ಎದುರಿಸುತ್ತಿದ್ದಾನೆ ಪ್ರಾಣಿ ದಯಾಸಂಘದ ಮೊಕದ್ದಮ್ಮೆ

ಫಾರ್ ಬೀಯಿಂಗ್ ವೆರಿ ವೆರಿ ಕ್ರುಯೆಲ್ ಟು ದಿ ಮೊಸಳೆಗೆ!!

 

-ನಾಸೋ

Rating
Average: 3 (1 vote)

Comments