explorer ಇರುವೆ
ಕುಂಬಳಕಾಯಿ ಬಳ್ಳಿಯ ನವಿರು ರೋಮಗಳು ಫೊಟೊಗ್ರಫಿಗೆ ತುಂಬ ಸಹಕಾರಿಯಾಗಿವೆ ಎಂದು ನಾನು ಕಂಡುಕೊಂಡಿದ್ದೆ. ಒಂದು ದಿನ ಮಧ್ಯಾನ್ಹ ಒಳ್ಳೆ ಬಿಸಿಲಿರಬೇಕಾದರೆ, ಈ ಇರುವೆಯ ಚಿತ್ರ ಸಿಕ್ಕಿತ್ತು. ಒಳ್ಳೆ ಆತ್ಮ ವಿಶ್ವಾಸ ಸೂಸುತ್ತ, ’ಸರಿ, ಇಲ್ಲಿಯವರೆಗೆ ಬಂದುದಾಗಿದೆ, ಇನ್ನೇನು ಹೊಸ ಛಾಲೆಂಜ್?’ ಎನ್ನುವ ಪ್ರಶ್ನೆ ಹಾಕಿದಂತೆ ಅನಿಸುತ್ತದೆ ನನಗೆ ಈ ಇರುವೆಯನ್ನು ನೋಡಿದರೆ..
ಬಹುಶ: ಇನ್ನೊಂದೆರಡು ವಾರಗಳಲ್ಲಿ ಕಾಲದಿಂದ ಹೊಸಕಿ ಹಾಕಲ್ಪಟ್ಟಿರಬಹುದಾದ ಈ ಜಂತು, ನನ್ನ ಕ್ಯಾಮರದೊಳ ಸೇರಿ ಒಂದು-ಸೊನ್ನೆ ಗಳ ರೂಪದಲ್ಲಿ ಅಮರವಾಗಿರುವುದು ಇನ್ನೊಂದು ರೀತಿಯಲ್ಲಿ ಆಶ್ಚರ್ಯವನ್ನುಂಟು ಮಾಡುತ್ತದೆ.
ವಂದನೆಗಳು,
ವಸಂತ್.
Rating