ಕವನಗಳು

ವಿಧ: ಕವನ
November 16, 2024
ಒಂದು ಎರಡು ಕನ್ನಡ ನಾಡು ಅದರಲೆ ಮಾತಾಡು ಬಂದು ಹೋಗುವ ಮಂದಿಗು ಕಲಿಸು ಕನ್ನಡದ ಹಾಡು ||   ಮೂರು ನಾಲ್ಕು ಕನ್ನಡ ಪಲುಕು ದಿನವು ಬಳಸಲೆ ಬೇಕು ನೂರು ಭಾಷೆ ಜೊತೆಯಲಿದ್ದರು ಕನ್ನಡವಾಡುತ ಬದುಕು  ||   ಐದು ಆರು ಕನ್ನಡ ತೇರು ಏರಿ ಕಂಪನು ಬೀರು ಹಾದಿ ಬೀದಿಯಲೆಲ್ಲ ಕನ್ನಡ ಡಿಂಡಿಮ ಬಾರಿಸಿ ಸಾರು  ||   ಏಳು ಎಂಟು ಕನ್ನಡಕೆಂಟು ಜ್ಞಾನಪೀಠಕೆ ನಮಿಸು ದಾಳಿಕೋರರಿಗೆ ಅಂಜದೆ ನಿಂತು ಕನ್ನಡವನು ಬಳಸು  ||   ಒಂಬತ್ತು ಹತ್ತು ಕನ್ನಡವೆ ಗತ್ತು ಗಡಿಯಿಂದಾಚೆಗು ಬೆಳೆಸು ಹೆತ್ತು ಹೊತ್ತಿಹ ತಾಯಿಯ…
ವಿಧ: ಕವನ
November 15, 2024
ಗಝಲ್ ೧ ಯಾರ ಬಗ್ಗೆಯು ಮಾತನಾಡದಿರು ಮನವೆ ಬೇರೆಯವರ ಜೊತೆ ಬಡಿದಾಡದಿರು ಮನವೆ   ಯಾರನ್ನೂ ಉದ್ಧಾರ ಮಾಡಿ ಏನಾಗಬೇಕು ನಂಜಿರುವವರ ಹತ್ತಿರ ಬೈದಾಡದಿರು ಮನವೆ   ಕತ್ತಲೆಯಲ್ಲೇ ಕಾಲ ಕಳೆಯುವರ ಸ್ನೇಹವೇಕೆ ಕಟು ಮಾತುಗಳಿಗೆ ಮಿಸುಕಾಡದಿರು ಮನವೆ   ತಪ್ಪಿದ್ದೂ ವಾದಿಸುವ ಹಿರಿಯರ ನಡೆ ಸರಿಯೇ ಗುರಿ ತಪ್ಪಿದ ಮಾತಿಗೆ ತಿಣುಕಾಡದಿರು ಮನವೆ   ಗಾಳಿ ಬೀಸಿದರೆ ದೀಪವು ಆರುತ್ತದೆ ತಿಳಿ ಈಶಾ ಮತ್ಸರದ ಗೂಡಿನ ಹಿಂದೆ ತಡಕಾಡದಿರು ಮನವೆ *** ಗಝಲ್ ೨ ನಾನು ಬದುಕನ್ನು ಅವಳಿಗೆ ಕೊಟ್ಟೆ *ಬೆಳಕಾಗಲಿಲ್ಲ* ಸಾಕಿ…
ವಿಧ: ಕವನ
November 14, 2024
ಚೆಲು ಕನ್ನಡ ಚೆಲು ಕನ್ನಡ ಚೆಲುವಿನ ನಾಡು ಜೈ ಭಾರತ ಜನನಿಯ ತನುಜೆಯ ಬೀಡು   ಎತ್ತರದ ಕರಿಮಣ್ಣಿನ ಸೊಬಗಿನ ನಾಡು ಶ್ರೀಗಂಧದ ನದಿವನಗಳ ಸುಂದರ ಬೀಡು ತರುಲತೆಗಳ ಶಾಸನಗಳ ಹೆಮ್ಮೆಯ ನಾಡು ಸ್ವಾಭಿಮಾನ ಹಿರಿಮೆಗಳ ಸಾಧನೆ ಬೀಡು   ಶೂರ ಧೀರ ರಾಜರುಗಳ ಚರಿತೆಯ ನಾಡು ದೇಶಪ್ರೇಮಿ ಬಂಧುಗಳ ಐಕ್ಯತೆ ಬೀಡು ಸದ್ಗುಣಿಗಳ ಭಕ್ತರ ಬದುಕಿನ ನಾಡು ಸಂತ ಋಷಿ ಪಾಮರರ ಕವಿಗಳ ಬೀಡು   ಕಲೆಗಾರ ಪಂಡಿತರ ವೈಭವ ನಾಡು ವಿಜ್ಞಾನ ಚಿಗುರುಗಳ ಸಾಧನೆ ಬೀಡು ನೀತಿ ಧರ್ಮ ದುಡಿಮೆಗಳ ಸೇವೆಯ ನಾಡು ಪರಮ ಜ್ಯೋತಿ ಸತ್ಯತೆಯ ಸಾರಿದ…
ವಿಧ: ಕವನ
November 13, 2024
ಅಮ್ಮಾ ಬಾರಮ್ಮ ಶ್ರೀತುಳಸಿ ಬಾರಮ್ಮ ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ/ ಧಾರಿಣೀ ದೇವಿ ಒಲಿದು ಬಾರಮ್ಮ ಪದುಮನಾಭನ ಹೃದಯವೇಣಿ ಬಾರಮ್ಮ//   ಖೂಳ ಖಳ ಜಲಂಧರನ ಮಡದಿ ಪರಮ ಪತಿವ್ರತೆ ವೃಂದಾ ದೇವಿಯಮ್ಮ/ ಕಾರ್ತಿಕ ಮಾಸದಿ ಪೂಜೆ ಮಾಡ್ವರಮ್ಮ ಪುರುಷೋತ್ತಮನ ವರಿಸಿ ಧನ್ಯಳಾದೆಯಮ್ಮ//   ಕ್ಷೀರ ಸಾಗರ ಮಥನದಿ ಉದ್ಭವಿಸಿದೆ ಅಮೃತ ಕಲಶದೊಳಗೆ ದೇವ ಬಿಂದುವಾದೆ/ ತುಳಸಿ ನಾಮಾಂಕಿತಳು ಧನ್ಯಳೋ ನೀನು ಲಕ್ಷ್ಮೀ ನಾರಾಯಣನಿಂದ ಮಾನ್ಯಳೋ ನೀನು//   ಏಕದಳ ತುಳಸಿಯಲಿ ರುಕ್ಮಿಣಿಗೆ ಒಲಿದವಳು ಸತ್ಯಭಾಮೆಯ ಗರ್ವವನು…
ವಿಧ: ಕವನ
November 12, 2024
ಹುಸಿ ನಗುವಿನ ಹಿಂದೆ ಹಸಿ ಸುಳ್ಳೇ ಇರುತ್ತದೆ ¡ *** ಎಲ್ಲಿ ಕುರುಡು  ಕಾಂಚಾಣ ಕುಣಿಯುತ್ತಿರುತ್ತದೋ  ಅಲ್ಲೆಲ್ಲ ನಮ್ಮಿಂದಲೇ  ಈ ದೇಶ ಈ ನಾಡು ಉಳಿದಿರುವುದು  ಎಂಬುವವರ ಕಾಲುಗಳೂ  ನೃತ್ಯ ಮಾಡುತ್ತಿರುತ್ತವೆ !  * ತನ್ನ ಹೊಳಪಿನಿಂದ ವಜ್ರ ಗಮನ ಸೆಳೆಯಿತು ಗಮನಿಸದವಗೆ ಗಾಜು ಘಾಯಗೊಳಿಸಿತು *** ನೀನೆಸೆದ ಇಟ್ಟಿಗೆಯಲಿ ಕಟ್ಟಿರುವೆ ನಾ ಮಹಲನ್ನು, ನಿನ್ನ ಆತಿಥ್ಯಕ್ಕಾಗಿ ಸದಾ ತೆರೆದಿರುವೆ ಬಾಗಿಲನ್ನು *** ನನ್ನ ಬರಹಗಳೇ  ಶ್ರೇಷ್ಠ  ಅನ್ನುವವರ ಹತ್ತಿರ  ಉಳಿದ ಬರಹಗಾರರು  ಮತ್ತು  ಓದುಗರು…
ವಿಧ: ಕವನ
November 11, 2024
ಗಝಲ್ ೧ ಮನದಲಿ ಬಯಕೆಗಳಿದ್ದರೂ ಬೆನ್ನು ಬಾಗಿದೆ ಸಖಿ ಆತ್ಮ ಚಡಪಡಿಸುತ್ತಿದ್ದರೂ ದೇಹ ಸೊರಗಿದೆ ಸಖಿ   ತೀರಕ್ಕೆ ಬಡಿದ ಮೇಲೆ ಅಲೆಗಳ ಆರ್ಭಟ ಎಲ್ಲಿದೆ ಕಣ್ಣುಮಿನುಗುತ್ತಿದ್ದರೂ ದೃಷ್ಟಿ ಕುರುಡಾಗಿದೆ ಸಖಿ   ಹೊರಜಗತ್ತಿನ ಶಬ್ದಗಳು ನನ್ನ ತಲುಪುವುದೇ ಇಲ್ಲ ಕಿವಿ ಚೆನ್ನಾಗಿಯೆ ಇದ್ದರೂ ಶ್ರವಣ ಕಿವುಡಾಗಿದೆ ಸಖಿ   ಮೊಸಗಾರರಿಂದ ತಪ್ಪಿಸಿಕೊಳ್ಳಲು ಒದ್ದಾಡುತಿಹೆನು ನಿನ್ನೆಡೆಗೂ ತಲುಪಲಾಗಿಲ್ಲ ಕಾಲು ಕುಂಟಾಗಿದೆ ಸಖಿ   ಮಾತುಕತೆಗಳೆಲ್ಲಾ ಇಲ್ಲದೆ ಈಗ ಬರೀ ನೆನಪು ಈಶಾ ಗೋರಿಯು ಕಾಯುತ್ತಲಿದೆ ಮಾತು…
ವಿಧ: ಕವನ
November 10, 2024
ಅಳಬೇಡ ತಮ್ಮ... ನಾನು ಯಾರಿಗೂ ಇಷ್ಟವಾಗುತ್ತಿಲ್ಲ ಎಂದು- ಗಳಗಳ ಅಳಬೇಡ ದಡ್ಡಾ...   ಎಲ್ಲರಿಗೂ ಇಷ್ಟವಾಗಲು ನೀನೇನು ಸರ್ವಪ್ರಿಯ ಝಣ ಝಣ ಮೌಲ್ಯದ ದುಡ್ಡಾ? *** ಎಂಥಾ ಮೋಜಿನ ಕುದರೀ...?   ಎಂಥಾ ಮೋಜಿನ ಕುದುರಿ ಈ ರಾಜಕೀಯ- ಹಡದಿ ತಿರುಗುವ ಬುಗುರಿ...   ಪಾಪದ ಹಣವ ಮೇಯುತ್ತಾ ಅಂಡಲೆಯುವ ಇದಕೆ-  ಮಾಡಿದ್ದೇ  ಚಾಕರಿ! *** ಸ್ವಯಂಕೃತಾಪರಾಧ  ಈ ಜಗದಲಿ ಮನುಷ್ಯ ತಾನು ಹಾಳಾಗುವುದು- ತನ್ನ ದುಶ್ಚಟ ದೌರ್ಬಲ್ಯಗಳಿಂದ....   ಅದನು ಬೇರೆಯವರ ಮೇಲೆ ಹಾಕಿ- ಪಡುವಿರೇಕೆ ಆನಂದ? *** ಟ್ರಂಪ್ ವಿಜಯ…
ವಿಧ: ಕವನ
November 09, 2024
ನನ್ನ ಮಾತು ನನ್ನ ಎಡೆಗೆ ಸಾಗಿ ಬರಲಿ ಎಂದಿಗು ಎನ್ನ ಒಲವೆ ಬಾಳ ಪಯಣ ನಿನ್ನ ಜೊತೆಗೆ ಮುಂದೆಗು   ಕಾಣ ಬರಲಿ ನಮ್ಮ ಸನಿಹ ಕೈಯ ಹಿಡಿದ ಸುದಿನವು ಮತ್ತೆ ಸೋಲು ಚಿತ್ತ ನೋವು ಬರದೆ ಇರಲು ಚಂದವು   ಹೊತ್ತು ಕಂತಿ ಮೆತ್ತಗಾಗೆ ಮತ್ತಿನಾಟ ಕರೆಯಿತು ಬೆಳಗು ಮೂಡೆ ಚುಕ್ಕಿ ಸರಿಯೆ ಮುತ್ತಿನೊಲವು ತಪ್ಪಿತು   ಜೀವ ಪಯಣ ಹೀಗೆ ಸಾಗೆ ನೋಡಿದಷ್ಟು ಹರುಷವು ಬತ್ತದಿರುವ  ಪ್ರೀತಿಯೊಳಗೆ ನಿತ್ಯವಿರಲಿ ಸತ್ಯವು   -ಹಾ ಮ ಸತೀಶ ಬೆಂಗಳೂರು
ವಿಧ: ಕವನ
November 08, 2024
ಗಝಲ್ ೧ ಪ್ರತಿಭೆಗಳನ್ನು ತುಳಿಯುತ್ತಾ ಸಾಗಿದ್ದೇವೆ ನಾವು ಹೊಸದೆನ್ನುತ್ತಾ ತಿಳಿಯದೇ ಬಾಗಿದ್ದೇವೆ ನಾವು   ಭಿನ್ನವಾದ ಧೋರಣೆಯ ನಡುವೆಯೇ ಬದುಕೇಕೆ ಪಾಪದವರನ್ನು ಹೊಸಕುತ್ತಲೇ ಬೀಗಿದ್ದೇವೆ ನಾವು   ತಿಳಿದವರಲ್ಲಿಂದು ನಾವೆನ್ನುವ ಅಹಂಕಾರವು ಬೇಕೆ ಹೊಸತಲ್ಲದ ವಸ್ತುಗಳಿಗಾಗಿಯೇ ಕೂಗಿದ್ದೇವೆ ನಾವು   ಅನ್ನವು ಬೆಂದಿದೆಯೇ ತಿಳಿಯಲು ಒಂದಗುಳ ಸಾಕು ಎಲ್ಲವೂ ಗೊತ್ತಿದ್ದರೂ ಹಲವರನ್ನು ತೂಗಿದ್ದೇವೆ ನಾವು   ಬೇಯುವರ ನಡುವಿನಿಂದ ನೀನು ದೂರವಿರು ಈಶಾ ಒಣ ಜಂಭದವರಿಗಿಂತ ಬದುಕಲ್ಲಿ ಮಾಗಿದ್ದೇವೆ ನಾವು…
ವಿಧ: ಕವನ
November 07, 2024
ಹರೆಯದಲಿ ಸವಿಜೇನು ತುಂಬಿದ್ದ ಸಮಯದಲಿ ಬೆಳಕಿಲ್ಲದೇ ಬೆಳೆದೆ ಹಳೆಯ ನೆನಪೇ ಕಂತಿರುವ ಸಮಯಲಿ ಎಲ್ಲ ಸಿಗುತಲೆ ಇರಲು ಬಹು ಆಸೆ ಕಳೆದೋಯ್ತು ಹಳೆಯ ನೆನಪೇ   ಜೀವನದಿ ಉತ್ಸಾಹ ಮತ್ತೆ ಚಿಮ್ಮುತ ಬರಲು ಶಕ್ತಿ ಕುಂದಿಹುದಿಲ್ಲಿ ಹಳೆಯ ನೆನಪೇ ಬಾಳೆಲೆಯನು ಹಾಕಿ ಸವಿಯುಂಡ ಗಳಿಗೆಯದು ಮರೆತು ಹೋಗದು ಎಂದೂ ಹಳೆಯ ನೆನಪೇ   ಹೊಸ ಬದುಕ ಕಟ್ಟಿದೆನು ಸತಿಯ ಜೊತೆಗೂಡಿ ನೋವ ಮೆಟ್ಟಿಲ ಮೇಲೆ ಹಳೆಯ ನೆನಪೇ ಕಸವಿರುವ ಕತೆಗಳನು ಗುಡಿಸಿ ಸ್ವಚ್ಛವ ಮಾಡೆ ಖುಷಿಯ ಕೊಟ್ಟಿಹ ದಿನವೂ ಹಳೆಯ ನೆನಪೇ   ಜೊತೆಗೂಡಿ ಎಲ್ಲರೊಳು…