ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
November 29, 2024
ಗಝಲ್ ೧
ಪ್ರೀತಿ ಸಿಗಲಿಲ್ಲವೆ ಹುಚ್ಚನಾಗದಿರು ಗೆಳೆಯ
ಮಾತು ಬರಲಿಲ್ಲವೆ ಖಿನ್ನನಾಗದಿರು ಗೆಳೆಯ
ಎಲ್ಲರ ಬದುಕೊಳಗೂ ತೂತುಗಳಿವೆ ಏಕೊ
ನೆಮ್ಮದಿ ಕಾಣಲಿಲ್ಲವೆ ಬೆತ್ತಲಾಗದಿರು ಗೆಳೆಯ
ಮಾಡಿರುವ ಕರ್ಮ ಫಲವ ಉಣ್ಣಲೇ ಬೇಕು
ದಾರಿ ತಿಳಿಯಲಿಲ್ಲವೆ ಕತ್ತಲಾಗದಿರು ಗೆಳೆಯ
ಮುತ್ತಿನ ಮಹಲಲ್ಲಿ ಮತ್ತದುವು ಇಲ್ಲವಾಯಿತೆ
ಗೆಲುವಿಂದು ನಿಲಲಿಲ್ಲವೆ ಮೆತ್ತಗಾಗದಿರು ಗೆಳೆಯ
ಜೀವನ ಪಯಣಗಳೆಲ್ಲ ಹೀಗೆ ಹೀಗೆಯೇ ಈಶಾ
ಬದುಕು ಸಿಗಲಿಲ್ಲವೆ ಮೌನಿಯಾಗದಿರು ಗೆಳೆಯ
***
ಗಝಲ್ ೨
ನಾನು ಭಿಕಾರಿಯಲ್ಲ …
ಲೇಖಕರು: ಬರಹಗಾರರ ಬಳಗ
ವಿಧ: ಕವನ
November 28, 2024
ಸುಂದರ ಜಗ ಕಾಣಲು ಬಂದೆ ಸಂತಸದಲಿ ಹಾರುಹಕ್ಕಿಯಾಗಿ
ಸಿಲುಕಿದೆ, ಹಣದ ಬಲೆಯಲಿ ಸೇರಿದೆ ಪಂಜರ, ಜೀತದಾಳಾಗಿ ॥
ಎಳೆ ಎಳೆಯ ಅಂಗಗಳಲ್ಲಿ ಹೊಳೆಹೊಳೆವ ಕಣ್ಣುಗಳಲ್ಲಿ ಬಂದೆ
ಕೇಳುತ್ತ - ಬೇಡುತ್ತಿರುವೆಯಾ? ‘ಸ್ವಾತಂತ್ರ್ಯ’ವ ನೀಡುವವರಾರು? ॥
ಅನಕ್ಷರತೆಯ ತಾಯಿ ತಂದೆಗಳ ಅಂಧತೆಗೆ ಮಣಿದೆಯಾ?
ಹಣರಕ್ಕಸರ ಕೈಗೆ ಸಿಲುಕಿದೆಯಾ? ನರಕದಲ್ಲಿ ನರಳುವೆಯಾ? ॥
ಅನ್ನಬಟ್ಟೆಗಾಗಿ ಜೀತದಾಳಾದೆಯಾ? ವಿಧಿಯಾಟವೊ? ನಿನ್ನೀ ದೌರ್ಬಲ್ಯವೊ
ಹಾಕುವರು ಹಳಸು ಹೊಲಸು, ತೊಡಿಸುವರು ಹರುಕು ಮುರುಕು ॥
ದಿನದಿನದ ಶ್ರಮವು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
November 27, 2024
ಹೊಸಜನ್ಮ
ಈ ಜನ್ಮದಲಿ
ಜೀವನದಿ-
ಪ್ರತಿದಿನ ಇಹುದು
ಕಷ್ಟ-ಸುಖ
ಹುಟ್ಟು-ಸಾವು...
ಗೊತ್ತಿಲ್ಲ ನಿನಗೆ ಮರ್ಮ...
ಹೆದರಿ-ಬೆದರಿ
ಬಳಲಿ ಬೆಂಡಾಗಿ
ನಿರಾಶನಾಗುವಿಯೇಕೋ
ಮರುದಿನಕೆ ಕಾದಿಹುದು
ನಿನಗೆ ಮತ್ತೊಂದು
ಹೊಸ ಜನ್ಮ!
***
ಧೋಕಾ ದುನಿಯಾ
ಏನೀ
ಜಗದ ಮಾಯೇ-
ಎಲ್ಲೆಲ್ಲೂ
ಒಬ್ಬರನೊಬ್ಬರು
ದೋಚುವವರೇ
ಸಖಾ...
ಈ ಹಾಳು
ಮುಖಗಳಿಗಿಂತ-
ಖಳೆ, ಹೊಳೆಯಾಗಿ
ಅರಳುತಿದೆ
ಶ್ರಮಿಕ ರೈತನ
ಮುಖ!
***
ಭಾರತದ ಭವಿಷ್ಯ
ಓ ಭವ್ಯ
ಭಾರತದ
ನಾಗರೀಕರೇ-
ಕಂಡ ಕಂಡವರು
ಹೇಳುವ ಭವಿಷ್ಯಕೆ
ಕಿವಿಯನರಳಿಸದಿರಿ...
ನೀವೇ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
November 26, 2024
ಉರಿಸದಾ ಹಣತೆಯಲಿ ಬೆಳಕು ಹರಿಯುವುದೇ ಹೇಳು
ಮೋಡವಿಲ್ಲದ ನಾಡಲ್ಲಿ ಮಳೆಯು ಸುರಿಯುವುದೇ ಹೇಳು
ಎಲ್ಲಾ ಬಲ್ಲವನೆಂದ ನಮಗೆ ನಾವೇ ಮಾಡುವ ಮೋಸ
ಅರಿಯದೆಂದರಿಯದಿರೆ ತನು ತಿರಿಯುವುದೇ ಹೇಳು
ಹರಿತ ಖಡ್ಗವ ಹಿಡಿದು ಹೀಗೆ ರಣರಂಗಕ್ಕಿಳಿದರೆ ಸಾಕೇ
ಹೃದಯ ಗಟ್ಟಿ ಇಲ್ಲದಿರೆ ಕತ್ತಿ ತರಿಯುವುದೇ ಹೇಳು
ಒಡಲ ಶುದ್ದಿಯೇ ನಮ್ಮ ಸುಖದ ಬದುಕಿನ ಸೂತ್ರವು
ದ್ವೇಷ ಮಡುಗಟ್ಟಿರಲು ಮನಸು ಅರಿಯುವುದೇ ಹೇಳು
ಅಹಂ ಎಲ್ಲದಕೂ ಅಡೆತಡೆ ಇನ್ನೂ ತಿಳಿಯದಿರೆ ಈಶಾ
ಹಮ್ಮು ಬಿಮ್ಮಿನ ಜೀವನ ಭವದಿ ಬಿರಿಯುವುದೇ ಹೇಳು
-…
ಲೇಖಕರು: ಬರಹಗಾರರ ಬಳಗ
ವಿಧ: ಕವನ
November 26, 2024
ಜ್ಞಾನ ನಿಮ್ಮಲ್ಲಿಹುದು ; ವಿಜ್ಞಾನ ನಿಮ್ಮಲ್ಲಿಹುದು ; ಸುಜ್ಞಾನ ನಿಮ್ಮಲ್ಲಿಹುದು
ಏನು ಗಿಡ-ಮರಗಳೋ, ಏನು ದರ್ಶನಗಳೋ ನೀವು ? ॥ಪ॥
ಅಶ್ವಥ ವೃಕ್ಷವೇ
ಬುದ್ಧನ ಜ್ಞಾನೋದಯಕ್ಕೆಂದು ಆಸರೆ ನೀಡಿದೆ ಅಂದು
ಆಮ್ಲಜನಕದ ಕಾಮಧೇನಾಗಿ ವೃಕ್ಷಜಗವ ಶೋಭಿಸುತ್ತಿರುವಿಂದು ॥೧॥
‘ಮುಟ್ಟಿದರೆ ಮುನಿ’ ಗಿಡವೇ
ನೀಡಿದೆ ಸಂದೇಶವ ಜಗದೀಶರ ಹೃದಯದಲ್ಲೊಂದು
ಜಗದೀಶರ ಸಸ್ಯ ಪ್ರಯೋಗದಲ್ಲಿ ಜಗದ ಕಟ್ತೆರೆಸಿರುವೆ ॥೨॥
ಬಟಾಣಿ ಸಸ್ಯಗಳೇ
ಗ್ರೆಗೊರ್ ಮೆಂಡಲ್ ಗೆ ಕಣ್ತೆರೆಸಿ -ಸಂತಸ ತಂದಿರಿ
ತಳಿಶಾಸ್ತ್ರದ ಜನಕನೆಂಬ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
November 24, 2024
ಅಹಂ
ಮನುಜ
ನಾನೇ
ನನ್ನಿಂದ
ಯಾಕೆ
ಹೇಳುವನೋ
ತಿಳಿಯೆ !
ಅವನೆಷ್ಟೇ
ದೊಡ್ಡವನಾದರೂ
ಎಲ್ಲರೆದುರು
ಸಣ್ಣವನಾಗುತ್ತಾನೆ
ಕೊನೆಗೆ
ಮಾಯವಾಗುತ್ತಾನೆ !
***
ಸಾಹಿತ್ಯ ಬರೆವಾಗ ಕೆಲಸದ
ಒತ್ತಡ ಇರಬಾರದು
ಇದ್ದವಗೆ ಅವನ ಹತ್ತಿರ
ಸಾಹಿತ್ಯವೆಂದೂ ಬಾರದು
***
ಮಂಜಿನ ಸಂಚಿನಿಂದ
ಕಲಿತದ್ದೆಲ್ಲ ಮಾಯ
ಇದರಿಂದಾಗಿದೆ ಮನಸ್ಸಿಗೆ
ತುಂಬಾ ಘಾಯ
***
ಕವಿಯ ಕಲ್ಪನೆಯ ಲೇವಡಿಯ ಮಾಡುವರು
ತಮ್ಮದೇ ದಾರಿಯಲಿ ನಡೆವ ಗಜರಿವರು
ಹೊತ್ತು ಮುಳುಗಿದ್ದೂ , ಬೆಳಕಿಹುದು ಎನ್ನುವರು
ಕವಿ ಬರಹಗಳ ತತ್ವವ ಮರೆತು ಕಾರುವರು !
ನಮ್ಮ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
November 23, 2024
ನೀವು ಬರೆದ
ಕವನವ ಓದಲು
ಕಷ್ಟವೆನಗೆ !
ನಾನು ಬರೆದ
ಕವನವ ಓದಲು
ಕಷ್ಟ ನಿಮಗೆ
ಕಾರಣ ಬಿಡಿ
ನೀವು ನನಗಿದ್ದರೆ
ನಾ ನಿಮಗಿಹೆ !
***
ಹೆಸರು ಪ್ರಶಸ್ತಿಗಾಗಿ
ಸಾಸಿವೆ ಕದ್ದರೂ ಕಳ್ಳನೆ ಆನೆಯ ಕದ್ದರೂ ಕಳ್ಳನೆ
ಚೂರು ಬೇರೆಯವರ ಬರಹವ ಕದ್ದರೂ ಚೌರ್ಯ
ಇಡೀ ಸಾಲುಗಳನು ತನ್ನದೆಂದು ಬರೆದರೂ ಚೌರ್ಯ
ಒಳ್ಳೆಯದೇ ಕವಿ ಲೋಕಕ್ಕೆ ತಿಳಿಯದಾದೆಯಾ ಮಳ್ಳನೆ
***
ಬದುಕೇ ಬರಡಾಗಿರುವಾಗ
ಮಾತು ಬರುವುದೆ ಹೇಳು
ಕಣ್ಣೀರಿನ ಸಂತೆಯೊಳಗೆ
ನನ್ನಿರುವಿನ ಬಾಳು
***
ನನ್ನ ಸೋಲೇ ಗೆಲುವಿಗೆ ದಾರಿಯಾಯ್ತು
ನನ್ನ ಗೆಲುವಿಗೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
November 22, 2024
ಡ್ರಗ್ಸ್ ಮಹಾಮಾರಿ
ಈ ಡ್ರಗ್ಸೇ ಹೀಗೆ-
ಮುನುಷ್ಯರನ್ನು
ಅನಾಗರೀಕರನ್ನಾಗಿಸಿ
ಹಿಂಡಿ ಹಿಪ್ಪೇ
ಮಾಡಿ
ಎಸೆಯುವುದು...
ಇಂಡಿಯಾದಲಿ
ವಾಹನ
ವೀಲ್ಹರ್;
ಅಮೇರಿಕಾದಲ್ಲಿ
ಹೋಮ್ಲೆಸ್ ಜನರು-
ಇದರ ಕೊಡುಗೆಯೇ!
***
ಹೊಸಜನ್ಮ
ಈ ಜನ್ಮದಲಿ
ಜೀವನದಿ-
ಪ್ರತಿದಿನ ಇಹುದು
ಕಷ್ಟ-ಸುಖ
ಹುಟ್ಟು-ಸಾವು...
ಗೊತ್ತಿಲ್ಲ ನಿನಗೆ ಮರ್ಮ...
ಹೆದರಿ-ಬೆದರಿ
ಬಳಲಿ ಬೆಂಡಾಗಿ
ನಿರಾಶನಾಗುವಿಯೇಕೋ
ಮರುದಿನಕೆ ಕಾದಿಹುದು
ನಿನಗೆ ಮತ್ತೊಂದು
ಹೊಸ ಜನ್ಮ!
***
ಧೋಕಾ ದುನಿಯಾ
ಏನೀ
ಜಗದ ಮಾಯೇ-
ಎಲ್ಲೆಲ್ಲೂ
ಒಬ್ಬರನೊಬ್ಬರು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
November 21, 2024
ಗಝಲ್ ೧
ಪದಗಳ ನುಂಗಿ ನೀರು ಕುಡಿಯುವರು ಜ್ಞಾನರೇ
ಬೇಟೆ ಕಾಣದೆ ಗುರಿ ಇಡುವವರು ಜ್ಞಾನರೇ
ಪಾಂಡಿತ್ಯವಿಲ್ಲದೇ ವಿಮರ್ಶೆಯು ಹೇಗದು ಸಾಧ್ಯ
ಅರ್ಥವೇ ಆಗದೆ ವ್ಯರ್ಥ ನುಡಿವವರು ಜ್ಞಾನರೇ
ಸೂರ್ಯ ಕಿರಣಕೆ ಗಾಜಿನ ಚೂರು ಮಿನುಗದೇನು
ಅದನೆತ್ತಿ ಕುಣಿದು ವಜ್ರ ಎನ್ನುವವರು ಜ್ಞಾನರೇ
ಪುಸ್ತಕ ಓದು ಮಸ್ತಕಕ್ಕೆ ತುಂಬು ಕವಿಯಾಗು
ಅಡ್ಡಾದಿಡ್ಡಿ ಬರೆದು ಕವಿಯೆನ್ನುವವರು ಜ್ಞಾನರೇ
ಸಪ್ತ ಸಾಗರವನ್ನೇ ಈಜಿ ಪಾರಾದವನ ಕರೆದು ಈಶಾ
ಕೆರೆಯನ್ನೊಮ್ಮೆ ಈಜಿ ದಾಟು ಹೇಳುವವರು ಜ್ಞಾನರೇ
***
ಗಝಲ್ ೨
ಮಧು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
November 20, 2024
ಮೌನದಲೆಯ ಮೋಹ ಕಡಲು
ಕೂಡಿ ನಡೆಯೆ ಸಡಗರ
ಅಲೆಯಲಿರುವ ನಾದರಂಗ
ಮನದಿ ಸುಳಿಯೆ ಹೆಮ್ಮರ
ಅಂತರಂಗ ರಂಗ ಭಾವ
ಸುತ್ತ ಚೆಲ್ಲೆ ಸೊಬಗಲಿ
ತನುವ ಸೆಳೆವ ಪ್ರೇಮ ಪರಿಗೆ
ಹರುಷ ಕಾಣ್ಕೆ ಚೆಲುವಲಿ
ಉಬ್ಬಿಯುಬ್ಬಿ ಸೊಕ್ಕಿ ನಲಿವ
ಉಬ್ಬರದ ಅಲೆಯಲಿ
ಸಖಿಯ ಗೀತೆ ಕೇಳುತಿದೆ
ಮನದ ತುಂಬಾ ಸವಿಯಲಿ
ನಾನು ಗಂಡು ಅವಳು ಹೆಣ್ಣು
ನಡುವೆಯೇಕೆ ಅಂತರ
ಮಧುರ ಭಾವದೊಳಗೆ ನಾವು
ಬದುಕಬೇಕು ಸುಂದರ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ