ಹನಿಗಳು ಸರ್ ಹನಿಗಳು !
ಕವನ
ಅಹಂ
ಮನುಜ
ನಾನೇ
ನನ್ನಿಂದ
ಯಾಕೆ
ಹೇಳುವನೋ
ತಿಳಿಯೆ !
ಅವನೆಷ್ಟೇ
ದೊಡ್ಡವನಾದರೂ
ಎಲ್ಲರೆದುರು
ಸಣ್ಣವನಾಗುತ್ತಾನೆ
ಕೊನೆಗೆ
ಮಾಯವಾಗುತ್ತಾನೆ !
***
ಸಾಹಿತ್ಯ ಬರೆವಾಗ ಕೆಲಸದ
ಒತ್ತಡ ಇರಬಾರದು
ಇದ್ದವಗೆ ಅವನ ಹತ್ತಿರ
ಸಾಹಿತ್ಯವೆಂದೂ ಬಾರದು
***
ಮಂಜಿನ ಸಂಚಿನಿಂದ
ಕಲಿತದ್ದೆಲ್ಲ ಮಾಯ
ಇದರಿಂದಾಗಿದೆ ಮನಸ್ಸಿಗೆ
ತುಂಬಾ ಘಾಯ
***
ಕವಿಯ ಕಲ್ಪನೆಯ ಲೇವಡಿಯ ಮಾಡುವರು
ತಮ್ಮದೇ ದಾರಿಯಲಿ ನಡೆವ ಗಜರಿವರು
ಹೊತ್ತು ಮುಳುಗಿದ್ದೂ , ಬೆಳಕಿಹುದು ಎನ್ನುವರು
ಕವಿ ಬರಹಗಳ ತತ್ವವ ಮರೆತು ಕಾರುವರು !
ನಮ್ಮ ಬಗ್ಗೆ ಇಲ್ಲದ್ದು ಸಲ್ಲದ್ದು ಹೇಳುವವರು ಹೇಳುತ್ತಲಿರಲಿ ಬಿಡಿ ,
ಇದರ ನಡುವೆಯೇ ನಮ್ಮಷ್ಟಕ್ಕೆ ನಾವು ನಮ್ಮ ಮುಂದಿನ ಗುರಿಯತ್ತ
ಮೌನವಾಗೇ ಸಾಗೋಣ ಮತ್ತು
ಅದರಲ್ಲಿ ಯಶಸ್ವಿಯಾಗೋಣ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
