ಮರಗಿಡಗಳ ಪವಾಡ
ಕವನ
ಜ್ಞಾನ ನಿಮ್ಮಲ್ಲಿಹುದು ; ವಿಜ್ಞಾನ ನಿಮ್ಮಲ್ಲಿಹುದು ; ಸುಜ್ಞಾನ ನಿಮ್ಮಲ್ಲಿಹುದು
ಏನು ಗಿಡ-ಮರಗಳೋ, ಏನು ದರ್ಶನಗಳೋ ನೀವು ? ॥ಪ॥
ಅಶ್ವಥ ವೃಕ್ಷವೇ
ಬುದ್ಧನ ಜ್ಞಾನೋದಯಕ್ಕೆಂದು ಆಸರೆ ನೀಡಿದೆ ಅಂದು
ಆಮ್ಲಜನಕದ ಕಾಮಧೇನಾಗಿ ವೃಕ್ಷಜಗವ ಶೋಭಿಸುತ್ತಿರುವಿಂದು ॥೧॥
‘ಮುಟ್ಟಿದರೆ ಮುನಿ’ ಗಿಡವೇ
ನೀಡಿದೆ ಸಂದೇಶವ ಜಗದೀಶರ ಹೃದಯದಲ್ಲೊಂದು
ಜಗದೀಶರ ಸಸ್ಯ ಪ್ರಯೋಗದಲ್ಲಿ ಜಗದ ಕಟ್ತೆರೆಸಿರುವೆ ॥೨॥
ಬಟಾಣಿ ಸಸ್ಯಗಳೇ
ಗ್ರೆಗೊರ್ ಮೆಂಡಲ್ ಗೆ ಕಣ್ತೆರೆಸಿ -ಸಂತಸ ತಂದಿರಿ
ತಳಿಶಾಸ್ತ್ರದ ಜನಕನೆಂಬ ಬಿರುದು ತೊಡಿಸಿದಿರಿ ॥೩॥
ಆಲದ ಮರಗಳೇ
ತಿಮ್ಮಕ್ಕನ ಮಡಿಲಿಗೆ ಮಕ್ಕಳಾಗಿ ರಾರಾಜಿಸುತ್ತಿಹಿರಿ
ಅಮರಗೊಳಿಸಿರುವಿರಿ ಜಗದಗಲದಲಿ ‘ಸಾಲು ಮರದ ತಿಮ್ಮಕ್ಕಳನ್ನು’ ॥೪॥
-ಜಂಬರಗಟ್ಟೆ ಟಿ.ಮಂಜಪ್ಪ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
