ಕವನಗಳು

ವಿಧ: ಕವನ
December 16, 2024
ಮನದ ಅರಸಿಯೆ ನಿನಗೆ ಹೊಗಳಿಕೆ ಬೇಕೆ ಒಡಕು ಕೆಡುಕುಗಳಿರದೆ ಬರೀ ತೆಗಳಿಕೆ ಬೇಕೆ   ಸುಳ್ಳು ಮಾತಲಿ ಸಾಗಲು ಖಚಿತ ಸೋಲಲ್ಲವೆ ಭಾಷೆಯನರೆದು ಸಾಗುವಗೆ ಹೀಯಾಳಿಕೆ ಬೇಕೆ   ಮೌಲ್ಯದಾ ಜೀವನವು ದಿಕ್ಕುಗಳನೆ ಬದಲಿಸಿತು ಪಂಡಿತನೆಂದವಗೇ ಮತ್ತೆಂದೂ ತಿಳುವಳಿಕೆ ಬೇಕೆ   ತಾಯ ಒಲುಮೆಲಿ ಮಗುವು ಬೆಳೆಯುತ್ತಾ ಬಂದಿದೆ ಮನುಷ್ಯನ ಬಾಳಿಕೆಗೆ ಮತ್ತೊಮ್ಮೆ ಮುಚ್ಚಳಿಕೆ ಬೇಕೆ   ಸೌಮ್ಯ ವಾದದ ನಡುವೆ ನೋವು ಬರದಿರಲಿ ಈಶಾ ಪ್ರತೀ ಮಾತಿಗೊಮ್ಮೊಮ್ಮೆ ಹೀಗೆಯೆ ಹೊರಳಿಕೆ ಬೇಕೆ -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ:…
ವಿಧ: ಕವನ
December 15, 2024
ನಿನ್ನನ್ನು ಹಂಗಿಸುವರೇ ಸುಮ್ಮನಿದ್ದುಬಿಡು ಗೆಳೆಯ ಬುದ್ದಿಮಾತ ಹೇಳುವರೇ ಕೇಳುತಲಿದ್ದುಬಿಡು ಗೆಳೆಯ *** ಉತ್ತರಗಳು ಎಲ್ಲೆ ಮೀರದಿರಲಿ ಕೈ ಹಿಡಿಯಲಿ ! *** ಚಿತ್ತದಲ್ಲಿರುವಂತ ಯೋಜನೆಗಳೆಂದಿಗೂ ಬಿತ್ತಿದ ಬೀಜದಂತೆ ಮೊಳಕೆ ಒಡೆಯಲಿ ! *** ಜಾತಿ ಮತಗಳ ನಡುವೆ ಮತ ಪೆಟ್ಟಿಗೆಯ ಹಿಡಿದ ರಾಜಕೀಯ ಕಲಿಯುತಲೆ ವಿಜಯಿಯಾಗುತ ಮೆರೆದ ! *** ಕಚ್ಚಾಡದಿರು ಯೋಗ್ಯತೆಯೇ ಇಲ್ಲದೆ ಪ್ರಶಸ್ತಿಗಾಗಿ ! *** ನನ್ನಿಂದಾಗಿಯೆ ಕವಿಯು ಬೆಳಗಿದ ಭ್ರಮೆಯು ತಿಳಿ ! *** ಹೊಲಸೊಂದಿಗೆ ಗುದ್ದಾಟ ಸಲ್ಲದಯ್ಯ ದೂರದಲ್ಲಿರು…
ವಿಧ: ಕವನ
December 14, 2024
ಚಾಟಿ ಏಟು  ಅವಮಾನದ ಚಾಟಿ ಎಲ್ಲ ಕಡೆಯಿಂದಲೂ ಬಂದು ಎನ್ನನು ಹೊಡೆಯಲಿ ಛಡಿ...   ಅಪರಿಪೂರ್ಣನಾದ ನಾನು- ಒಬ್ಬ ಸಭ್ಯ ಮನುಷ್ಯನಾದಾದರೂ ಆಗಿ ಸಮಾಜಕೆ ಸೂಕ್ತ ವ್ಯಕ್ತಿಯಾದರೂ ಆದೇನು ಬಿಡಿ! *** ಮಿಮಿಕ್ರಿ  ವಿದೇಶಗಳಲ್ಲಿ ನಡೆಯುವುದು ನಿಜವಾದ ರಾಜಕೀಯ ಹಾಗೂ ಮಿಲಿಟರಿ ಕ್ರಾಂತಿ...   ನಮ್ಮಲ್ಲಿ ನಡೆಯುವುದು- ರಾಜಕಾರಣಿಗಳು ಬೇಳೆ ಬೇಯಿಸಿಕೊಳ್ಳುವ ಮಿಮಿಕ್ರಿಯ ಭ್ರಾಂತಿ! *** ಅಭಿನವ ಶ್ರೀಕೃಷ್ಣ!  ಎಲ್ಲ ಪಕ್ಷದವರೂ ಪ್ರೀತಿಸುವ ಮಾನವೀಯ ಸಜ್ಜನಿಕೆಯ ರಾಜಕಾರಣೀ...   ಎಲ್ಲರ ಹೃನ್ಮನಗಳ ಗೆದ್ದು…
ವಿಧ: ಕವನ
December 13, 2024
ಪ್ರತಿ ಬದುಕಿನಲ್ಲಿ ಮುಂದೆ ಬಂಡಿ ಇದೆ ಗೊತ್ತು ಗುರಿಯ ಎಡೆಯೆ ಗುಂಡಿ ಇದೆ   ಬಾಳ ಒಲುಮೆ ಸದಾ ನೋವು ನಲಿವು ನನ್ನ ಮಾತೆ ನಡೆಯಲೆಂಬ ಚಂಡಿ ಇದೆ   ದ್ವೇಷ ಕೈಯ ಹಿಡಿಯೆ ಮಾತು ಬೇಡವೇ ಗುಡಿಯ ಎಡ ಬಲಗಡೆಯು ಹುಂಡಿ ಇದೆ   ಜೀವ ಒಂದೆ ಸವನೆ ನರಳೆ ಮತ್ತೆ ಮರಣ ಹೃದಯ ಬೇನೆ ಹಿಂಡೆ ನಡುವೆ ತಂಡಿ ಇದೆ   ಭಾವ ಇಲ್ಲದ ಬಾಳ ಕಲೆಗೆ ಬೆಲೆಯೆ ಈಶ ನಮ್ಮ ನಡೆ ನುಡಿಗೆ ನನಸಿನ ಕೊಂಡಿ ಇದೆ *** ನುಡಿ ಹಾರ ಮನವನವ ಹಿಡಿತದೊಳು ಇಟ್ಟಿರುವನೆ ಸಂತನಯ್ಯ ಪಾಠವನು ಬೋಧಿಪನೆ ಸಂತನಯ್ಯ ಪ್ರತಿದಿನವು ಜನತೆಯನು ಎಚ್ಚರಿಪನೆ…
ವಿಧ: ಕವನ
December 12, 2024
ಆರಲು ಹಾಕಿದ ಬಟ್ಟೆಗಳಂತೆ ನಮ್ಮ ಬದುಕು..   ಕೊಳೆಯಾಗದಂತೆ ನೋಡಿಕೊಳ್ಳಬೇಕು.. ಬಹು ಜತನದಿಂದ ಕಾಪಾಡಿಕೊಳ್ಳಬೇಕು..   ಅವವರು ಹೇಳಿದರು ನೀನು ಚಂದವೊ ಚಂದ.. ನಿಜವಾದ ಚಂದ ಇರುವುದು ಒಳಗಿದ್ದಾಗ ಆನಂದ  ಮತ್ತೆ ಮಸುಕಾಾಯಿತು  ಮಧ್ಯ ವಯಸ್ಸಾಯಿತು    ಇನ್ನೇನು ಹಾಗೂ ಹೀಗೂ  ಬಟ್ಟೆಗೆ ವಯಸ್ಸಾಯಿತು.. ಮುಪ್ಪೆಂಬ ಕರ್ಮ ಅಡರಿಯಾಯಿತು...   ಬದುಕು ನೋವು ನಲಿವಿನ ಸಂಗಮ  ನೀ ಇದ್ದು ಬಿಡು ನಿನ್ನ ಪಾಡಿಗೆ   ನಿನ್ನೊಳಗೆ ಇರುವ ಓರ್ವ ಜಂಗಮ...   ಅವನ ನಂಬಿದರೆ ನಿನಗೆ ಭಯವಿಲ್ಲಾ ಸಾಕ್ಷಿಯಾಗಿರು ಈ ಲೋಕದ…
ವಿಧ: ಕವನ
December 11, 2024
ಗಝಲ್ ೧ ನನ್ನ ಸುಳ್ಳ ಕೊರಮನೆಂದು ಹೇಳುವವರು ಹೇಳಲಿ ಒಳ್ಳೆಯ ಜನರ ನಡುವೆಯೇ ತೆಗಳುವವರು ಹೇಳಲಿ   ಸಾಹಿತ್ಯಕ್ಕಿಂತ ಅನಾಚರಗಳೇ ಮುಖ್ಯವೆನಿಸಿದೆ ಏಕೆ ಪ್ರಾಣಿ ಜನ್ಮಕ್ಕಿಂತಲೂ ಕಡೆಯಾಗಿರುವವರು ಹೇಳಲಿ   ಸಂಸ್ಕೃತಿಗಳ ಪರಿಚಯವಿಲ್ಲದೇ ಪಂಡಿತರಾಗಿದ್ದಾರೆ  ಕ್ಷುಲ್ಲಕ ಕಾರಣಗಳಿಗೆ ಮಣೆಯಾಗಿರುವವರು ಹೇಳಲಿ   ನಿಂತ ನೀರಲ್ಲೇ ಭಾಷೆ ಅರಳಿ ಇರಲೆಂದರೆ ಸರಿಯೇನು ಅಪ್ಪ ನೆಟ್ಟ ಆಲದ ಮರಕ್ಕೇ ಸುತ್ತು ಬರುವವರು ಹೇಳಲಿ   ಉಸಿರಿಲ್ಲದವರ ನಡುವೆ ಜೀವಂತ ಶವವಾಗಿರುವೆ ಈಶಾ ಶವ ಪೆಟ್ಟಿಗೆಗೆ ಕೊನೆಯ ಮೊಳೆ…
ವಿಧ: ಕವನ
December 10, 2024
ಮನದಾಳ ಬೆಳಕಾಗಿ  ತನುವದುವು ಅರಳುತಲೆ ಹೃದಯ ಭಾವನೆ ಸವಿಯು ತಿಳಿಯು ನೀನು ಚಿಂತನೆಯು ಮೂಡುತಿರೆ ಹಳತೆಲ್ಲ ಮರೆಯುತಿರೆ ಜಗದಿ ಪ್ರೀತಿಯ ಕಾಣ್ವೆ -- ರಾಮ ರಾಮ *** ಗಝಲ್ ಚೆಲುವು ಮೂಡುತ ಇದೆ ಪ್ರೀತಿಯು ಉಕ್ಕುತ ಇದೆ   ಒಲವು ಕರೆಯುತ ಇದೆ  ಪ್ರೇಮ ಸುರಿಯುತ ಇದೆ    ಮೋಹ ಸೆಳೆಯುತ ಇದೆ ಚಿತ್ತವು ಮರೆಯುತ ಇದೆ   ಚಿಂತೆಯು ಕಳೆಯುತ ಇದೆ ಕಾಂತಿ ಹೊಳೆಯುತ ಇದೆ     ಪ್ರೀತಿಯು ಕಾಯುತ ಇದೆ  ಬೆಸುಗೆಯು ಕಾಣುತ ಇದೆ    -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ 
ವಿಧ: ಕವನ
December 09, 2024
ಮೆಲ್ಲುಸಿರಿನ ಗಾಯನದಲ್ಲಿ ಅರಳಿಬಿಡೆ ನನ್ನವಳೆ ಚೆಲುವಿನ ಅಪ್ಪುಗೆಯಲ್ಲಿಯೆ ನರಳಿಬಿಡೆ ನನ್ನವಳೆ   ಬೆಸುಗೆಯ ಬಂಧನದಲ್ಲಿಯೆ ಪ್ರೀತಿಯಿಲ್ಲವೆಂದೆ ಏಕೆ ಹಿತವಾಗಿಯೇ ಬಿಗಿದಿರುವೆನು ಕೆರಳಿಬಿಡೆ ನನ್ನವಳೆ   ತಂಪು ಹನಿಸುವ ಚಂದ್ರನಿನ್ನೂ ಮುಳುಗಿಲ್ಲ ನೋಡು ಹಾಸಿಗೆಯ ತುಂಬೆಲ್ಲ ಹೀಗೆ ಹೊರಳಿಬಿಡೆ ನನ್ನವಳೆ   ಆಲಿಂಗನ ಚೆನ್ನಾಟ ಕುಡಿನೋಟದ ಪ್ರೇಮದೊಸಗೆ ಮುತ್ತುಗಳ ಮತ್ತಿನಲ್ಲಿಯೇ ಮೊರಳಿಬಿಡೆ ನನ್ನವಳೆ   ಕೈಹಿಡಿದ ಚೆಲುವನೀಗ ಬಿಡುವನೇನು ಹೇಳು ಈಶಾ ಹಗಲು ಕಳೆದು ರಾತ್ರಿಗಿಂದು ಮರಳಿಬಿಡೆ ನನ್ನವಳೆ…
ವಿಧ: ಕವನ
December 08, 2024
ಯಾರನ್ನೂ ಹತ್ತಿರ ಸೇರಿಸಬಹುದು , ಮತ್ತು ಸ್ನೇಹಿತರೆನ್ನಬಹುದು ಹೊಲಸು ತಿಂಬಂತೆ ನಟಿಸುವವರನ್ನು  ಜೀವನದಲ್ಲೇ ನಂಬಬಾರದು *** ಓದಿ ಓದಿ ಕೂಚು ಭಟ್ಟ  ನಮ್ಮಲ್ಲಿ ಗಾದೆ ಮಾತಿದೆ ಈಗೀಗ ಹಲವಾರು ಜನರ  ಪಾಡು ಅದೇ ಆಗಿದೆ *** ಹೊಗಳುವುದೇ ಕಾಯಕವಾದರೆ  ದುಡಿಮೆ ಎಲ್ಲಿ ಬೇಲಿಯೇ ಸುತ್ತಲೆಲ್ಲೂ ಇರಲೀಗ  ತಡಮೆ ಎಲ್ಲಿ *** ನುಡಿಹಾರ ಯಾವ ಭಾವನೆಯಲ್ಲಿ ಬರುವೆಯೋ ಈ ಜಗಕೆ ಜನರ ಸೇವೆಯ ಮಾಡೋ ನೀನು ಇಂದು | ಆ ನೋಟ ಈ ನೋಟ ಕಾಟ ಬೇಡವೋ ಎಂದೂ ಸವಿ ಮಾತನಾಡುತಿರು -- ರಾಮ ರಾಮ || *** ತ್ರಿಪದಿ ಮನ್ನಿಸು…
ವಿಧ: ಕವನ
December 07, 2024
ಜೀವನದಲಿ ಸೋತೆ ಮನ ಮುಂದೇ ಹೋಯಿತು ಬದುಕಿನಲಿ ಬಿದ್ದೆನು ತನುವು ಬೆಂದೇ ಹೋಯಿತು   ತಪ್ಪು ತೆಪ್ಪಗೇ ಕುಳಿತಿದೆಯಿಂದು ಹೃದಯದಾಳದಲಿ   ಒಪ್ಪವು ಸುಖವನ್ನು ಹೀಗೆಯೇ ತಂದೇ ಹೋಯಿತು    ಹಸಿರಾಗಿರುವ ಸುಂದರ ಭಾವನೆ ನಮ್ಮೊಳೆಂದಿರಲಿ ಒಲವೆಲ್ಲವು ಭಯಗಳ ಹೊಡೆತಕೆ ಹಿಂದೇ ಹೋಯಿತು   ಅಮೃತದಲಿಂದು ವಿಷವಿದೆ ಹೇಳುವರಿಂದ ದೂರವಿರು ಗುರಿಯಿರಲಿ ಮಹತ್ತಮ ವಿಚಾರವು ಸಂದೇ ಹೋಯಿತು   ಮಸಲತ್ತು ಮಾಡಿದರೂ ನ್ಯಾಯವು ಸಿಗಲಾರದು ಈಶಾ ಬಾಳಲ್ಲಿ ದೃಷ್ಟಾಂತವ ಕೊಡುವರೇ ಎಂದೇ ಹೋಯಿತು   -ಹಾ ಮ ಸತೀಶ ಬೆಂಗಳೂರು…