ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ಯಾರನ್ನೂ ಹತ್ತಿರ ಸೇರಿಸಬಹುದು ,

ಮತ್ತು ಸ್ನೇಹಿತರೆನ್ನಬಹುದು

ಹೊಲಸು ತಿಂಬಂತೆ ನಟಿಸುವವರನ್ನು 

ಜೀವನದಲ್ಲೇ ನಂಬಬಾರದು

***

ಓದಿ ಓದಿ ಕೂಚು ಭಟ್ಟ 

ನಮ್ಮಲ್ಲಿ ಗಾದೆ ಮಾತಿದೆ

ಈಗೀಗ ಹಲವಾರು ಜನರ 

ಪಾಡು ಅದೇ ಆಗಿದೆ

***

ಹೊಗಳುವುದೇ ಕಾಯಕವಾದರೆ 

ದುಡಿಮೆ ಎಲ್ಲಿ

ಬೇಲಿಯೇ ಸುತ್ತಲೆಲ್ಲೂ ಇರಲೀಗ 

ತಡಮೆ ಎಲ್ಲಿ

***

ನುಡಿಹಾರ

ಯಾವ ಭಾವನೆಯಲ್ಲಿ ಬರುವೆಯೋ ಈ ಜಗಕೆ

ಜನರ ಸೇವೆಯ ಮಾಡೋ ನೀನು ಇಂದು |

ಆ ನೋಟ ಈ ನೋಟ ಕಾಟ ಬೇಡವೋ ಎಂದೂ

ಸವಿ ಮಾತನಾಡುತಿರು -- ರಾಮ ರಾಮ ||

***

ತ್ರಿಪದಿ

ಮನ್ನಿಸು ಗುರುದೇವಾ ನಿನ್ನಾ ಜೊತೆಗಿರುವೆನು

ಬಣ್ಣದಾ ಮಾತಿಗೆ ಮರುಳಾಗಿ | ಹೋಗದೆಲೆ

ಸುಖವಾಗಿ ಇರುವೆ ಎನ್ನೊಡೆಯಾ ॥

***

ನುಡಿಹಾರ

ಯಾವ ಭಾವನೆಯಲ್ಲಿ ಬರುವೆಯೋ ಈ ಜಗಕೇ

ಜನರ ಸೇವೆಯ ಮಾಡೊ ನೀನು ಇಂದು |

ಆ ನೋಟ ಈ ನೋಟ ಕಾಟ ಬೇಡವು ಎಂದೂ

ಸವಿ ಮಾತನಾಡುತಿರು -- ರಾಮ ರಾಮ ||

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್