ಹನಿಗಳು ಸರ್ ಹನಿಗಳು !
ಕವನ
ನಿನ್ನನ್ನು ಹಂಗಿಸುವರೇ ಸುಮ್ಮನಿದ್ದುಬಿಡು ಗೆಳೆಯ
ಬುದ್ದಿಮಾತ ಹೇಳುವರೇ ಕೇಳುತಲಿದ್ದುಬಿಡು ಗೆಳೆಯ
***
ಉತ್ತರಗಳು
ಎಲ್ಲೆ ಮೀರದಿರಲಿ
ಕೈ ಹಿಡಿಯಲಿ !
***
ಚಿತ್ತದಲ್ಲಿರುವಂತ
ಯೋಜನೆಗಳೆಂದಿಗೂ
ಬಿತ್ತಿದ ಬೀಜದಂತೆ
ಮೊಳಕೆ ಒಡೆಯಲಿ !
***
ಜಾತಿ ಮತಗಳ ನಡುವೆ
ಮತ ಪೆಟ್ಟಿಗೆಯ ಹಿಡಿದ
ರಾಜಕೀಯ ಕಲಿಯುತಲೆ
ವಿಜಯಿಯಾಗುತ ಮೆರೆದ !
***
ಕಚ್ಚಾಡದಿರು
ಯೋಗ್ಯತೆಯೇ ಇಲ್ಲದೆ
ಪ್ರಶಸ್ತಿಗಾಗಿ !
***
ನನ್ನಿಂದಾಗಿಯೆ
ಕವಿಯು ಬೆಳಗಿದ
ಭ್ರಮೆಯು ತಿಳಿ !
***
ಹೊಲಸೊಂದಿಗೆ
ಗುದ್ದಾಟ ಸಲ್ಲದಯ್ಯ
ದೂರದಲ್ಲಿರು !
***
ಎಲ್ಲವಿದ್ದೂ
ಇರದಂತೆ
ಬದುಕಿ
ದ
ರೆ ?
ಒಂದೋ
ಜ್ಞಾನಿಯಾಗುವೆ !
ಇಲ್ಲಾ
ಮಸಣ
ಸೇರುವೆ !!
***
ಬಾನ
ಸ್ವಚ್ಛಂದದಲಿ
ಜೋಡಿ
ಹಕ್ಕಿಗಳ
ದೇ
ಕಾರು
ಬಾರು !
ಮನೆಯಲ್ಲಿ
ನೋಡ
ಬೇಕು
ಒಗ್ಗರಣೆ
ಜೋರು !!
***
ನುಡಿ ಹಾರ
ಪುಣ್ಯಗಳ ಗಳಿಸುತಿರು ದೇವನೊಲಿಸುತ ದಿನವೂ
ಗಣ್ಯರೊಳು ಬೆರೆಯುತಿರು ಮೆರೆಯದಂತೆ |
ಅನ್ಯಕೆಲಸದ ನಡುವೆ ಜನಸೇವೆ ಮರೆಯದಿರೂ
ಮಾಣಿಕ್ಯ ಮಣಿಯಾಗು -- ರಾಮ ರಾಮ ||
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
