ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗರಿಗರಿ ಕೋಡುಬಳೆ

Image

ಅಕ್ಕಿ ಹಿಟ್ಟು, ಮೈದಾ ಹಿಟ್ಟು ಹಾಗೂ ಉಪ್ಪು ಸೇರಿಸಿಡಿ. ಕೆಂಪು ಮೆಣಸಿನಕಾಯಿಯನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದು ತೆಂಗಿನಕಾಯಿ, ಇಂಗುಗಳೊಂದಿಗೆ ಸೇರಿಸಿ ರುಬ್ಬಿ. ರುಬ್ಬಿದ ಮಿಶ್ರಣವನ್ನು ಅಕ್ಕಿ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿ ಸ್ವಲ್ಪ ಹಿಟ್ಟು ತೆಗೆದುಕೊಂಡು ಕೋಡುಬಳೆ ಆಕಾರದಲ್ಲಿ ಸುತ್ತಿ ಕಾದ ಎಣ್ಣೆಯಲ್ಲಿ ಕರಿಯಿರಿ.

ಬೇಕಿರುವ ಸಾಮಗ್ರಿ

ಅಕ್ಕಿ ಹಿಟ್ಟು - ೨ ಕಪ್, ತೆಂಗಿನಕಾಯಿ ತುರಿ - ೧ ಕಪ್, ಮೈದಾ ಹಿಟ್ಟು - ೨ ಚಮಚ, ಕೆಂಪು ಮೆಣಸಿನ ಕಾಯಿ - ೩ ಚಮಚ, ಇಂಗು - ಅರ್ಧ ಚಮಚ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಸರ್ಕಾರಿ ಕೆಲಸ ಮತ್ತು ಅಧಿಕಾರಿಗಳು...

ಬಹಳಷ್ಟು ಸರ್ಕಾರಿ ಅಧಿಕಾರಿಗಳ ಒಂದು ಸಾಮಾನ್ಯ ಗುಣ ಎಂದರೆ, (ಕೇಂದ್ರ ಮತ್ತು ರಾಜ್ಯ ಸೇರಿ) ಐಎಎಸ್ ಅಧಿಕಾರಿಗಳಿಂದ ಡಾಕ್ಟರ್, ಇಂಜಿನಿಯರ್ ಸೇರಿದಂತೆ ಬಹುತೇಕ ಎಲ್ಲಾ ವಿಭಾಗದವರು ಕೆಲಸಕ್ಕೆ ಸೇರುವಾಗ ಅತ್ಯಂತ ಶ್ರದ್ಧೆಯಿಂದ ಮತ್ತು ಕಷ್ಟಪಟ್ಟು ಓದುತ್ತಾರೆ.

Image

ಸ್ಟೇಟಸ್ ಕತೆಗಳು (ಭಾಗ ೯೫೬)- ಶಿವ

ಬೆಳಗೆದ್ದ ಕೂಡಲೇ ತನ್ನ ಪಕ್ಕದಲ್ಲಿ ಮಲಗಿರುವ ಪುಟ್ಟ ಶಿವನ ಪ್ರತಿರೂಪವನ್ನು ನೋಡುತ್ತಾ ಒಂದು ಸಲ ಕಣ್ಮುಚ್ಚಿ ಆ ಭಗವಂತನನ್ನ ಧ್ಯಾನಿಸಿ ತನ್ನ ಕೆಲಸದ ಕಡೆಗೆ ಹೊರಡುವುದು ಅವಳ ವಾಡಿಕೆ. ಆಕೆಯ ದಿನಚರಿಯಲ್ಲಿ ಪುಟ್ಟ ಶಿವ ಅವಳ ಜೀವನದ ಭಾಗವಾಗಿರುವ ಗಳಿಗೆ ಇದೆಯಲ್ಲ ಅದು ಅವರು ಯಾವತ್ತೂ ಮರೆಯದ ಅದ್ಭುತ ಕ್ಷಣಗಳಲ್ಲಿ ಒಂದು.

Image

ದೌರ್ಬಲ್ಯವನ್ನು ಶಕ್ತಿಯನ್ನಾಗಿಸಬೇಕು !

ನಿಮ್ಮ ಮನೆಯಲ್ಲಿ ಒಂದು ಹಳೆಯ ಹಲಸಿನ ಮರ ಇದೆಯಲ್ಲ ಅದರ ವಯಸ್ಸು ಎಷ್ಟು ಎಂದು ನಿಮ್ಮ ಅಮ್ಮನ ಬಳಿ ಕೇಳಿ. ಅಮ್ಮ ಹೇಳುತ್ತಾರೆ ನಾನು ನೋಡುವಾಗಲೂ ಇದು ಇಷ್ಟೇ ಎತ್ತರ ಇತ್ತು ಈಗ ಸ್ವಲ್ಪ ದಪ್ಪ ಆಗಿದೆ ಅಷ್ಟೇ. ಅಪ್ಪ ಹೇಳುತ್ತಾರೆ ಒಂದು ಎಪ್ಪತ್ತೈದಾದರೂ ಆಗಿರಬಹುದಂತೆ. ಈ ಸಸ್ಯಗಳ ಬೆಳವಣಿಗೆ ಆರಂಭದಲ್ಲಿ ವೇಗವಾಗಿದ್ದರೂ ನಂತರ ನಿಧಾನವಾಗುತ್ತಾ ಹೋಗುತ್ತದೆ. ಏಕೆ ಹೀಗೆ ಎಂದು ಎಂದಾದರೂ ಯೋಚಿಸಿದ್ದೀರಾ?

Image

ಗೋಕಾಕ್ ಮತ್ತು ಅವರ ಆಧ್ಯಾತ್ಮಿಕ ಪ್ರಯೋಗಗಳು (ಭಾಗ 1)

ಸಾಮಾನ್ಯವಾಗಿ ನವೋದಯದ ನಮ್ಮೆಲ್ಲ ಹಿರಿಯ ಸಾಹಿತಿಗಳು ಅಧ್ಯಾತ್ಮವನ್ನು ಒಂದು ಮೌಲ್ಯವಾಗಿ ಭಾವಿಸಿದವರು. ಅವರಿಗೆ ಆಂತರ್ಯದ ಉನ್ನತಿ ಬದುಕಿನ ಶ್ರೇಷ್ಠ ಉದ್ದೇಶವಾಗಿತ್ತು. ಸಾಮಾಜಿಕ ಸುಧಾರಣೆ, ಮಾನವೀಯತೆಯನ್ನು ಎಷ್ಟೇ ಮುನ್ನೆಲೆಯಲ್ಲಿಟ್ಟು ಕೊಂಡಿದ್ದರೂ ಅಧ್ಯಾತ್ಮಿಕತೆಯನ್ನು ಅವರು ಬಿಟ್ಟಿರಲಿಲ್ಲ.

Image

ಹಲ್ಲೆ ಪ್ರಕರಣ ಸಹಿಸುವಂಥದ್ದಲ್ಲ

ಪ್ರೀತಿ ವಿಚಾರದಲ್ಲಿ ಮತ್ತೊಬ್ಬ ಮಹಿಳೆ ಮೇಲೆ ಹಲ್ಲೆಯಾಗಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಅರೆಮಲ್ಲಾಪುರ ಎಂಬ ಗ್ರಾಮದಲ್ಲಿ ಯುವಕನೊಬ್ಬ ಯುವತಿ ಜತೆಗೆ ಹೋಗಿದ್ದಾನೆ ಎಂಬ ಕಾರಣಕ್ಕೆ ಯುವಕನ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿದೆ. ಬೆಳಗಾವಿಯ ವಂಟಮೂರಿಯಲ್ಲೂ ಇಂಥದ್ದೇ ಘಟನೆ ನಡೆದು, ದೇಶದಾದ್ಯಂತ ಸುದ್ದಿಯಾಗಿತ್ತು.

Image

ಯೋಚಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ…

ಒಂದು ವೇಳೆ ನಾನು ಪ್ರಜ್ವಲ್ ರೇವಣ್ಣ ಮಾಡಿದಂತ ಅಪರಾಧವನ್ನು ಮಾಡಿದಿದ್ದರೆ ಏನಾಗುತ್ತಿತ್ತು? ಈ ರೀತಿ ಆಗಿದೆ ಎಂಬ ಸುಳಿವಿನ ಪೆನ್ ಡ್ರೈವ್ ಸಿಗುತ್ತಿದ್ದಂತೆ ಪೊಲೀಸರು ಮನೆಗೆ ಬರುತ್ತಿದ್ದರು.

Image