ಎಲ್ಲ ಪುಟಗಳು

ಲೇಖಕರು: venkatesh
ವಿಧ: Basic page
December 25, 2007
ಸದ್ಯಕ್ಕೆ ಯೋಚಿಸಿದರೆ, ರಾಜ್ಯದ ರಾಜಕೀಯದಲ್ಲಿ ಮಿರುಗುವ, ಹಾಗೂ ತಮ್ಮದೇ ಆದ ಛಾಪನ್ನು ಮೂಡಿಸಬಲ್ಲ ಕೆಲವೇ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ಮುಂಬೈ ಕನ್ನಡಿಗರು ಹೆಸರಿಸಬಹುದಾದವರೆಂದರೆ, ನಮ್ಮ ಪ್ರೀತಿಯ ಗವರ್ನರ್ ಶ್ರೀ. ಎಸ್. ಎಮ್. ಕೃಷ್ಣರವರು. ನಯ, ವಿನಯ ಹಾಗೂ ತಮ್ಮ ಆಚಾರ ವಿಚಾರಗಳಿಂದ ನಮ್ಮೆಲ್ಲರಮೇಲೆ ಪ್ರಭಾವಬೀರಿರುವ ಅವರು, ಕೇಂದ್ರಕ್ಕೆ ಹೋಗಿ ಒಬ್ಬ ಮಂತ್ರಿಯಾಗಬಹುದು. ಇಲ್ಲವೇ ಒಬ್ಬ ಗವರ್ನರ್ ಆಗುವುದು ಖಂಡಿತ. ಅವರ ಮುಖ್ಯಮಂತ್ರಿ ಪದವಿಯ ಕಾಲದಲ್ಲಿ, ಅನೇಕ ಜನಹಿತ…
ಲೇಖಕರು: ವೈಭವ
ವಿಧ: Basic page
December 24, 2007
ಹಳೆಗನ್ನಡ ತಪ್ಪುಮಿದಂ ಒಪ್ಪುಮಿದಂ ಎಂತಿನಿತು ಪೇೞ್ವರ್ ಬಲ್ಲಿದರ್ ತಪ್ಪಿನೊಳೊಪ್ಪೊಪ್ಪಿನೊಳ್ ತಪ್ಪು ತೊಡರ್ಚು ತಪ್ಪೊಪ್ಪುಗಳುಂ ಬೇರೆ ಮಾೞ್ಪುದು ಸಯ್ತೇ ********** ಹೊಸಗನ್ನಡ ಇದು ತಪ್ಪು ಇದು ಒಪ್ಪು ಎಂದಿಶ್ಟೊಂದು ತಿಳಿದವರು ಹೇಳುತ್ತಾರೆ ಆದರೆ ತಪ್ಪಿನಲ್ಲೇ ಒಪ್ಪು, ಒಪ್ಪಿನಲ್ಲೇ ತಪ್ಪು ಹೊಂದಿಕೊಂಡಿರುವಾಗ ತಪ್ಪು ಮತ್ತು ಒಪ್ಪುಗಳನ್ನ ಈ ರೀತಿ ಬೇರೆ ಮಾಡುವುದು ಸರಿಯೇ?
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
December 24, 2007
ಮಾರಿತೊತ್ತಿಗ(ಕಾಳಿದಾಸ) ಸಕ್ಕದದ ಬಲು ಮೇಲ್ಮೆಯ ಕಬ್ಬಿಗರಲ್ಲೊಬ್ಬ. ತುಂಬ ರಸಿಕಗಬ್ಬಿಗರಲ್ಲಿ ಮೊದಲನೇಯ ಇಕ್ಕೆ ಮಾರಿತೊತ್ತಿಗನದೆ. ಆದರೆ ಇವನ ಹೊತ್ತಿನ ಬಗ್ಗೆ ಇನ್ನು ಹಲವು ಗೊಂದಲಗಳಿವಿಯಂತೆ. ಇತ್ತೀಚೆಗೆ ನಾನು ಅಯೊಳೆ(ಐಹೊಳೆ)ಗೆ ಹೋಗಿದ್ದಾಗ ನೋಡಿದ/ತಿಳಿದುಕೊಂಡ ೬-೭ ನೇ ನೂರೇಡಿನ ಶಾಸನದಲ್ಲಿ ಕಾಳಿದಾಸನನ್ನು ಹೊಗಳಿ ಬರೆದಿದ್ದಾರೆ. ಆದ್ದರಿಂದ ಅವನು ಆರನೇ ನೂರೇಡಿಗಿಂತ ಮೊದಲೇ ಇದ್ದ ಅಂತ ಹೇಳಬಹುದು. ಆದರೆ ಅವನು ಬೋಜರಸನ ಆಸ್ತಾನದಲ್ಲಿದ್ದ ಎಂಬ ಬಲವಾದ ನಂಬುಗೆಯಿದೆ('ಕವಿರತ್ನ ಕಾಳಿದಾಸ'…
ಲೇಖಕರು: shekarsss
ವಿಧ: Basic page
December 24, 2007
ಹಿಂದೆ ನೋಡದೆ ಎಂದೂ ಸಾಗಿ ಮುಂದೆ ಮುಂದೆ ಬೇಕಾದ್ದು ಬರಲಿ ಮತ್ತಷ್ಟು ಬೇಡದ್ದು ಇರಲಿ ಮಗದಷ್ಟು ಮುಟ್ಟಿದ್ದೆಲ್ಲ ಚಿನ್ನ ತೊಟ್ಟದ್ದೆಲ್ಲ ರನ್ನ ಸಕಲ ಸವಲತ್ತು ಸಾಕಷ್ಟು ದೌಲತ್ತು ಪಡೆದಾಗ ತೃಪ್ತಿ ಇರದಾಗ ಅತೃಪ್ತಿ ಎಲ್ಲಾ ಬಿಟ್ಟು ಕೊಟ್ಟಾಗ ಆತ್ಮ ಸಂತುಷ್ಟಿ
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
December 24, 2007
ಉಪಕಾರ. ಸಂತಾ ಸಿಂಗ್ ಯಾವುದೋ ಸಭೆಯಲ್ಲಿ ಭಾಗವಹಿಸಿದ್ದ. ಮುಖ್ಯ ಅಥಿತಿಗಳು ತುಂಬಾ ಚೆನ್ನಾಗಿ 'ನಾವು ಬೇರೆಯವರಿಗೆ ಉಪಾಕಾರ ಮಾಡಲು ಹಿಂಜರಿಯಬಾರದು'ಎಂದು ಮನದಟ್ಟುವಂತೆ ವಿವರಿಸಿದರು.ಸಂತಾಸಿಂಗ್ ತಾನೂ ಆದಷ್ಟೂ ಉಪಕಾರಿ ಆಗಬೇಕೆಂದು ನಿರ್ಧರಿಸಿದ.ಬರುವಾಗ ದಾರಿಯಲ್ಲಿ ಮನೆಯೊಂದರ ಮುಂದೆ ಜನ ಗುಂಪಾಗಿ ನೆರೆದಿದ್ದರು.ಕುತೂಹಲದಿಂದ ನುಗ್ಗಿ ನೋಡಿದರೆ-ಮನೆ ಬೆಂಕಿ ಹತ್ತಿ ಉರಿಯುತ್ತಿದೆ.ಒಳಗೆ ಮೂರು ಜನರಿರುವುದನ್ನು ಕಂಡ ಸಂತಾ, ಹಿಂದೆ ಮುಂದೆ ಯೋಚಿಸದೆ ಜೋರಾಗಿ.... "ದಾರಿ ಬಿಡಿ... ದಾರಿ ಬಿಡಿ"…
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
December 24, 2007
"ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು" "ಕ್ರಿಸ್‍ಮಸ್ ಎಂದರೆ... ...ಜೀಸಸ್......ಯೇಸು" ಅಂದರೆ "ಬೆಳಕು... .....ಬೆಳಕಾಗಿಸುವ ದಿವ್ಯತ್ಮ! ದೇವರು ಬೇರೆಯಲ್ಲ ,ಬೆಳಕು ಬೇರೆಯಲ್ಲ. ಅದಕ್ಕೆ ದೇವರಿಗೆ ದೀಪವೆಂದರೆ ಇಷ್ಟ, ಬೆಳಕೆಂದರೆ ಇಷ್ಟ! ಈ ಬೆಳಕು ಮೊಂಬತ್ತಿಯಿಂದಲೂ ಮೂಡಬಹುದು, ಹಣತೆಯಿಂದಲೂ ಮೂಡಬಹುದು. ನಮ್ಮ ಅಂತರಂಗದಲ್ಲಿ ಬೆಳಕಿದೆಯೆನ್ನುವುದನ್ನು ಮತ್ತೆ ಮತ್ತೆ ನೆನಪಿಸುವುದಕ್ಕೆ ಕ್ರಿಸ್‍ಮಸ್ ಬರುತ್ತದೆ. ಯೇಸುವಿನ ಹುಟ್ಟು ಎಂದರೆ ಬೆಳಕಿನ ಹುಟ್ಟು! ಅಲ್ಲಿಯ ತನಕ ಬೆಳಕು…
ಲೇಖಕರು: naasomeswara
ವಿಧ: ಬ್ಲಾಗ್ ಬರಹ
December 24, 2007
ಸಿರಿಭೂವಲಯವು ಕನ್ನಡ ಸಾಹಿತ್ಯದ ಒಂದು ಅಪೂರ್ವ ಗ್ರಂಥ. ಇದನ್ನು ಕುಮುದೇಂದು ಕವಿಯು ಕ್ರಿ.ಶ.೮೧೬ರಲ್ಲಿ ರಚಿಸಿದನು. ಕಾವ್ಯ ರಚನೆಯನ್ನು ನಾವು ಅಕ್ಷರಗಳಿಂದ ಮಾಡುತ್ತೇವೆ. ಕುಮುದೇಂದುವು ಅಕ್ಷರಗಳ ಬದಲು ಕನ್ನಡ ಅಂಕಿಗಳನ್ನು (೧-೯) ಬಳಸಿದ್ದಾನೆ. ಇದು ಅಂಕಾಕ್ಷರ ಕಾವ್ಯ. ಕನ್ನಡದ ೯ ಅಂಕಿಗಳನ್ನು ೬೪ ವಿಧದಲ್ಲಿ ಕ್ರಮಜೋಡಿಸಿ ಕಾವ್ಯವನ್ನು ರಚಿಸಿದ್ದಾನೆ. ೬೪ ಅಂಕಗಳನ್ನು ಚಕ್ರಗಳೆಂಬ ಚೌಕಗಳಲ್ಲಿ (೨೭*೨೭=೭೨೯ ಮನೆಗಳು) ತುಂಬಿದ್ದಾನೆ. ನಮಗೆ ಇದುವರೆಗೂ ೧೨೭೦ ಚಕ್ರಗಳು ಲಭಿಸಿವೆ.…
ಲೇಖಕರು: shekarsss
ವಿಧ: Basic page
December 24, 2007
ಗಾಳಿ ಮಾತು ಕಿವಿಗೆ ಬಿದ್ದು ಎಬ್ಬಿಸಿದೆ ಬಿರುಗಾಳಿ ಬೀಸಿ ಬೆಂಕಿಯ ಬಲೆ ಚಿತ್ತವ ಹೂತು ಕ್ರೋಧವ ಹೊತ್ತು ಮತಿಗೆಟ್ಟ ಗೂಳಿ ಸುತ್ತುವ ಸುಂಟರಗಾಳಿ ಎಲ್ಲೆಡೆ ಕಗ್ಗತ್ತಲು ಕವಿದು ಕಳೆದು ಹೋಗುವ ಮುನ್ನ ಕಣ್ತೆರೆದು ಒಂದು ಕ್ಷಣ ಕಾಣೋ ಕನ್ನಡಿ ಜಾಣ
ಲೇಖಕರು: prem_poo gour
ವಿಧ: ಬ್ಲಾಗ್ ಬರಹ
December 24, 2007
ನೀನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು, ಮಾಗೀಲ್ ಉಲ್ ಮೇಲ್ ಮಲಗಿದ್ದಂಗೆ ಮಂಜು, ಮಾಗಿ ಮುಗ್ತು, ಬೇಸ್ಗೆ ನುಗ್ತು, ಇದ್ಕಿದ್ದಂಗೆ ಮಾಯ್‌ವಾಗೋಯ್ತು ಮಂಜೂ.... ನಂಗು-ನಿಂಗು ಎಂಗಾಗೋಯ್ತು ನಂಜು... ನನ್ನ ಇಷ್ಟದ ಕವಿ "ರತ್ನ"ನ ಈ ಪದ ನನ್ನ ಬದುಕಿಗೆ, ನನ್ನ ಪ್ರೀತಿಗೆ ಪೂರಕವೇನೋ ಅನಿಸುತ್ತಿದೆ. ನಂಜು ಅನ್ನೋಳು ಅವರ ಹೆಂಡತಿ, ಹಟ್ಟಿ ಅನ್ನೋದು ಅವರ ಮನೆ ಮತ್ತು ಅದರ ಸುತ್ತಲಿನ ಪರಿಸರ, ಮಾಗಿ ಅನ್ನೋದು ಛಳಿಗಾಲ. ಅವರ ಹೆಂಡತಿ…
ಲೇಖಕರು: venkatesh
ವಿಧ: Basic page
December 24, 2007
ನಾವ್ಯಾಕ್ ಹೀಗೆ ಅಂತ ನಮಗೆಲ್ಲ ಒಂದ್ಸರ್ತಿಆದ್ರು ಅನ್ಸೊದ್ ಸಹಜ. ಯೇನ್ ಮಾಡೊದ್ ಹೇಳಿ. ನಮ್ ರಾಜ್ಯದ ಪರಿಸ್ಥಿತಿ, ಸರ್ಯಾಗ್ ಹೇಳ್ಬೇಕು ಅಂದ್ರೆ. ನಮ್ ದೊಗ್ನಾಳ್ ಮುನ್ಯಪ್ಪನವರು ಹೇಳೊಹಾಗೆ, " ಕರ್ ನಾಟ್ಕ", ಸರ್ಯಾಗಿದೆ. ನಮ್ಮವರೆಲ್ಲ ನಾಟ್ಕ ಮಾಡಕ್ ಸರಿಯಾಗಿದಾರೆ. ಹೇಳ್ಮಾಡ್ಸಿದ್ ತರ್ಹ. ಯಾಕಂತಿರೊ, ಇಲ್ಲಿರೊ ಅನಿರ್ದಿಷ್ಟತೆ ಎಲ್ಲು ಇಲ್ಲ. ಬಿಹಾರನು ವಾಸಿ ಅನ್ಸತ್ತೆ. ಇಲ್ಲಿ ಎಲ್ಲ ಇದೆ. ಸರ್ಕಾರನೆ ಇಲ್ಲ. ಎಂಥ ವಿಪರ್ಯಾಸ. ಮೂಲಭೂತ ಸೌಕರ್ಯಗಳ್ನ್ ಕೇಳೊದ್ ಯಾರ್ನ ? ತಮಿಳ್ನಾಡ್ನೆ ನೋಡಿ…