ಕನ್ನಡ ಬರದ ದೇವರುಗಳು
- ಕನ್ನಡ ಬರದ ದೇವರುಗಳು By: gvmt (Jan 11 2006 - 10:03pm)
- ಕನ್ನಡ ಬರದ ದೇವರುಗಳು By: mahesha (Apr 5 2007 - 3:09pm)
- Re: ಕನ್ನಡ ಬರದ ದೇವರುಗಳು By: kannadiga_1956 (Dec 3 2006 - 11:50pm)
- ದೇವರಿಗೆ ಖಂಡಿತ ಕನ್ನಡ ಬರುತ್ತೆ By: Sunil Jayaprakash (Jan 11 2006 - 7:12pm)
- 'ಕನ್ನಡದಲ್ಲಿಯೆ ಬಿನ್ನಹಗೈಡೊದೆ' ಅಲ್ಲ By: shreekant.mishrikoti (Jan 12 2006 - 12:39pm)
- Re: 'ಕನ್ನಡದಲ್ಲಿಯೆ ಬಿನ್ನಹಗೈಡೊದೆ' ಅಲ್ಲ By: srivathsajoshi (Jan 12 2006 - 6:15pm)
- 'ಕನ್ನಡದಲ್ಲಿಯೆ ಬಿನ್ನಹಗೈಡೊದೆ' ಅಲ್ಲ By: shreekant.mishrikoti (Jan 12 2006 - 12:39pm)

RSS:
ಕನ್ನಡ ಬರದ ದೇವರುಗಳು
> ಕನ್ನಡ ಬರದ ದೇವರುಗಳು ನಮಗೆ ಬೇಕೆ ??
ದೇವರು ಸರ್ವಶಕ್ತ ಎನ್ನುವುದನ್ನು ನಂಬುವವರಾದರೆ "ಕನ್ನಡ ಬರದ ದೇವರು" ಎನ್ನುವುದರಲ್ಲಿ ಅರ್ಥವಿಲ್ಲ.
ದೇವರು ಸರ್ವಶಕ್ತನಲ್ಲ ಎಂದಾದರೆ ಆ ದೇವರು ನಮಗೆ ಇದ್ದೂ ಪ್ರಯೋಜನವಿಲ್ಲ.
ದೇವರ ಬಗೆಗಿನ ನಮ್ಮ ನಮ್ಮ ತಪ್ಪು ತಿಳಿವಳಿಕೆಯನ್ನು ದೇವರಿಗೆ ಆರೋಪಿಸಿವುದು ಸಾಮಾನ್ಯ; ಅರ್ಥಹೀನ, ಆದರೆ ಸಾಮಾನ್ಯ.
> ನಮ್ಮ ಮೂರ್ಖ ಜನ ಅದನ್ನು ನಂಬುತ್ತಾರೆ.
ಸಹಜ ತಾನೆ? "ನಮ್ಮ ದೇವರಿಗೆ ಇದೊಂದು ಭಾಷೆ ಮಾತ್ರ ತಿಳಿಯುವುದು" ಎನ್ನುವವರು ಬೇರೊಂದು ದೇವರಿಗೆ ಅವರ ಭಾಷೆ ತಿಳಿಯದು ಎಂದರೆ ನಂಬಲಾರರೆ? ಎಲ್ಲ ಜನರೂ ಮೂರ್ಖರೆ.
> ಕನ್ನಡ ಅನೇಕ ಚಳುವಳಿಗಳು ಮತ್ತು ಹೋರಾಟಗಳು ಜಾತಿ-ಧರ್ಮದಿಂದ ಸತ್ತಿವೆ ಅಂದರೆ ತಪ್ಪಾಗಲಾರದು.
ಯಾಕಾಗಲಾರದು? ಕನ್ನಡ ಸತ್ತಿದೆಯೆ? ಸತ್ತಿದ್ದರೆ ಸಾವಿಗೆ ಚಳಿವಳಿ, ಜಾತಿ ಧರ್ಮಗಳೇ ಕಾರಣವೆ? ಹೇಗೆ?
ಎಲ್ಲರೂ ಸಾಮಾನ್ಯವಾಗಿ ಮಾಡುವ ತಪ್ಪನ್ನು ನೀವೂ ಮಾಡುತ್ತಿದ್ದೀರಿ ಎಂದೆನಿಸುತ್ತೆ - ಭಾಷೆ, ಸಂಸ್ಕೃತಿಗಳಿಗೂ ಮತಕ್ಕೂ ಸಂಬಂಧವಿಲ್ಲ; ಮತಕ್ಕೂ ಧರ್ಮಕ್ಕೂ ಸಂಬಂಧವಿಲ್ಲ. ಇವನ್ನು ಒಟ್ಟಾಗಿಯೋ ಬೇರೆಬೇರೆಯಾಗಿಯೋ ಗಂಟುಹಾಕುವುದು ಸರಿಯಲ್ಲ.