24
October
2014

ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

ಸಂಪದಿಗರಿಗೆ ಆತ್ಮೀಯ ಆಹ್ವಾನ

November 24, 2012 - 3:38pm
kavinagaraj
4

ಆತ್ಮೀಯ ಸಂಪದಿಗ ಮಿತ್ರರೇ,

     ನನ್ನ ಸೇವಾಕಾಲದ ಅನುಭವಗಳನ್ನು 'ಸೇವಾಪುರಾಣ' ಶೀರ್ಷಿಕೆಯಲ್ಲಿ ಸರಣಿ ಲೇಖನಗಳಾಗಿ ಪ್ರಕಟಿಸಿದಾಗ ಸಿಕ್ಕ ನಿಮ್ಮೆಲ್ಲರ ಪ್ರೋತ್ಸಾಹವನ್ನು ನಾನು ಮರೆಯಲಾರೆ. ಅದರಲ್ಲೂ ತುರ್ತು ಪರಿಸ್ಥಿತಿ ಕಾಲದ ನನ್ನ ಅನುಭವಗಳಿಗೆ ತೋರಲಾದ ಸ್ಪಂದನ,  ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಮಾಡಿದ ಒತ್ತಾಯ ಸಹ ನನ್ನನ್ನು ಪುಳಕಿತಗೊಳಿಸಿತ್ತು. ಈಗ ಅದಕ್ಕೆ ಸಮಯ ಒದಗಿ ಬಂದಿದೆ. 'ಸರಳುಗಳ ಹಿಂದಿನ ಲೋಕ' ಎಂಬ ಹಿಂದಿನ ಶೀರ್ಷಿಕೆ ಬದಲಿಗೆ ಸಂಪದಿಗ ಹರಿಹರಪುರ ಶ್ರೀಧರ್ ಸಲಹೆಯಂತೆ  'ಆದರ್ಶದ ಬೆನ್ನು ಹತ್ತಿ . . " ಎಂಬ ಶೀರ್ಷಿಕೆ ಹೊತ್ತ ಪುಸ್ತಕ ದಿನಾಂಕ 29-11-2012 ರಂದು ಹಾಸನದ ರವೀಂದ್ರನಗರದ ಶ್ರೀ ರಾಮಕೃಷ್ಣ ವಿದ್ಯಾಲಯದ ಸಭಾಂಗಣದಲ್ಲಿ ಸಾ. 6-00ಕ್ಕೆ ಬಿಡುಗಡೆಯಾಗಲಿದೆ. ತುರ್ತು ಪರಿಸ್ಥಿತಿಯಲ್ಲಿ ಆಂತರಿಕ ಭದ್ರತಾ ಶಾಸನದ ಅನ್ವಯ ಬಂದಿಯಾಗಿದ್ದ ಅರಸಿಕೆರೆಯ ಶ್ರೀ ಕೆ.ಎನ್. ದುರ್ಗಪ್ಪ ಶ್ರೇಷ್ಠಿಯವರು ಪುಸ್ತಕದ ಲೋಕಾರ್ಪಣೆ ಮಾಡಲಿದ್ದಾರೆ.

     ವಿಶೇಷವೆಂದರೆ, ಹಾಸನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಆಂದೋಲನದಲ್ಲಿ ಭಾಗವಹಿಸಿದವರೆಲ್ಲರನ್ನೂ ಒಟ್ಟುಗೂಡಿಸಿ ಅಂದು ಮ. 4-00 ರಿಂದ 6-00 ರವರೆಗೆ ಸಮಾವೇಶ ನಡೆಸಲು ನಮ್ಮದೇ ಆದ ಮಂಥನ ವೇದಿಕೆಯಿಂದ ವ್ಯವಸ್ಥೆಯಾಗಿದೆ. ರಾ.ಸ್ವ.ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರು ಕರ್ನಾಟಕದಲ್ಲಿ ನಡೆದ ಐತಿಹಾಸಿಕ ಆಂದೋಲನದ ನೆನಪು ಮಾಡಿಕೊಡಲಿದ್ದಾರೆ. ಸಮಾವೇಶದಲ್ಲಿ ಪಾಲುಗೊಂಡವರು ತಮ್ಮ ಸಿಹಿ-ಕಹಿ ನೆನಪುಗಳನ್ನು ಮೆಲುಕು ಹಾಕಲಿದ್ದಾರೆ.

     ಸಂಪದಿಗ ಮಿತ್ರರೆಲ್ಲರಿಗೂ ಇದು ನನ್ನ ಆತ್ಮೀಯ ಆಹ್ವಾನ. ಬನ್ನಿ, ಜಾಗರಣ ಕಾರ್ಯದಲ್ಲಿ ಪಾಲುಗೊಳ್ಳಿ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by H A Patil on
ಕವಿ ನಾಗರಾಜ ರವರಿಗೆ ವಂಧನೆಗಳು ' ಆದರ್ಶದ ಬೆನ್ನು ಹತ್ತಿ ' ಪುಸ್ತಕದ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಲಿ, ತಮಗೆ ಶುಭ ಹಾರೈಕೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by smurthygr on
+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on
ವಂದನೆಗಳು, ಪಾಟೀಲರೇ ಮತ್ತು ಮೂರ್ತಿಯವರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swara kamath on
ಕವಿ ನಾಗರಾಜರಿಗೆ ನಮಸ್ಕಾರಗಳು. ತಮ್ಮ ಸೇವಾವಧಿಯಲ್ಲಿನ ವಿಶೇಷವಾಗಿ ತುರ್ತು ಪರಿಸ್ಥಿತಿಯ ಕಾಲಾವಧಿಯ ಅನುಭವವನ್ನು ಪುಸ್ತಕ ರೂಪದಲ್ಲಿ ನಮಗೆ ಓದಲು ಅನುವು ಮಾಡಕೋಡುವ ಕಾರ್ಯಕ್ರಮಕ್ಕೆ ಕರೆಯೋಲೆ ನೀಡಿರುವ ನಿಮಗೆ ಧನ್ಯವಾದಗಳು. ಕಾರ್ಯಕ್ರಮಕ್ಕೆ ನಾನು ಹೃತ್ಪೂರಕ ಶುಭ ಹಾರೈಕೆಯನ್ನು ಕೋರುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on
ಧನ್ಯವಾದಗಳು ಸ್ವರ ಕಾಮತರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swara kamath on
ಕವಿ ನಾಗರಾಜರಿಗೆ ನಮಸ್ಕಾರಗಳು. ತಾವು 'ಆದರ್ಶದ ಬೆನ್ನತ್ತಿ" ಪುಸ್ತಕದ ಕುರಿತು ಪಾರ್ಥಅವರ ವಿಮರ್ಶಾತ್ಮಕ ಲೇಖನಕ್ಕೆ ಪ್ರತಿಕ್ರಿಯಿಸುವಾಗ ,ಪುಸ್ತಕವನ್ನ ಅಪೇಕ್ಷಿಸುವರು 50/-ರೂಪಾಯಿಯನ್ನು ಕಳಿಸಿದರೆ ಪುಸ್ತಕ ಕಳಿಸುವಿರಾಗಿ ತಿಳಿಸಿದ್ದಿರಿ. ಅಂತೆಯೆ ನಾನು ತಮ್ಮ ವಿಳಾಸಕ್ಕೆ ಹಣ ಕಳಿಸಿದ್ದೇನೆ. ದಯವಿಟ್ಟು ಪುಸ್ತಕ ಕಳುಹಿಸಿ. ವಂದನೆಗಳು.............ರಮೇಶ್ ಕಾಮತ್,ರಿಪ್ಪನ್ ಪೇಟೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
ಕವಿ ನಾಗರಾಜರೆ, ಶುಭಾಶಯಗಳು. ಹೊಸದಾಗಿ ಸಂಪದ ಸೇರಿದವರಿಗೆ, ಕವಿನಾಗರಾಜರು ಬರೆದ "ಸರಳುಗಳ ಹಿಂದಿನ ಲೋಕ" ಸರಣಿಯ ಒಂದು ಲೇಖನದ ಕೊಂಡಿ- http://sampada.net/a...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on
ಆತ್ಮೀಯ ಗಣೇಶರೇ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by saraswathichandrasmo on
ಕವಿ ನಾಗರಾಜ ರವರಿಗೆ ವಂಧನೆಗಳು ಹಾಗು ಶುಭ ಹಾರೈಕೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on
ವಂದನೆಗಳು, ಸರಸ್ವತಿಯವರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by jayaprakash M.G on
ತುರ್ತುಪರಿಸ್ಥಿತಿಯ ತುರಂಗವಾಸದ ಪ್ರಸಂಗಗಳು ಕೆಲವೇ ವ್ಯಕ್ತಿಗಳಿಗೆ ಸಿಕ್ಕ ಅದ್ಭುತ ಕ್ಷಣಗಳು. ಸಂಘರೂಪದ ಆದರ್ಶದ ಬೆನ್ನುಹತ್ತಿದ ಸಾರ್ಥಕಜೀವಿ ನಾಗರಾಜರವರಿಗೆ ಶುಭವಾಗಲಿ. ಕಿರಿಯರಿಗೆ ಸ್ಪೂರ್ತಿ ನೀಡುವ ಸಾಹಸಗಾಥೆಗಳು, ಸಹಬಂಧಿತ ಸ್ವಯಂಸೇವಕರಿಗೆ ಸಾಹಸ ಕ್ಷಣಗಳ ನೆನೆಪಿನ ಸಿಂಚನದ ರೋಮಾಂಚನ, ಬಳ್ಳಾರಿಯ ಕೇಂದ್ರಕಾರಾಗೃಹದಲ್ಲಿ ಅತಿ ಹೆಚ್ಚು ಸಂಖೆಯ ಸ್ವಯಂಸೇವಕರನ್ನು ಬಂಧಿಸಿಡಲಾಗಿತ್ತು' ಅತೀ ಚಿಕ್ಕವಯಸ್ಸಿನ(11-12 ವರ್ಷ) ಶಿವಮೊಗ್ಗದ ಡಾಂಗೆ ಕೂಡಾ ಬಂಧಿತರಾಗಿದ್ದುದು ಬಳ್ಳಾರಿಯ ಜೈಲಿನ ವಿಶೇಷ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on
ವಂದನೆಗಳು, ಜಯಪ್ರಕಾಶರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on
ಶುಭ ಹಾರೈಕೆಗಳು ನಾಗರಾಜ್ ರವರೇ ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on
ವಂದನೆಗಳು, ಸತೀಶರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on
ಅಭಿನ0ದನೆಗಳು, ಅ0ತೆಯೆ ಶುಭಹಾರೈಕೆಗಳು ಮೂಢಕವಿ ನಾಗರಾಜರಿಗೆ,..... ಧನ್ಯವಾದಗಳು. ‍ರಾಮೋ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on
ನಮೋ, ರಾಮೋ ರವರಿಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on
ಹಿರಿಯರೇ ನಮ್ಮೆಲ್ಲರ ಒತ್ತಾಸೆಯಂತೆ ನಿಮ್ಮನುಭವದ ಬುಟ್ಟಿಯಲ್ಲಿನ ರೋಚಕ ಸಂಗತಿ ಕ್ಷಣಗಳನ್ನ ಅಕ್ಷರ ರೂಪಕ್ಕೆ ಇಳಿಸಿ ಪುಸ್ತಕ ಹೊರ ತಂದದ್ದು ಕೇಳಿ ಖುಷಿ ಆಯ್ತು.. ಆ ಪುಸ್ತಕ ನನಗೂ ಬೇಕು.. ಅದು ದೊರೆಯುವ ಸ್ಥಳ(ಬೆಂಗಳೂರು) ತಿಳಿಸಿದರೆ ತರುವೆ.. ಖುಷಿಯ ವಿಚಾರ ಹಂಚಿಕೊಂಡದ್ದಕ್ಕೆ ನನ್ನಿ ಶುಭವಾಗಲಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಟ್ವಿಟ್ಟರಿನಲ್ಲಿ ಸಂಪದ