ಬ್ರಹ್ಮಾಂಡರ ಬೇಟಿ - ಬ್ರಹ್ಮಾಂಡರ ಮೇಲೆ ಶನಿದೇವರ ವಕ್ರದೃಷ್ಟಿ

ಬ್ರಹ್ಮಾಂಡರ ಬೇಟಿ - ಬ್ರಹ್ಮಾಂಡರ ಮೇಲೆ ಶನಿದೇವರ ವಕ್ರದೃಷ್ಟಿ

ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಮೇಲೆ ಶನಿದೇವರ ವಕ್ರದೃಷ್ಟಿ

ಇಲ್ಲಿಯವರೆಗೂ....
ಎಂದಿಗೂ ನಿಮ್ಮ ಮೇಲೆ ನಾನು ನೇರ ದೃಷ್ಟಿಯನ್ನು ಬೀರುವದಿಲ್ಲ  ಎಂದು ಶನಿದೇವ ಬ್ರಹ್ಮಾಂಡರಿಗೆ ವರ ಕೊಟ್ಟಾಯ್ತು, 
ಗಣೇಶರು ವರ ಪಡೆದ ಸಂತಸದಿಂದಿರುವಾಗಲೆ ಕನಸು ಮಾಯವಾಗಿ ಎಚ್ಚರವಾಗಿತ್ತು, ಗಣೇಶರಿಗೆ.

ಮುಂದುವರೆದಿದೆ...

ಗಣೇಶರು ತಮ್ಮ ಕನಸನ್ನೆಲ್ಲ ವಿವರಿಸಿ, ಖುಷಿಯಲ್ಲಿ ಶ್ರೀನಾಥರನ್ನು ಕುರಿತು ಹೇಳಿದರು

’ನೋಡಿದೆಯೇನ್ನಪ್ಪ , ನಮ್ಮ ಲೀಲೆ,ನಮಗೆ ದೈವದ ಸಹಾಯವಿದೆ ಹಾಗಾಗಿ ಜನರು ಗುಂಪು ಗುಂಪಾಗಿ ನಮ್ಮ ಹತ್ತಿರ ಬರುತ್ತಿದ್ದರು’

 

ಶ್ರೀನಾಥ ಕೇಳಿದರು

’ಸರಿ ಅಷ್ಟೊಂದು ಜನ ನಿಮ್ಮ ಹತ್ತಿರ ಬರುತ್ತಿರುವಾಗಲು, ಜನ ಕಡಿಮೆ ಆಯ್ತೆಂದು ಪ್ರಸಿದ್ದಿಗೆ ಬರಬೇಕೆಂದು ನೀವು ಅದೇಕೆ ಜಯಂತನ ಸಹಾಯ ಕೇಳಿದಿರಿ’

ಬ್ರಹ್ಮಾಂಡರು ಸಪ್ಪೆಯಾಗಿ ನುಡಿದರು.

’ಅದೇ ನೋಡು ನಾನು ತಪ್ಪು ಮಾಡಿದ್ದು, ಸುಮ್ಮನೆ ಇದ್ದಿದ್ದರೆ ಆಗ್ತಿತ್ತು, ಬೇರೆ ಆಶ್ರಮಗಳ ಹೆಸರೆಲ್ಲ ಪ್ರಸಿದ್ದಿಯಾಗಿ ದಿನ ನಿತ್ಯ ಮಾಧ್ಯಮಗಳಲ್ಲಿ , ಪತ್ರಿಕೆಗಳಲ್ಲಿ ಬರುತ್ತಿರುವಾಗ , ನನಗೆ ತಲೆ ಕೆಟ್ಟಂತೆ ಆಯಿತು, ಸ್ವಲ್ಪ ಹೊಟ್ಟೆ ಉರಿ ಎಂದು ಬೇಕಾದರು ಅನ್ನು , ನಮ್ಮ ಹೆಸರು ಎಲ್ಲಿಯು ಹೆಚ್ಚು ಪ್ರಚಲಿತವಾಗುತ್ತಿಲ್ಲವಲ್ಲ ಎಂದು . ಅದೇ ಸಮಯಕ್ಕೆ ಜಯಂತ ಬಂದು ನನ್ನ ತಲೆ ಕೆಡಸಿದ , ಅವನು ಹರಡಿದ ಬಲೆಯಲ್ಲಿ ನಾನು ಬಿದ್ದೆ’

ಶ್ರೀನಾಥರು ಯೋಚನೆಗೆ ಬಿದ್ಧು ಹೇಳಿದರು,

’ನೋಡು ಗಣೇಶ, ನೀನು ಎಡವಿಬಿಟ್ಟೇ  ಎಂದೇ ಅನ್ನಿಸುತ್ತಿದೆ, ಕಡೆಗೆ ವರ ಕೇಳುವಾಗಲು ಶನಿದೇವರ ಬಳಿ ಸರಿಯಾಗಿ ವರ ಕೇಳಲಿಲ್ಲ ಬಿಡು’

ಗಣೇಶ ಉರುಫ್ ಬ್ರಹ್ಮಾಂಡರು ಅದುರಿಬಿದ್ಧರು .

’ಏನು ಹೇಳ್ತಾ ಇದ್ದೀಯಪ್ಪ, ನಾನು ಅಂತ ತಪ್ಪು ವರ ಏನು ಕೇಳಿರುವೆ’

’ಮತ್ತೇನಯ್ಯ, ಶನಿ ದೇವರ ಹತ್ತಿರ ಹೋಗಿ ಹೋಗಿ ನೇರದೃಷ್ಟಿ ಬೀರಬಾರದು ಎಂದು ವರ ಪಡೆದು ಬಂದಿರುವಿ, ಆದರೆ ಶನಿದೇವ ನಿನ್ನ ಮೇಲೆ ವಕ್ರದೃಷ್ಟಿ ಬೀರಲ್ಲ ಅಂತ ಹೇಳಿಲ್ಲವಲ್ಲ. ನನಗೆ ತಿಳಿದಂತೆ ಈಗ ಅದೇ ಆಗಿರುವುದು. ಆ ಶನಿಮಹರಾಯ ನಿನ್ನ ಮೇಲೆ ವಕ್ರನಾಗಿದ್ದಾನೆ ಅನ್ನಿಸುತ್ತೆ, ಹಾಗಾಗಿ ಇಂತಹ ಕಷ್ಟ ಅಪವಾದಗಳಿಗೆ ಸಿಕ್ಕಿಬಿದ್ದಿದೀಯ’

ಎಲ್ಲರಿಗೂ ಭವಿಷ್ಯ ಹೇಳಿ  ಹೆದರಿಸುತ್ತಿದ್ದ ಗಣೇಶರು, ಈಗ ಶ್ರೀನಾಥ ಮಾತಿಗೆ  ಏನು ಹೇಳಲು ತೋಚದೆ ಕುಳಿತುಬಿಟ್ಟರು.

’ಹೌದಾ ಹಾಗೆ ಹಾಗಿರಬಹುದಾ ’ ಎನ್ನುವ ಯೋಚನೆ,

’ಅಯ್ಯೋ ದಿನ ನಿತ್ಯ ಭವಿಷ್ಯ ಹೇಳುವ ನನಗೆ ಇದು ತೋಚಲಿಲ್ಲವಲ್ಲ, ಅದಕ್ಕೆ ನಮ್ಮ ಜಾತಕ ನಾವೆ ನೋಡಬಾರದು ಅನ್ನುತ್ತಾರೇನೊ, ಅಲ್ಲ ನೇರ ದೃಷ್ಟಿ ಬೀಳಬಾರದು ಅಂದರೆ ವಕ್ರ ದೃಷ್ಟಿ ಬೀರುತ್ತೇನೆ ಅನ್ನುವ ಶನಿಯ ಮಾತು ನನಗೆ ಅರ್ಥವೇ ಆಗಲಿಲ್ಲವೆ, ಬುದ್ಧಿಗೆ ಮಂಕು ಕವಿಯಿತೆ. ಎಂತಹ ಕೆಲಸವಾಯಿತು, ಈಗ ಈ ಕಷ್ಟಗಳಿಂದ ಹೇಗೆ ಹೊರಬರುವುದು’

ಎಂದೆಲ್ಲ ಯೋಚಿಸಹತ್ತಿದರು.

ಶ್ರೀನಾಥ ನಗುತ್ತ ಹೇಳಿದರು

’ಯೋಚಿಸ ಬೇಡಪ್ಪ, ಅದಕ್ಕೆ ನಾನು ಪರಿಹಾರ ಹೇಳುತ್ತೇನೆ ’

ಗಣೇಶರಿಗೆ ಆಶ್ಚರ್ಯ, ಏನು ಶ್ರೀನಾಥ ಸಹ ಜಾತಕ ದೋಷಕ್ಕೆ ಪರಿಹಾರ ಹೇಳುವನೆ ಎಂದು,

’ನೋಡು ನಿನ್ನ ಮೇಲೆ ಶನಿಯ ವಕ್ರದೃಷ್ಟಿ ಇದ್ದ ಹಾಗಿದೆ, ಅಲ್ಲದೆ ನೀನು ಮಾಡದೇ ಇರುವ ತಪ್ಪಿಗೆ ಸಿಕ್ಕಿಹಾಕಿಕೊಂಡಿರುವೆ ಅಂದರೆ ರಾಹುವಿನ ಪ್ರಭಾವ ನಿನ್ನ ಜಾತಕದ ಮೇಲೆ ಸಾಕಷ್ಟಿದೆ, ಅದಕ್ಕಾಗಿ ಪರಿಹಾರ ಹೇಳುವೆ . ಮಹಾರಾಷ್ಟ್ರದ ಶಿರಡಿ ಹತ್ತಿರ ಶನಿಸಿಂಗಾಪುರ ಎನ್ನುವ ಸ್ಥಳವಿದೆ, ಅಲ್ಲಿ ಶನಿ ನೆಲೆನಿಂತಿದ್ದಾನೆ, ಉದ್ಭವ ಮೂರ್ತಿ, ಒಮ್ಮೆ ಅಲ್ಲಿ ಹೋಗಿ ಮೂರು ದಿನ ಸೇವೆ ಮಾಡು, ದಿನ ನಿತ್ಯ, ಅವನಿಗೆ  ಮುವತ್ತೊಂದು ಲೀಟರ್ ಎಳ್ಳೆಣ್ಣೆಯನ್ನು ಅರ್ಪಿಸು. ಹಾಗೆ ಮತ್ತೊಂದು ಕೆಲಸ ಮಾಡು ತಮಿಳುನಾಡಿನ ಕುಂಭಕೋಣಂ ಹತ್ತಿರ ತಿರುನಾಗೇಶ್ವರ ಎನ್ನುವ ತೀರ್ಥಕ್ಷೇತ್ರ ವಿದೆ, ಅಲ್ಲಿ ನಾಗನಾಥಸ್ವಾಮಿ ದೇವಾಲಯದಲ್ಲಿ ರಾಹು ನೆಲೆಸಿದ್ದಾನೆ, ಅಲ್ಲಿ ಹೋಗಿ ಹನ್ನೊಂದು ದಿನ ಪೂಜೆ ಮಾಡು ನಿನ್ನ ಕಷ್ಟಗಳೆಲ್ಲ ಪರಿಹಾರವಾಗಿ ಮೊದಲಿನಂತೆ ನೆಮ್ಮದಿ ನೆಲಸುತ್ತೆ ’

ಎಂದು ನಗುತ್ತ ಹೇಳಿದರು ಶ್ರೀನಾಥ,

’ಏನು ನೀನು ನಿಜಕ್ಕೂ ಹೇಳ್ತಿದ್ದೀಯೇನಪ್ಪ, ನೀನು ಹೇಗಾದರು ಹೇಳು ನಿನ್ನ ಬಾಯಲ್ಲಿ ಆ ಶನಿಯೇ ನುಡಿಸಿದ್ದಾನೆ ಎಂದು ಭಾವಿಸಿ, ನೀನು ಹೇಳಿದಂತೆ ಸೇವೆ ಮಾಡಿ ಬಂದು ಬಿಡುತ್ತೇನೆ, ಹೇಗಿದ್ದರು, ಇಲ್ಲಿ ಇರುವಂತಿಲ್ಲ ಪೋಲಿಸರು ಬೆನ್ನು ಹತ್ತಿದ್ದಾರೆ’ ಎಂದರು ಗಣೇಶ.

ಶ್ರೀನಾಥರು ಮತ್ತೆ

’ನೋಡಪ್ಪ ಅಷ್ಟೆ ಅಲ್ಲ , ಇದರ ಜೊತೆಗೆ ನಾನು ನಿನಗೆ ಲೌಕಿಕವಾದ ಒಂದು ಉಪಾಯವನ್ನು ಹೇಳುತ್ತೇನೆ ಅದರಂತೆ ಮಾಡು, ನಿನ್ನ ಕಷ್ಟಗಳೆಲ್ಲ ಪರಿಹಾರವಾಗಿ,  ಆ ಇಬ್ಬರು ಅಪರಾದಿಗಳು ಸಹ ಪೋಲಿಸರ ವಶವಾಗುವರು’

ಎಂದು ಹೇಳಿ,

ಗಣೇಶರ ಕಿವಿಯಲ್ಲಿ ಗುಟ್ಟಾಗಿ ಒಂದು ಉಪಾಯವನ್ನು ಸೂಚಿಸಿದರು. ಆ ಉಪಾಯವನ್ನು ಕೇಳುತ್ತಿರುವಂತೆ ಗಣೇಶರ ಮುಖ ಅರಳಿ ಅಗಲವಾಯಿತು. ಆನೆಯ ಕಿವಿಯಂತಹ ಕಿವಿಗಳು ಚಾಮರದಂತೆ ಬೀಸಿ ಪಟ ಪಟ ಹೊಡೆದುಕೊಂಡವು

 

ಕೊನೆಯ ಬಾಗವನ್ನು ಎಲ್ಲ ಓದುಗರು ಊಹೆ ಮಾಡುತ್ತ ಇರಿ !! :-)

ಶ್ರೀನಾಥ ವಿದೇಶಕ್ಕೆ ಹೊರಟಿದ್ದಾರೆ ಕಳಿಸಿ ಬರುತ್ತೇನೆ .

 

ಕಡೆಯ ಬಾಗ :

ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಆಶ್ರಮದಲ್ಲಿ ಜನಸಾಗರ

 

Rating
No votes yet

Comments

Submitted by ಗಣೇಶ Sun, 12/21/2014 - 00:31

>> ಅಲ್ಲಿ ಶನಿ ನೆಲೆನಿಂತಿದ್ದಾನೆ, ಉದ್ಭವ ಮೂರ್ತಿ, ಒಮ್ಮೆ ಅಲ್ಲಿ ಹೋಗಿ ಮೂರು ದಿನ ಸೇವೆ ಮಾಡು, ದಿನ ನಿತ್ಯ, ಅವನಿಗೆ ಮುವತ್ತೊಂದು ಲೀಟರ್ ಎಳ್ಳೆಣ್ಣೆಯನ್ನು ಅರ್ಪಿಸು...
-ಶ್ರೀನಾಥರು ನಮ್ಮೊಂದಿಗಿದ್ದ ಕೆಲ ಕ್ಷಣದಲ್ಲೇ ಹೀಗೆ ಹೇಳುವಷ್ಟು ನುರಿತರಾಗಿದ್ದಾರೆ...ಅಮೆರಿಕಾದಲ್ಲೊಂದು ಬ್ರ್ಯಾಂಚ್ ಸ್ಥಾಪಿಸಿ ಅವರನ್ನು ಹೆಡ್ ಮಾಡಿ ಒಬಾಮಾಗೆ ಸಲಹೆಗಾರರನ್ನಾಗಿಸಿದರೆ ಹೇಗೆ?:)
ಪಾರ್ಥರೆ, ದೇವರು ಭೂಮಿ ಮೇಲೆ ಅವತರಿಸಿದಾಗ ಮಾನವ ಸಹಜ ಕಷ್ಟ ಸುಖಗಳು ಅವನನ್ನು ಬಾಧಿಸುವಂತೆ, ಸಂಪದದ ಓದುಗರಾದಾಗ ನಮಗೆ ನಮ್ಮ ಕತೆಯೇ ಮರೆತು ಹೋಗಿ, ಕೊನೆಯ ಭಾಗದ ಬಗ್ಗೆ ಊಹೆ ಮಾಡುತ್ತಾ ಇದ್ದೇವೆ...:(
>>ಗಣೇಶರ ಮುಖ ಅರಳಿ ಅಗಲವಾಯಿತು. ಆನೆಯ ಕಿವಿಯಂತಹ ಕಿವಿಗಳು ಚಾಮರದಂತೆ ಬೀಸಿ ಪಟ ಪಟ ಹೊಡೆದುಕೊಂಡವು. -ಜತೆಗೆ ಕಣ್ಣುಗಳೂ ಪಟಪಟ ಹೊಡಕೊಂಡವು.. ಶ್ರೀನಾಥರನ್ನು ವಿದೇಶಕ್ಕೆ ಕಳುಹಿಸಿ ಬರುತ್ತೇನೆ ಎಂದು ಬರೆದುದನ್ನು ಓದಿದಾಗ! ಶ್ರೀನಾಥರು ಇದ್ದುದು ಸ್ವಾಮಿಗಳ ಜತೆಯಲ್ವಾ? ಅಂಡಾಂಡಭಂಡರು ಗಣೇಶರಾ? ಪಾರ್ಥಸಾರಥಿಯವರಾ!!?:)

>>ಶ್ರೀನಾಥರು ಇದ್ದುದು ಸ್ವಾಮಿಗಳ ಜತೆಯಲ್ವಾ? ಅಂಡಾಂಡಭಂಡರು ಗಣೇಶರಾ? ಪಾರ್ಥಸಾರಥಿಯವರಾ!!?:)>> :)) ಇಷ್ಟೊಂದು ಸವಿವರವಾಗಿ ಬರೆಯಬೇಕಾದರೆ ಪಾರ್ಥರು 'ಸ್ಟಿಂಗ್ ಆಪರೇಶನ್' ಪ್ರವೀಣರ ಪೈಕಿ ಇರಬಹುದು! ಹೇಗಾದರೂ ಇರಲಿ. ಗಣೇಶರು ಶನಿಯ ವಕ್ರದೃಷ್ಟಿಯಿಂದ ಪಾರಾಗಲಿ ಎಂದು ಭಕ್ತರ ಪರವಾಗಿ ಆಶಿಸುವೆವು!

ಸಾರ್ ತಮ್ಮ‌ ಪ್ರತಿಕ್ರಿಯೆಗೆ ದನ್ಯವಾದಗಳು !!
ಒಂದು ಪದಕ್ಕೆ ವಾಕ್ಯಕ್ಕೆ ಎಷ್ಟೊಂದು ಅರ್ಥ‌ ಕೊಡುತ್ತಿದ್ದೀರಿ, ಬ್ರಹ್ಮಾಂಡರು ನಾನಲ್ಲ‌ ಖಂಡೀತ‌ ಗಣೇಶ್ಹರೆ :‍)
ನಾವೇನಿದ್ದರು ದಂಡ‌ !
ನಿಮ್ಮ‌ ವಾಕ್ಯಾರ್ಥವನ್ನು ಗಮನಿಸಿ ಹಾಗೆಯೆ ಕವಿ ನಾಗರಾಜರ‌ ಪ್ರತಿಕ್ರಿಯೆ ಗಮದಲ್ಲಿಟ್ಟು ಸಂಪದದಲ್ಲಿ ಕಾಣಿಸಿಕೊಳ್ಳದ‌ ಪಾತ್ರಗಳನ್ನೆಲ್ಲ‌ ಸೇರಿಸಿ ಅಂಟು ಕಡೆಯ‌ ಬಾಗವನ್ನು ಅರ್ಜೆಂಟಾಗಿ ಬರೆಯುತ್ತ ಇದ್ದೇನೆ
‍ಪಾರ್ಥಸಾರಥಿ

ನಾಗರಾಜರಿಗೆ ನಮಸ್ಕಾರಗಳು,
ಗಣೇಶರು ಊಹೆ ಮಾಡದಿರುವದನ್ನು ತಾವು ಊಹೆ ಮಾಡಿಬಿಟ್ಟಿರಿ, ಕಡೆಯ‌ ಅಧ್ಯಾಯದ‌ ಮುಖ್ಯವಾದ‌ ಪದ‌ ನಿಮಗೆ ಅರಿವಿಲ್ಲದೆ ನಿಮ್ಮ‌ ಪ್ರತಿಕ್ರಿಯೆಯಲ್ಲಿ ಬಂದುಬಿಟ್ಟೆದೆ ಇನ್ನು ತಡಮಾಡುವಂತಿಲ್ಲ‌, ಕಡೆಯ‌ ಅದ್ಯಾಯ‌ ಬೇಗ ಟೈಪಿಂಗ್ ಮುಗಿಸಿ ಹಾಕಿಬಿಡುತ್ತೇನೆ, ಸ್ವಲ್ಪ‌ ತಿದ್ದುವುದು ಬಾಕಿ ಇದೆ :‍)
ವಂದನೆಗಳು

ನಾಗರಾಜರಿಗೆ ನಮಸ್ಕಾರಗಳು,
ಗಣೇಶರು ಊಹೆ ಮಾಡದಿರುವದನ್ನು ತಾವು ಊಹೆ ಮಾಡಿಬಿಟ್ಟಿರಿ, ಕಡೆಯ‌ ಅಧ್ಯಾಯದ‌ ಮುಖ್ಯವಾದ‌ ಪದ‌ ನಿಮಗೆ ಅರಿವಿಲ್ಲದೆ ನಿಮ್ಮ‌ ಪ್ರತಿಕ್ರಿಯೆಯಲ್ಲಿ ಬಂದುಬಿಟ್ಟೆದೆ ಇನ್ನು ತಡಮಾಡುವಂತಿಲ್ಲ‌, ಕಡೆಯ‌ ಅದ್ಯಾಯ‌ ಬೇಗ ಟೈಪಿಂಗ್ ಮುಗಿಸಿ ಹಾಕಿಬಿಡುತ್ತೇನೆ, ಸ್ವಲ್ಪ‌ ತಿದ್ದುವುದು ಬಾಕಿ ಇದೆ :‍)
ವಂದನೆಗಳು

ನಾಗರಾಜರಿಗೆ ನಮಸ್ಕಾರಗಳು,
ಗಣೇಶರು ಊಹೆ ಮಾಡದಿರುವದನ್ನು ತಾವು ಊಹೆ ಮಾಡಿಬಿಟ್ಟಿರಿ, ಕಡೆಯ‌ ಅಧ್ಯಾಯದ‌ ಮುಖ್ಯವಾದ‌ ಪದ‌ ನಿಮಗೆ ಅರಿವಿಲ್ಲದೆ ನಿಮ್ಮ‌ ಪ್ರತಿಕ್ರಿಯೆಯಲ್ಲಿ ಬಂದುಬಿಟ್ಟೆದೆ ಇನ್ನು ತಡಮಾಡುವಂತಿಲ್ಲ‌, ಕಡೆಯ‌ ಅದ್ಯಾಯ‌ ಬೇಗ ಟೈಪಿಂಗ್ ಮುಗಿಸಿ ಹಾಕಿಬಿಡುತ್ತೇನೆ, ಸ್ವಲ್ಪ‌ ತಿದ್ದುವುದು ಬಾಕಿ ಇದೆ :‍)
ವಂದನೆಗಳು