ಉ: ಹೊಸ ಕನ್ನಡ ಲೇಖನಿಮಣೆ
- ಒಳ್ಳೆಯ ಬೆಳೆವಣಿಗೆ By: mahesh_b_s (Mar 20 2006 - 10:22am)
- ಉ: ಹೊಸ ಕನ್ನಡ ಲೇಖನಿಮಣೆ By: pavanaja (Mar 17 2006 - 5:46pm)
- ಅಫಿಶಿಯಲ್ ಮಾಹಿತಿ By: (Mar 17 2006 - 8:26pm)
- ಚಿತ್ರ ಇಲ್ಲಿದೆ :) By: (Mar 17 2006 - 10:29pm)
- EFY link ಎಲ್ಲಿ By: ravikh (Mar 17 2006 - 8:31pm)
- ಕ್ಷಮಿಸಿ ಇಲ್ಲಿದೆ link By: ಪ್ರಶಾಂತ.ಪಂಡಿತ (Mar 17 2006 - 8:36pm)
- ಅಫಿಶಿಯಲ್ ಮಾಹಿತಿ By: (Mar 17 2006 - 8:26pm)

RSS:
ಉ: ಹೊಸ ಕನ್ನಡ ಲೇಖನಿಮಣೆ
ಮೊದಲನೆಯದಾಗಿ -ಅದು ಕೀಲಿಮಣೆ (ಕೀಬೋರ್ಡ್) ಅಲ್ಲ. ಬದಲಿಗೆ ಅದೊಂದು ಲೇಖನಿಮಣೆ. ಡಿಜಿಟೈಸರ್ ನೋಡಿರಬಹುದು. ಅದರಲ್ಲಿ ಒಂದು ಪ್ಯಾಡ್ ಮತ್ತು ಪೆನ್ನು (ಲೇಖನಿ) ಇರುತ್ತವೆ. ಎಚ್‌ಪಿ ಲ್ಯಾಬ್‌ನವರು ತಯಾರಿಸಿರುವ ಲೇಖನಿಮಣೆಯಲ್ಲೂ ಸುಮಾರಾಗಿ ಹಾಗೆಯೇ ಇದೆ. ಇದರ ಕಾರ್ಯವಿಧಾನ ಸ್ವಲ್ಪ ವಿಚಿತ್ರ ಅನ್ನಿಸಬಹುದು. ಎಲ್ಲ ವ್ಯಂಜನ, ಸ್ವರ, ಸ್ವರ ಚಿಹ್ನೆ ಮತ್ತು ಒತ್ತುಗಳ ರೂಪಗಳು (ಅಥವಾ ಅಕ್ಷರಭಾಗಗಳು) ಪರದೆಯಲ್ಲಿ ಕಾಣುತ್ತವೆ. ನಿಮಗೆ ಬೇಕಾಗ ಅಕ್ಷರಭಾಗವನ್ನು ನೀವು ಲೇಖನಿಯನ್ನು ಅದಕ್ಕೆಂದೇ ಇರುವ ಪ್ಯಾಡ್ ಮೇಲೆ (ಅಥವಾ ಲೇಖನಿಯ ಇರವನ್ನು ಅರ್ಥೈಸಿಕೊಳ್ಳಬಹುದಾದ ಸ್ಥಳದಲ್ಲಿ ಅಂದರೆ ಮೇಜಿನ ಮೇಲೆ) ಕುಟ್ಟಿ ಆಯ್ಕೆ ಮಾಡಬೇಕಾಗುತ್ತದೆ. ಅನ್ನ ಎಂಬ ಪದವನ್ನು ರೂಪಿಸಲು ನೀವು ಮೊದಲು ಅ ಅಕ್ಷರದ ಮೇಲೆ ನಂತರ ನ ಅಕ್ಷರ ನಂತರ ನ ಅಕ್ಷರದ ಒತ್ತಿನ (ಅಕ್ಷರಭಾಗ) ಮೇಲೆ ಪೆನ್ನಿನಿಂದ ಕುಟ್ಟಿ ಆಯ್ಕೆ ಮಾಡಬೇಕು.
ಈ ವಿಧಾನವನ್ನು ಬಳಸಲು ಸ್ವಲ್ಪ ತರಬೇತಿ ಅಗತ್ಯ. ಭಾಷೆಯಲ್ಲಿ ನಾವು ಅಕ್ಷರ, ಪದಗಳನ್ನು ಜೋಡಿಸುವ ಸಹಜ ರೂಪದಲ್ಲಿ ಇಲ್ಲಿ ಅಕ್ಷರ, ಪದಗಳ ಸೃಷ್ಟಿ ಇಲ್ಲ. ಇದು online handwriting recognition ಅಲ್ಲ.
ಬಹುಶಃ, ಎಚ್‌ಪಿ ಲ್ಯಾಬ್ಸ್‌ನಲ್ಲಿ ಕೆಲಸ ಮಾಡುತ್ತಿರುವ, ಈ ಲೇಖನಿಮಣೆಯ ವಿನ್ಯಾಸಕ್ಕಾಗಿ ದುಡಿದಿರುವ ಹಾಗೂ ಸಂಪದದ ಸದಸ್ಯರಾಗಿರುವ ಪ್ರಶಾಂತ ಪಂಡಿತರು ಆಫಿಶಿಯಲ್ ಮಾಹಿತಿ ನೀಡಬಹುದು.
ಸಿಗೋಣ,
ಪವನಜ
-----------
Vishva Kannada
Think globally, Act locally