ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Aug 26 2008 - 10:24am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jul 30 2008 - 10:24am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jul 21 2008 - 11:42pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 18 2008 - 9:30am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 18 2008 - 9:35am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 19 2008 - 10:22am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 18 2008 - 9:35am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 16 2008 - 3:32pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 17 2008 - 5:17pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 16 2008 - 4:02pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 16 2008 - 10:32pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 17 2008 - 1:05pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 17 2008 - 4:24pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 17 2008 - 4:28pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 17 2008 - 4:24pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 17 2008 - 1:05pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 16 2008 - 10:32pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 9 2008 - 2:32pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 10 2008 - 9:50am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 10 2008 - 10:30am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 10 2008 - 9:50am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 9 2008 - 12:35pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: gururajkodkani (Jun 9 2008 - 11:48am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 9 2008 - 9:51am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 9 2008 - 10:56am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 4 2008 - 3:39pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: ವೈಭವ (Jun 4 2008 - 9:06pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 4 2008 - 3:40pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Apr 28 2008 - 12:17am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 2 2008 - 11:56pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 3 2008 - 7:53am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 4 2008 - 2:58pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 4 2008 - 3:22pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 4 2008 - 2:58pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 3 2008 - 12:04am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Jun 3 2008 - 7:53am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 2 2008 - 11:56pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: hamsanandi (Apr 26 2008 - 10:17am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Apr 26 2008 - 11:56am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: ವೈಭವ (Apr 26 2008 - 11:35pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Apr 28 2008 - 12:04am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: kannadakanda (Jun 4 2008 - 3:43pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Apr 28 2008 - 12:04am)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: ವೈಭವ (Apr 26 2008 - 11:35pm)
- ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ By: mahesha (Apr 26 2008 - 11:56am)


RSS:
ಉ: ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ
’ೞ’ ಕನ್ನಡದಲ್ಲಿ ೧೨ನೇ ಶತಮಾನದ ಅಂತ್ಯದಲ್ಲಿ ಶಿಷ್ಟಪ್ರಯೋಗದಿಂದ ಮಱೆಯಾಯಿತು. ’ಱ’ ಸುಮಾರು ೧೮ನೇ ಶತಮಾನದ ಕೊನೆಗೆ ಕಣ್ಮಱೆಯಾದರೂ ಈಗಲೂ ಜನರ ನಿಜ ಜೀವನದಲ್ಲಿ ’ಕಱಿಯ’ ’ಬಱಿ’ ಎಂದು ಒತ್ತಿಹೇೞುವಾಗ ’ಱ’ ವನ್ನು ನಾಲಿಗೆ ನಡುಗಿಸಿ ಹೇೞುತ್ತೇವೆ. ಹಾಗೆಯೇ ಇದಱಿಂದ ಸಾಧಿತವಾದ ಶಬ್ದಗಳಾದ ’ಬಱ’ ’ಬಱಸಿಡಿಲು’ ಇತ್ಯಾದಿಗಳಲ್ಲೂ ’ಱ’ ವನ್ನೇ ಬೞಸಬೇಕು. ಆದರೆ ಕೆಲವು ಶಬ್ದಗಳಲ್ಲಿ ಅವುಗಳ ಅರ್ಥಕ್ಕನುಸಾರವಾಗಿಯೂ ತಿಳಿದುಕೊಳ್ಳಬಹುದು. ಉದಾಹರಣೆಗೆ. ನೀರು ಹರಿಯುತ್ತದೆ. ಕಾಗದವೂ ಹಱಿಯುತ್ತದೆ (’ಪಱ್’ ಎಂಬಲ್ಲಿ ಕಾಗದ ಹಱಿಯುವ ಶಬ್ದವನ್ನು ಸೂಚಿಸಬೇಕಾವುದಱಿಂದ ಕಂಪಿತ ಱ). ಮೞೆ ಸುರಿಯುತ್ತದೆ. ಪಾಯಸವನ್ನು ಸುಱ್ ಎಂದು ಸುಱಿಯುತ್ತೇವೆ. (ಸುರಿ=(ನೀರು) ಸುರಿ. ಸುಱಿ=’ಸುಱ್’ ಎಂದು ಶಬ್ದ ಮಾಡಿ ಹೀರು) ಇತ್ಯಾದಿ. ಹೀಗೆ ಕೆಲವು ಕಡೆ ’ಱ’ ಬೞಕೆಯನ್ನು ಬುದ್ಧಿವಂತಿಕೆಯಿಂದ ತಿಳಿಯಬೇಕಾಗುತ್ತದೆ. ಹಾಗಲ್ಲದಿದ್ದರೆ ನೆರೆಯ ಭಾಷೆಯ ಜ್ಞಾತಿ ಶಬ್ದಗಳಿಂದಲೂ ಹೞಗನ್ನಡದ ಶಬ್ದಗಳಿಂದಲೂ ’ಱ’ ವನ್ನು ತಿಳಿಯಬಹುದು.
ಆದರೆ ’ೞ’ ಬಹಳ ಹಿಂದಿನಿಂದಲೇ ಬೞಕೆಯಿಂದ ನಿಂತುಹೋಗಿದೆ. ಇದಕ್ಕೆ ಕಾರಣ ಶಿವಶರಣರು ಹಾಗೂ ನಡುಗನ್ನಡದ ಕವಿಗಳು ಇದನ್ನು ಬೞಸುವ ಗೋಜಿಗೆ ಹೋಗಲಿಲ್ಲ. ಹರಿಹರನಂತೂ ಹೀಗೆಂದ:
ನೋಡುವೊಡೊಂದಕ್ಕರಮದು
ಮಾಡುವೊಡುಚ್ಚರಣೆಗಱಿದು ಮೂಱುತೆಱನಂ
ಕೂಡೆ ಕವಿತತಿ ವಿಚಾರಿಸ
ಬೇಡದಱಿಂ ಱೞಕುಳಕ್ಷಳಂಗಳನಿದಱೊಳ್||
ಆದರೆ ಈಗಲೂ ಕೆಲವು ಕನ್ನಡದಲ್ಲಿ ಈ ’ೞ’ ಬೞಕೆ ತಿಳಿಯಬಹುದು. ಉದಾಹರಣೆಗೆ ಸೋಲಿಗರ ಕನ್ನಡದಲ್ಲಿ ’ೞ’ ಬೞಕೆ ಇನ್ನೂ ಇದೆ. ಅವರು ಬಾೞೆಹಣ್ಣು, ಹೊೞೆ=ನದಿ, ಕೊೞವೆ ಮುಂತಾದ ಶಬ್ದಗಳಲ್ಲಿ ಬೞಸುವ ’ೞ’ ’ಳ’ಕ್ಕಿಂತ ಭಿನ್ನವಾಗಿರುವುದು ತೋಱುತ್ತದೆ. ಹಾಗೆಯೇ ಮೆೞಸು=ಮೆಣಸು, ಗೆೞಸು=ಗೆಣಸು ಏೞಿ=ಏಣಿ ಮೊೞ=ಮೊಣ ಇತ್ಯಾದಿ ಶಬ್ದಗಳಲ್ಲಿ ’ೞ’ ಸಾನುನಾಸಿಕ. ’ೞ’ ಕೂಡ ’ಯ’, ’ರ’, ’ಲ’, ’ವ’, ’ಳ’ ಗಳಂತೆ ಸಾನುನಾಸಿಕ ಹಾಗೂ ನಿರನುನಾಸಿಕವೆಂದು ಎರಡು ತೆಱ.
ಉದಾಹರಣೆಗೆ ಕೊಳ್ ಧಾತು ಸಾನುನಾಸಿಕ ಆಗ ಭೂತಕಾಲದಲ್ಲಿ ಕೊಂದ ಆಗುತ್ತದೆ. ಹಾಗೆಯೇ ಉಳ್ ಕೂಡ. ಉಂಟು ಎಂಬುದು ಅದಱ ಆಸನ್ನಭೂತರೂಪ. ಬೇಯ್, ನೋಯ್, ಬರ್, ತರ್, ಕೊಲ್, ಸಲ್ ಇವೆಲ್ಲ ಕ್ರಮವಾಗಿ ಸಾನುನಾಸಿಕ ಯ ರ ಲಗಳು. ಹಾಗಾಗಿ ಇವುಗಳ ಭೂತಕಾಲಗಳ ರೂಪ ಬೆಂದ, ನೊಂದ, ಬಂದ, ತಂದ, ಕೊಂದ, ಸಂದ ಇನ್ನೂ ಮುಂತಾದುವು. ತಾಮರೆ=ತಾವರೆ, ಕಿಮಿ=ಕಿವಿ, ಸಮಱು=ಸವಱು, ಚಿಮುಟು=ಚಿವುಟು ಇವುಗಳ ಆಡುಭಾಷೆಯ ಬೞಕೆಯಲ್ಲಿ ಗಮನಿಸಿದಾಗ ’ವ’ ಕಾರದ ಹಿಂದೆ ಅನುನಾಸಿಕವನ್ನು ಬೞಸುವುದು ಕಾಣುತ್ತೇವೆ. ಹಾಗೆಯೇ ಕೆಲವು ಎರಡು ಶಬ್ಗಗಳ ರೂಪದಲ್ಲುಂಟು. ಲೆತ್ತ=ನೆತ್ತ (ಪಗಡೆ) ಇಲ್ಲಿ ’ಲ’ ನಿಜವಾಗಿ ಸಾನುನಾಸಿಕ ’ಲ’ ಆದರೆ ’ನೆತ್ತ’ ಎಂದಾಗ ಅದಱ ಉಚ್ಚಾರೈಕಸ್ಥಾನಿಯಾದ ಅನುನಾಸಿಕ ’ನ್’ (’ಲ್’, ’ನ್’ ಎರಡೂ ದಂತ್ಯ) ಬೞಕೆಯಾಗಿದೆ. ಗಿಳಿ=ಗಿಣಿ, ನೊಳ(ವು)=ನೊಣ(ವು) ಇಲ್ಲಿ ’ಳ’ ಸಾನುನಾಸಿಕ. ಹಾಗಾಗಿ ಅದಱ ಉಚ್ಚಾರೈಕಸ್ಥಾನಿಯಾದ ಅನುನಾಸಿಕ ’ಣ್’ ದಿಂದಲೂ ಸೂಚಿತವಾಗಿದೆ.
ಹಾಗಾಗಿ ಕನ್ನಡದಲ್ಲಿ ’ೞ’ ಸಂಪೂರ್ಣ ನಶಿಸದೇ ಕೆಲವು ಆಡುಭಾಷೆಯಲ್ಲಿ ಇನ್ನೂ ಇದೆ. ಜನಸಾಮಾನ್ಯರು ’use and disuse' ಸಿದ್ಧಾಂತದಂತೆ ಕೆಲವು ಆಕ್ಷರಗಳ ಉಚ್ಚಾರವನ್ನು ಕಲಿಯುತ್ತಾರೆ. ಕೆಲವನ್ನು ಬಿಡುತ್ತಾರೆ. ಉದಾಹರಣೆಗೆ ನಮಗೆ ಸಹಜವಾದ ’ೞ’ ಉಚ್ಚಾರವನ್ನು ನಾವು ಮಱೆತಿದ್ದೇವೆ. ನಮ್ಮದಲ್ಲದ ಜ಼ ಹಾಗೂ ಫ಼ ಉಚ್ಚಾರವನ್ನು ಅಳವಡಿಸಿಕೊಂದಿದ್ದೇವೆ. ಯಾಕೆಂದರೆ ನನ್ನ ತಾಯಿ ಇಂಗ್ಲಿಷಿನ fix ಹಾಗೂ zinc ನಲ್ಲಿರುವುದನ್ನು ಪಿ಼ಕ್ಸ್ ಎಂಬುದನ್ನು ಪಿಕ್ಸ್ ಎಂದೇ ಉಚ್ಚರಿಸುತ್ತಾರೆ. ಜಿಂಕ್ ಎಂದೇ ಉಚ್ಚರಿಸುತ್ತಾರೆ. ಹಾಗಾಗಿ ನಾವು ಕೆಲವು ಉಚ್ಚಾರಗಳು ಕನ್ನಡದಲ್ಲಿ ಇವೆ ಬೇಡ ಎಂಬ ವಿಷಯಕ್ಕೇ ಅರ್ಥವೇ ಇಲ್ಲ. ಉತ್ತರಭಾರತದ ಬಹಳಷ್ಟು ಮಂದಿ ತಮಗೆ ಅಪರಿಚಿತವಾಗಿರುವ ’ಳ’ ವನ್ನು ಪ್ರಾರಂಭದಲ್ಲಿ ’ಲ’ ಎಂದೇ ಉಚ್ಚರಿಸುತ್ತ ಕ್ರಮೇಣ ನಮ್ಮೊಂದಿಗೆ ’ಳ’ ಉಚ್ಚಾರ ಕಲಿತಿರುವುದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮಲ್ಲೇ ಇವೆ. ಹಾಗಾಗಿ ಹಿಂದಿಯಲ್ಲೂ ಕೂಡ ’ಳ’ ಕ್ಕೆ ’ळ’ ಸಂಕೇತವನ್ನು ಅಳವಡಿಸಿಕೊಂಡಿದ್ದಾರೆ. ಒರಿಯಾ, ಮರಾಠಿ ಹಾಗೂ ಕೊಂಕಣಿಗಳಲ್ಲಿ ಪಕ್ಕದ ತೆನ್ನುಡಿಗಳಾದ ತೆಲುಗು ಮತ್ತು ಕನ್ನಡಗಳ ಪ್ರಭಾವದಿಂದ ಅವುಗಳಲ್ಲಿ ’ಳ’ ಸಹಜವಾಗೇ ಇದೆ.