ಮಹಿಳೆಯರ ಘನತೆ, ಸ್ವಾತಂತ್ರ್ಯ, ಸಮಾನತೆ, ಪುರುಷರು ಕೊಡುವ ಸಹಾನುಭೂತಿ, ಭಿಕ್ಷೆ, ಸಹಾಯ ಸೇವೆ, ಗೌರವವಲ್ಲ. ಅದು ಅವರ ಹಕ್ಕು ನೆನಪಿರಲಿ. ಒಂದು ಕುತೂಹಲಕಾರಿ, ಆಶ್ಚರ್ಯಕಾರಿ, ಆಘಾತಕಾರಿ ಬೆಳವಣಿಗೆ ಕರ್ನಾಟಕದ ರಾಜಕೀಯ ಮತ್ತು ಮಾಧ್ಯಮ ಲೋಕದಲ್ಲಿ ನಡೆಯುತ್ತಿದೆ. ಸೀಡಿ ಅಥವಾ ಪೆನ್ ಡ್ರೈ ವ್ ಅಥವಾ ಮೊಬೈಲ್ ಅಥವಾ ಹಿಡನ್ ಕ್ಯಾಮೆರಾ ಅಥವಾ ಆ ರೀತಿಯ ಗ್ಯಾಜೆಟ್ ಗಳಲ್ಲಿ ಚಿತ್ರೀಕರಣಗೊಂಡ, ಅನೇಕರ ಅನೈತಿಕ ಲೈಂಗಿಕ ಚಟುವಟಿಕೆಗಳ ದೃಶ್ಯಗಳು ಈಗಾಗಲೇ ಗುಪ್ತವಾಗಿ ಸಂಗ್ರಹವಾಗಿದೆ.
ಅದನ್ನು ಬಳಸಿಕೊಂಡು ಕೆಲವರು ಬ್ಲಾಕ್ ಮೇಲ್ ಮಾಡಿ ಹಣ ಮಾಡುತ್ತಿದ್ದಾರೆ, ಹನಿಟ್ರ್ಯಾಪ್ ಗಿಂತ ಹೆಚ್ಚಾಗಿ ಇದನ್ನು ನಿರ್ಧಿಷ್ಟವಾಗಿ ಕೆಲವು ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ, ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಎಲ್ಲ ಕಡೆ ಮಾತುಕತೆಗಳು ನಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರ ಬಳಿ ನೂರಾರು ಸೀಡಿಗಳಿದ್ದು ಅದರಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ದೊಡ್ಡ ಹುದ್ದೆಯ ಸರ್ಕಾರಿ ಅಧಿಕಾರಿಗಳು, ವಿರೋಧ ಪಕ್ಷದ ನಾಯಕರು ಮುಂತಾದ ಎಲ್ಲರ ಲೈಂಗಿಕ ಕ್ರಿಯೆಯ ಸೀಡಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಅವರು ನೇರವಾಗಿ ಮಾಧ್ಯಮಗಳ ಮುಂದೆ ಆರೋಪ ಮಾಡುತ್ತಾರೆ.
ಹಾಗೆಯೇ ಇದೇ ರಮೇಶ್ ಜಾರಕಿಹೊಳಿಯವರ ಸೀಡಿಗಳು ಸಹ ಮಾಧ್ಯಮದಲ್ಲಿ ಪ್ರಸಾರವಾಯಿತು ಮತ್ತು ಅದನ್ನು ಅವರು ಒಪ್ಪಿಕೊಂಡರು ಸಹ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹ ನನ್ನ ಬಳಿ ಸಾಕಷ್ಟು ಸೀಡಿಗಳಿದ್ದು ಸಮಯ ಬಂದಾಗ ಬಿಡುಗಡೆ ಮಾಡುವುದಾಗಿ ತಮ್ಮ ಪಾಕೆಟ್ ನಲ್ಲಿ ಪೆನ್ ಡ್ರೈವ್ ಇಟ್ಟುಕೊಂಡು ಓಡಾಡುತ್ತಿದ್ದಾರೆ ಮತ್ತು ಮಾಧ್ಯಮ ಪತ್ರಿಕಾಗೋಷ…
ಮುಂದೆ ಓದಿ...