ಕಾಡುಹಂದಿಯ ಕಣ್ಣು ನನ್ನ ಮೇಲೆ..! (ಭಾಗ 2)
8 hours 29 minutes ago - ಬರಹಗಾರರ ಬಳಗಆದರೆ ಈ ಹಂದಿಗಳು ಮತ್ತು ಆನೆಗಳು ಅಪಾಯದ ಸಂದರ್ಭದಲ್ಲಿ ಎದುರುಗಡೆ ಇರುವ ಶತ್ರುಗಳನ್ನು ಹೊಡೆದುರುಳಿಸುವ ಕನಿಷ್ಟ ಪ್ರಯತ್ನವನ್ನು ಮಾಡೇ ಮಾಡುತ್ತವೆ. ಹಂದಿ ತಿವಿಯಲು ಬಂದಾಗ ಅದು ಬರುವ ಸರಳರೇಖೆಯಿಂದ ಆಚೆ-ಈಚೆ ಸರಿಯಬೇಕು ಎಂದು ಅಪ್ಪ, ಅಣ್ಣ ಇತರರು ಹೇಳಿದ್ದು ಕೇಳಿದ್ದೇನೆ. ಅದು ನನಗೆ ಅರಿವಿದೆ ಆದರೆ ಆ ಸರ್ಕಾರಿ ಜಾಲಿ ಗಿಡಗಳ ಮುಳ್ಳಿನ ವ್ಯೂಹದಲ್ಲಿ ಅರ್ಧ ಅಡಿಯೂ ಸರಿದಾಡಲು ಸ್ಥಳಾವಕಾಶ ಇರಲಿಲ್ಲ..! ತಕ್ಷಣಕ್ಕೆ ಮಂದೆಹೆಜ್ಜೆ ಇಡುವುದನ್ನು ತತ್ಕ್ಷಣವೇ ನಿಲ್ಲಿಸಿ ಉಸಿರು ಬಿಗಿಹಿಡಿದು ಮುಂದೆ ಇಡುತ್ತಿದ್ದ ಹೆಜ್ಜೆಗಳನ್ನು ನಿಧಾನಕ್ಕೆ ಹಿಂದೆ ಹಿಂದೆ ಇಡುತ್ತಾ ಸರಿದೆ. ಶಬ್ಧಮಾಡಿದರೆ ಎದ್ದೇಳುವ ಅಪಾಯ ಹೆಚ್ಚಿತ್ತು. ಎಲ್ಲಿ ಎದ್ದುಬಂದು ನನ್ನನ್ನು ತಿವಿದು ಹಾಕುತ್ತೋ ಎಂದು ತುಂಬಾ ಭಯವಾಗಿತ್ತು. ಈ ಘಟನೆಗೆ ಕೆಲವೇ ದಿನಗಳ ಮುಂಚೆ ಯುಗಾದಿಯ ನಂತರ ನಮ್ಮ ಕಡೆ ಹಂದಿಯ ಶಿಕಾರಿ ಮಾಡುವವರು. ಅದು ಗ್ರಾಮಸ್ಥರು ಹುಕುಂ ಹೊರಡಿಸುತಿದ್ದರು. ಪ್ರತಿ ಮನೆಗೆ ಒಬ್ಬರು ಶಿಕಾರಿಯ ಬೇಟೆಯ ಗುಂಪಿಗೆ ಜೊತೆಯಾಗಿ ಹೋಗಲೇ ಬೇಕಿತ್ತು. ತಮ್ಮ ಮನೆಯಲ್ಲಿದ್ದ ಮಾರಕಾಸ್ತ್ರದೊಂದಿಗೆ ತೆರಳುತಿದ್ದರು. ಇದು ಒಂದು ಮೋಜಿನ , ವಿನೋದದ, ಮನೋರಂಜನೆಯ ಸಂಗತಿಯಾಗಿ ಯುವ ಸಮೂಹ, ಹಳೇ ಶಿಕಾರಿ ಪಂಟರೆಲ್ಲಾ ಬಹು ಸಂತಸದಿ ಯುದ್ಧೋತ್ಸಹ ಉನ್ಮಾದದಿಂದ ಕೇಕೆ ಹಾಕುತ್ತಾ ಶಿಕಾರಿಗೆ ತೆರಳುತಿದ್ದರು. ಮೊದಲದಿನ ಶಿಕಾರಿ ಆಗದೇ ಇದ್ದರೆ ಎರಡನೇ ದಿನ ಇನ್ನಷ್ಟು inspiration ನಿಂದ ದಿಕ್ಕನ್ನು ಬದಲಿಸಿ ಬೇರೆ ಬೇರೆ ಕಡೆಗೆ ತೆರಳುತ್ತಿದ್ದರು. ಹಂದಿಯ ಬೇಟೆಯಾಡಿ ಕೊಂದ ಹಂದಿಗಳನ್ನು ಅಲಂಕೃತಗೊಳಿಸಿ ಟ್ರಾಕ್ಟರ್ /ಎತ್ತಿನಗಾಡಿಯಲ್ಲಿ ತಮಟೆ ನಗಾರಿ ಭಾರಿಸುತ್ತಾ , ಕುಣಿಯುತ್ತಾ, ಹೋಳಿ-ಯುಗಾದಿ ಮಿಶ್ರಣ ಮಾಡಿ ಕುಂಕುಮ ಭಂಡಾರಗಳನ್ನು ಪರಸ್ಪ… ಮುಂದೆ ಓದಿ...