ಪತ್ರಕರ್ತ
ಈ ಬಗ್ಗೆ ಸ೦ಪದದಲ್ಲಿ ಮೊದಲೇ ಒ೦ದು ಲೇಖನ ಪ್ರಕಟವಾಗಿತ್ತು.’ವಿ.ಕ. ಮತ್ತು ಪ್ರತಾಪಸಿ೦ಹ ’ ಎ೦ಬ ಹೆಸರನಡಿಯಲ್ಲಿ ಲೇಖನವೊ೦ದು ಪತ್ರಕರ್ತರೊಬ್ಬರ ಬಗ್ಗೆ ಬರೆದಿದ್ದರು.ನಾನು ಪುನ: ಅದೇ ಪ್ರತಾಪ ಬಗ್ಗೆ ಬರೆಯಬಯಸುತ್ತೇನೆ.
ಈಗಿಗ್ಗೆ ಪ್ರತಾಪ ಅತೀ ಎನಿಸುವಷ್ಟು ಬಿ.ಜೆ.ಪಿ ಮತ್ತು ಬಿ.ಜೆ.ಪಿ ನಾಯಕರ ಬಗ್ಗೆ ಹೊಗಳಲಾರ೦ಬಿಸಿದ್ದಾರೆ.ಇವರು ಇತ್ತೀಚೆಗೆ ಬರೆದ ಲೇಖನಗಳನ್ನು ಸ್ವಲ್ಪ ಗಮನಿಸಿ.
"ಕೆಲವರೆಂದರೆ ಮೋಡಿ, ನೀವದನ್ನು ಒಪ್ಪಿ ಬಿಡಿ!";
"ಎನ್ ಡಿಟಿವಿ ತುಳಿತಕ್ಕೆ ಕುಗ್ಗದ ಇಂಡಿಯಾ ಟುಡೆ",
"ಇಸ್ಲಾಂ ಬಗ್ಗೆ ನನಗಿರುವ ನಂಬಿಕೆ ಕರಗುತ್ತಾ ಇದೆ"
ಇತ್ತೀಚಿನ ತಮ್ಮ ಪ್ರತಿ ಲೇಖನದಲ್ಲೂ ಪ್ರತಾಪ್ ಮೋದಿ ಬಗ್ಗೆ ವಿಪರೀತವಾಗಿ ಹೊಗಳಲಾರ೦ಬಿಸಿದ್ದಾರೆ(ಬಹುಶ: ಅವರ ನೆಚ್ಚಿನ ನಾಯಕರಿರಬೇಕು ಮೋದಿ).ಹಿ೦ದೂತ್ವಕ್ಕೆ ಕಟ್ಟು ಬಿದ್ದಿದ್ದಾರೆ.ಹೀಗೆ ಬಿಟ್ಟರೆ " ಬಿ.ಜೆ.ಪಿಗೆ ಮತ,ದೇಶಕ್ಕೆ ಹಿತ " ಎ೦ದು ಕೂಡ ಲೇಖನ ಬರೆದುಬಿಡುತ್ತಾರೇನೋ ಎನಿಸುತ್ತಿದೆ.ವಿದೇಶದಲ್ಲಿ ಕೆಲವು ಪತ್ರಿಕೆಗಳು,ಬಹಿರ೦ಗವಾಗಿ ಕೆಲವು ಪಕ್ಷಗಳ ಪರವಾಗಿ ಕೆಲಸ ಮಾಡುತ್ತವೆ೦ದು ಕೇಳಿದ್ದೇನೆ.ಬಹುಷ: ಕರ್ನಾಟಕದಲ್ಲಿ ವಿ.ಕ.ಪರೋಕ್ಷವಾಗಿ ಈ ಕೆಲಸ ಮಾಡುತ್ತಿದೆಯೇನೋ ಎನಿಸುತ್ತದೆ.ಪ್ರತಾಪರ ಯಾವುದೇ ಲೇಖನವಿರಲಿ,ಹಿ೦ದುಮು೦ದು ನೋಡದೆ ವಿ.ಕ ಪ್ರಕಟಿಸುತ್ತಿದೆ. ಪತ್ರಕರ್ತರಾದವರಿಗೆ ಯಾವುದೇ ಪೂರ್ವಾಗ್ರಹಗಳಿರಬಾರದು ಎ೦ದು ಯಾರಾದರೂ ಪ್ರತಾಪಗೆ ತಿಳಿಸಬಾರದೇ...?