ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೊಬೈಲ್ ಗೀಳಿನ ಅಪಾಯಗಳನ್ನು ಅರಿತ ದಿಗ್ಗಜರು!

ಸಾಮಾನ್ಯವಾಗಿ, ನಾವು ನಮ್ಮ ಮಕ್ಕಳಿಗೆ ಆಡಲು ಮೊಬೈಲ್ ಫೋನ್ ಅನ್ನು ನೀಡುತ್ತೇವೆ; ನಂತರ, ಬಹಳ ತೊಂದರೆಗಳನ್ನು ಅನುಭವಿಸುತ್ತೇವೆ. ಆದರೆ, ಕೆಲವು ಕೋಟ್ಯಾಧಿಪತಿಯರು ತಮ್ಮ ಮಕ್ಕಳಿಗೆ ಮೊಬೈಲ್ ಫೋನನ್ನು ಆಡಲು ನಿರಾಕರಿಸಿದ್ದಾರೆ.

Image

ಸಸ್ಯಗಳೂ ಬೆವರುತ್ತವೆ !

ನಮಗೆ ಇಂಗಾಲದ ಡೈಆಕ್ಸೈಡ್ ವಿಸರ್ಜಕ ಅನಿಲವಾದರೆ ಆಮ್ಲಜನಕ ಅಗತ್ಯ ಅನಿಲ. ಆದರೆ ಸಸ್ಯಗಳಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್ ಎರಡೂ ವಿಸರ್ಜಕ ಅನಿಲಗಳೇ. ಅಂದರೆ ಸಸ್ಯಗಳ ವಿಸರ್ಜಕ ಅನಿಲವಾದ (ಅಪಾನವಾಯು ಅಲ್ಲ) ಆಮ್ಲಜನಕ ನಮಗೆ ಪ್ರಾಣವಾಯು. ಹೇಗಿದೆ ನೋಡಿ. ಈ ಅನಿಲಗಳನ್ನು ಹೊರಹಾಕುವುದು ಪತ್ರ ರಂಧ್ರಗಳ ಮೂಲಕ. ಈ ಅನಿಲ ವಿನಿಮಯದ ವೇಳೆ ನೀರು ಕೂಡಾ ಆವಿಯ ರೂಪದಲ್ಲಿ ತಪ್ಪಿಸಿಕೊಳ್ಳುತ್ತದೆ.

Image

ಕಲಬೆರಕೆ

ಸಾಯಬೇಕಾದ ಇಲಿ ಸಾಯುತ್ತಿಲ್ಲ, ಬದುಕಬೇಕಾದ ಜನ ಬದುಕುತ್ತಿಲ್ಲ, ಇದು ಕಲಬೆರಕೆಯ ಪರಿಣಾಮದ ಸ್ಥೂಲ ಚಿತ್ರಣ.  ಕೇವಲ ಲಾಡು, ಸಾಮಗ್ರಿ, ಸರಕುಗಳ ಕಲಬೆರಕೆ ಮಾತ್ರವಲ್ಲದೆ, ಹೇಗೆ ಜೀವನದ ಎಲ್ಲಾ ರಂಗಗಳಲ್ಲೂ ಕಲಬೆರಕೆ ಮಿತಿಮೀರಿದೆ ಎಂದು ವಿವರಿಸಿದ್ದಾರೆ. ರಾಜಕೀಯ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಕಳಕಳಿ, ಪ್ರತಿಯೊಂದು ಕ್ಷೇತ್ರದಲ್ಲೂ ಕಲಬೆರಕೆ ಸರಿಪಡಿಸಲಾಗದಷ್ಟು ಹದಗೆಟ್ಟಿದೆ. ಸರಿಪಡಿಸಬೇಕಾದ ಮನಸ್ಥಿತಿ ಇರಬೇಕಾದವರ ಮನಸ್ಥಿತಿಯೇ ಕಲಬೆರಕೆ ಆಗಿರುವಾಗ, ಅದರ ತಡೆ, ನಿರ್ಮೂಲನೆ, ಕೇವಲ ಕಾಗದದ ಮೇಲೆ ಅಥವಾ ದಾಖಲೆಗಳಲ್ಲಿ ಸಾಧ್ಯವೇ ಹೊರತು ವಾಸ್ತವವಾಗಿ ಅಸಾಧ್ಯದ ಮಾತು. ಈಗಿನಿಂದ ಪ್ರಾಮಾಣಿಕ ಪ್ರಯತ್ನ ಪ್ರಾರಂಭಿಸಿದರೂ ಇದರ ನಿರ್ಮೂಲನೆ ಮಾಡಲು ಕನಿಷ್ಠ ಅರ್ಧ ಶತಮಾನ ಬೇಕಾಗಬಹುದು.

ನುಗ್ಗೆ ಬೇಸಾಯ : ತಳಿಗಳು ಮತ್ತು ರೋಗ ನಿರ್ವಹಣೆ (ಭಾಗ 1)

ನುಗ್ಗೆಯ ಕೋಡೊಂದೇ ಬಳಕೆ ಯೋಗ್ಯವಾದುದಲ್ಲ. ಅದರ ಹೂವು ಎಲೆಯಲ್ಲಿಯೂ ಔಷಧೀಯ ಗುಣಗಳು ಅಪಾರ. ಎಲೆಯನ್ನು ಹುಡಿ ಮಾಡಿ ಪ್ಯಾಕೇಟ್ ಮಾಡಿ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹೊರ ದೇಶಗಳಲ್ಲಿ ಹಾಗೂ ದೇಶದ ಒಳಗೂ ನುಗ್ಗೆಯ ಎಲೆಯ ಹುಡಿಗೆ ಭಾರೀ ಬೇಡಿಕೆ ಇದ್ದು, ಕೊಳ್ಳುವ ಕರಾರಿನ ಮೇಲೆ ಹಲವಾರು ರೈತರು ಈಗ ನುಗ್ಗೆ ಬೇಸಾಯಕ್ಕೆ ಇಳಿದಿದ್ದಾರೆ.

Image

ಅಲೆದಾಟದ ಅಂತರಂಗ

ಪುಸ್ತಕದ ಲೇಖಕ/ಕವಿಯ ಹೆಸರು
ನವೀನಕೃಷ್ಣ ಎಸ್ ಉಪ್ಪಿನಂಗಡಿ
ಪ್ರಕಾಶಕರು
ಸ್ನೇಹ ಬುಕ್ ಹೌಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೪

‘ಅಲೆದಾಟದ ಅಂತರಂಗ’ ಎನ್ನುವುದು ನವೀನಕೃಷ್ಣ ಎಸ್ ಉಪ್ಪಿನಂಗಡಿ ಇವರ ಪ್ರವಾಸ ಕಥನ. ನಮಗೆ ಗೊತ್ತಿಲ್ಲದ ಊರಿನ ವಿಶೇಷತೆಗಳನ್ನು ರೋಚಕವಾಗಿ ಹರಡುವ ನವೀನಕೃಷ್ಣ ಅವರ ಪ್ರವಾಸಕಥನಗಳು ಓದಲು ಬಹಳ ಸೊಗಸಾಗಿರುತ್ತವೆ. ಅವರೊಂದಿಗೆ ನಾವೂ ಪ್ರವಾಸ ಮಾಡುತ್ತಿದ್ದೇವೆ ಎನ್ನುವಷ್ಟು ಹಿತವಾಗಿರುತ್ತದೆ. ಈ ಪ್ರವಾಸ ಕಥನಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ವಿವೇಕಾನಂದ ಕಾಲೇಜು ಪುತ್ತೂರು ಇದರ ಕುಲ ಸಚಿವರಾದ ಡಾ.

ನ್ಯಾಯ - ಅನ್ಯಾಯ, ಯಾರಿಂದ - ಯಾರಿಗೆ…?

ವಿಧಾನಸಭೆ, ಲೋಕಸಭೆ, ಮತ್ತು ಮೂರು ಉಪಚುನಾವಣೆ, ಎಲ್ಲಾ ಮುಗಿದ ನಂತರ ಈಗ ರಾಜಕೀಯ ಪಕ್ಷಗಳ ನಾಯಕರ ಮುಖವಾಡ ಬಟಾ ಬಯಲಾಗುತ್ತಿದೆ. ಚುನಾವಣೆಗಳವರೆಗೂ ಅವರು ನಡೆದುಕೊಂಡ ರೀತಿ ನೀತಿ, ಚುನಾವಣೆ ಮುಗಿದ ನಂತರ ಅಧಿಕಾರಕ್ಕಾಗಿ ನಡೆಯುತ್ತಿರುವ ಅವರ ಈ ಬೀದಿ ಜಗಳಗಳು ಅವರ ಮುಖವಾಡಗಳನ್ನ ಕಳಚುತ್ತಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೧೬೫)- ಆಯ್ಕೆ

ಯಾವುದನ್ನ ಅನುಸರಿಸಬೇಕು. ಮನೆಗೊಂದು ಬೆಕ್ಕು ಬಂದಿತ್ತು. ಬೆಕ್ಕಿಗೆ ಆಗಾಗ ಹೊರಗೆ ಹೋಗೋಕೆ ಆಸೆ. ಅದಕ್ಕೆ ನಾನಾ ರೀತಿಯ ಪ್ರಯತ್ನಗಳನ್ನು ಮಾಡ್ತಾ ಇತ್ತು. ಇಲ್ಲಿರುವುದ್ದಕ್ಕೆ ಇಷ್ಟವಿಲ್ಲವಾದರೆ ಹೊರಟು ಬಿಡಬಹುದು. ಆದರೆ ಬೆಕ್ಕು ಹಾಗೆ ಮಾಡಿಲ್ಲ.

Image

ಕ್ರಮ ಅನುಸರಿಸಿ ಪರಿಣಾಮ

ಪತಂಜಲ ಯೋಗ ಸೂತ್ರದಲ್ಲಿ ಮೂರನೇ ಪಾದ 16, 17, 18 ನೇ ಸೂತ್ರದಲ್ಲಿ ಇದು ಬರುತ್ತದೆ. ನಮ್ಮ ಜೀವನ ಸುಂದರವಾಗಬೇಕಾದರೆ ಕ್ರಮದ ಜ್ಞಾನವಾಗಬೇಕು. ನಾವು ಅಶಕ್ತರಾಗಿ ಬಾಳಬಾರದು. ಅಜ್ಞಾನದಲ್ಲಿ ಉಳಿಯಬಾರದು. ಅಸಮಾಧಾನಿಯಾಗಿರಬಾರದು. ನಮ್ಮ ಬದುಕು ಕಾರ್ಯಕ್ಷಮವಾಗಿರಬೇಕು. ನಮ್ಮ ಭಾವ ಮಧುರವು, ಸಂತೋಷದಾಯಕವೂ ಆಗಿರಬೇಕು. ನಮ್ಮ ಮತಿ ಸತ್ಯವನ್ನು ಗ್ರಹಿಸುವ ಸಾಮರ್ಥ್ಯ ಪಡೆದಿರಬೇಕು. ಆಗ ಬದುಕು ಸಾರ್ಥಕ.

Image