ಸ್ಟೇಟಸ್ ಕತೆಗಳು (ಭಾಗ ೧೧೬೫)- ಆಯ್ಕೆ

ಯಾವುದನ್ನ ಅನುಸರಿಸಬೇಕು. ಮನೆಗೊಂದು ಬೆಕ್ಕು ಬಂದಿತ್ತು. ಬೆಕ್ಕಿಗೆ ಆಗಾಗ ಹೊರಗೆ ಹೋಗೋಕೆ ಆಸೆ. ಅದಕ್ಕೆ ನಾನಾ ರೀತಿಯ ಪ್ರಯತ್ನಗಳನ್ನು ಮಾಡ್ತಾ ಇತ್ತು. ಇಲ್ಲಿರುವುದ್ದಕ್ಕೆ ಇಷ್ಟವಿಲ್ಲವಾದರೆ ಹೊರಟು ಬಿಡಬಹುದು. ಆದರೆ ಬೆಕ್ಕು ಹಾಗೆ ಮಾಡಿಲ್ಲ. ಮನೆಯಲ್ಲಿ ಆರಾಮಾಗಿರಬಹುದು, ತಿನ್ನೋದಕ್ಕೆ ಮಲಗುವುದಕ್ಕೆ ತೊಂದರೆ ಇಲ್ಲ ಆದರೆ ಯಥೇಚ್ಛವಾಗಿ ಪ್ರೀತಿ ಮಾಡ್ತಾ ಇತ್ತು, ಹೇಳಿದ ಮಾತನ್ನು ಚಾಚೂ ತಪ್ಪದೆ ಪಾಲಿಸಿ ಎಲ್ಲರನ್ನ ಪ್ರೀತಿಯಿಂದ ನೋಡುತ್ತಿತ್ತು. ಮನೆಯ ಹೊರಗೊಂದು ನಾಯಿ ಇದೆ. ನಮಗೆ ಭಯ ಯಾಕೆಂದರೆ ಅದು ನಮ್ಮ ಮನೆಯನ್ನು ತೊರೆದು ಹೋದರೆ ಆ ನಾಯಿಗೆ ಸ್ವಾಭಿಮಾನವಿದೆ ಈ ಮನೆಯಲ್ಲವಾದರೆ ಇನ್ನೊಂದು ಮನೆಯಲ್ಲಿ ಅನ್ನ ಸಂಪಾದಿಸುತ್ತೇನೆ ಅನ್ನುವ ಧೈರ್ಯ, ಬದುಕು ತುಂಬಾ ವಿಶಾಲವಾಗಿದೆ ಬದುಕನ್ನ ರೂಪಿಸಿಕೊಳ್ಳಬೇಕು ಅನ್ನೋದು ಪ್ರಾಣಿಗಳನ್ನು ಕಂಡಾಗ ನಾನು ಯಾವುದನ್ನ ಅಳವಡಿಸಿಕೊಳ್ಳಬೇಕು ಅನ್ನೋದೇ ಯೋಚನೆ ನೀವು ಆಗಿದ್ರೆ ಏನು ಮಾಡ್ತಾ ಇದ್ರಿ ನಾಯಿಯೋ ಬೆಕ್ಕೋ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ