ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೧೧೮)- ಆಣೆ ಪ್ರಮಾಣ

ಸಮಯ ಸಿಕ್ಕಾಗ ಸುತ್ತಮುತ್ತ ಓಡಾಡೋದು ನನ್ನ ಅಭ್ಯಾಸ. ಹಾಗೆ ಇವತ್ತು ಓಡಾಡ್ತಾ ಪ್ರತಿಸಲವೂ ಜನರನ್ನ ಭೇಟಿ ಆಗ್ತಾ ಇದೆ ಈ ಸಲ ಯಾರು ಸಿಕ್ತಾರೆ ಅಂತ ನೋಡುವಾಗ ಅಲ್ಲಲ್ಲಿ ಆಣೆ ಪ್ರಮಾಣದಲ್ಲಿ ಓಡಾಡ್ತಾ ಇದ್ದವು. ಈ ಆಣೆ ಪ್ರಮಾಣಗಳು ದಾರಿ ಬದಿಯಲ್ಲಿ ಯಾಕೆ ಓಡಾಡ್ತಾ ಇವೆ ಅಂತ ಅವರಲ್ಲಿ ಕೇಳೋಣ ಅಂದುಕೊಂಡು ನೇರವಾಗಿ ಪ್ರಶ್ನೆಗೆ ಇಳಿದೆ .ಅವುಗಳಿಂದ ಅದ್ಬುತವಾದ ಉತ್ತರವು ಸಿಕ್ಕಿತು.

Image

ಒತ್ತಡ

ಮಾನವನಿಗೆ ಒತ್ತಡಗಳು ಸಹಜ. ಒತ್ತಡಗಳಿರದ ಬದುಕು ನಿಜವಾಗಿಯೂ ಅರ್ಥಪೂರ್ಣವಾಗದು. ಆದರೆ ಒತ್ತಡದ ಪ್ರಮಾಣವು ಎಷ್ಟಿದೆಯೆಂಬುದು ಮುಖ್ಯವಾಗುತ್ತದೆ. ಒಂದು ಕಾರ್ಯವನ್ನು ನಿಭಾಯಿಸಲು ಆಗದ ಸ್ಥಿತಿಯ ಒತ್ತಡವಿದ್ದರೆ ಮನುಷ್ಯ ಭಾವನಾತ್ಮಕವಾಗಿ ಕುಗ್ಗುತ್ತಾನೆ. ನಿಭಾಯಿಸಲು ಸಾಧ್ಯವಾಗಿ ವಿಜಯ ಪತಾಕೆ ಹಾರಿಸುವಂತಾದರೆ ಅದೇ ಮನುಷ್ಯ ಭಾವನಾತ್ಮಕವಾಗಿ ಹಿಗ್ಗುತ್ತಾನೆ.

Image

ಮಾನವ ಶರೀರ ಎಂಬ ಅದ್ಭುತ ಜೀವಂತ ಯಂತ್ರ (ಭಾಗ 2)

11)”ಅಲ್ಬಿನಿನ್” ಬಾಧೆಯಿರುವ ಮನುಷ್ಯರಿಗೆ “ಮೇಲಾನಿನ್” (ಚರ್ಮ, ಕಣ್ಣು ಮತ್ತು ಕೂದಲುಗಳ ಬಣ್ಣಕ್ಕೆ ಕಾರಣವಾದ ವಸ್ತು) ಉತ್ಪಾದಿಸಲು ಸಾಧ್ಯವಿಲ್ಲ. ಇದರಿಂದಾಗಿ ಅವರಲ್ಲಿ ಬಿಳಿ ಕೂದಲುಗಳು ಮತ್ತು ಚರ್ಮದಲ್ಲಿ ಹಾಲುಬಿಳಿ ಕಲೆಗಳು ಮೂಡುತ್ತವೆ ಹಾಗೂ ಕಣ್ಣುಗಳು ಪೇಲವ ಆಗುತ್ತವೆ.

12)ಮನುಷ್ಯನ ದೇಹದಲ್ಲಿ ಅಂಗಾಲು, ಅಂಗೈ ಮತ್ತು ತುಟಿಗಳ ಹೊರತಾಗಿ ಬೇರೆಲ್ಲ ಹೊರಭಾಗಗಳನ್ನು ಕೂದಲುಗಳು ಆವರಿಸಿವೆ.

13)ಒಬ್ಬ ಮಾನವ ನಗಲು 17 ಸ್ನಾಯುಗಳನ್ನು ಬಳಸಿದರೆ ಮುಖ ಸಿಂಡರಿಸಲು 43 ಸ್ನಾಯು ಬಳಸುತ್ತಾನೆ.

14)ಮನುಷ್ಯ ಶರೀರದಲ್ಲಿರುವ ಒಂದೇ ಒಂದು ಬಹುಮುಖಿ ಗಂಟು ಹೆಬ್ಬೆರಳಿನ ಗಂಟು. ಇದು ಹೆಬ್ಬೆರಳನ್ನು ಮುಂದಕ್ಕೆ, ಹಿಂದಕ್ಕೆ ಮತ್ತು ಅಕ್ಕಪಕ್ಕಗಳಿಗೆ ಚಲಿಸಲು ಸಹಕಾರಿ.

Image

ನವಣೆ ಕಟ್ಲೆಟ್

Image

ಬೊಂಬಾಯಿ ರವೆಯನ್ನು ಹೊರತು ಪಡಿಸಿ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಬೇಕು. ಆಮೇಲೆ ಉಂಡೆ (ಚಪಾತಿ ಉಂಡೆಗಾತ್ರ) ಮಾಡಿ ಬೊಂಬಾಯಿ ರವೆಯಲ್ಲಿ ಉರುಳಿಸಿ ತಟ್ಟಿ ಕಾವಲಿಯಲ್ಲಿ೨ ಬದಿ ಬೇಯಿಸ ಬೇಕು. ಸ್ವಲ್ಪ ತುಪ್ಪ ಅಥವಾ ಎಣ್ಣೆ ಬಳಸಬಹುದು.

ಬೇಕಿರುವ ಸಾಮಗ್ರಿ

ಬೇಯಿಸಿದ ಬಟಾಟೆ ೫, ಬೇಯಿಸಿದ ನವಣೆ ೪ ಚಮಚ, ಚಾಟ್ ಮಸಾಲ ಅರ್ಧ ಚಮಚ, ಮೆಣಸಿನ ಪುಡಿ ಅರ್ಧ ಚಮಚ, ಹೆಚ್ಚಿದ ಹಸಿಮೆಣಸು ೧ ಚಮಚ, ಕೊತ್ತಂಬರಿ ಸೊಪ್ಪು ೨ ಚಮಚ, ಹೆಚ್ಚಿದ ಬೇವಿನ ಸೊಪ್ಪು ೩ ಚಮಚ, ರುಚಿಗೆ ಉಪ್ಪು, ಅರ್ಧ ಚಮಚ ತುರಿದ ಶುಂಠಿ, ಚಿಟಿಕೆ ಇಂಗಿನ ಹುಡಿ, ಹುರಿದ ಬೊಂಬಾಯಿ ರವೆ ೪ ಚಮಚ

ದೂರದೇಶವಾಸಿ

ಪುಸ್ತಕದ ಲೇಖಕ/ಕವಿಯ ಹೆಸರು
ಕಿರಣ್ ಉಪಾಧ್ಯಾಯ
ಪ್ರಕಾಶಕರು
ವಿಶ್ವವಾಣಿ ಪುಸ್ತಕ, ರಾಜರಾಜೇಶ್ವರಿ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ: ೨೦೨೪

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಾಸಿಯಾದ ಕಿರಣ್ ಉಪಾಧ್ಯಾಯರು ಈಗ ಉದ್ಯೋಗ ನಿಮಿತ್ತ ಕೊಲ್ಲಿ ರಾಷ್ಟ್ರ ಬಹ್ರೈನ್ ನಿವಾಸಿ. ನಾಟಕ, ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಪ್ರತೀ ಸೋಮವಾರ ‘ವಿಶ್ವವಾಣಿ' ಪತ್ರಿಕೆಯಲ್ಲಿ ‘ವಿದೇಶವಾಸಿ’ ಎಂಬ ಅಂಕಣ ಬರೆಯುತ್ತಾರೆ.

ಕರಿಮೆಣಸಿಗೆ ನಿಧಾನ ಸೊರಗು ರೋಗ ಹಾವಳಿ

ಕರಿ ಮೆಣಸಿನ ಬಳಿಯಲ್ಲಿ ಎಲೆಗಳು ಹಳದಿಯಾಗಲಾರಂಭಿಸಿವೆ. ಕರೆಗಳು ಉದುರುತ್ತಿವೆ. ಎಲೆಗಳು ಬಾಡುತ್ತಿವೆ. ಈ ವರ್ಷ ಮಳೆ ಅಧಿಕವಾದ ಕಾರಣ ರೋಗ ನಿಯಂತ್ರಣದಲ್ಲಿಲ್ಲ ಎಂದು ಈಗ ಗೊತ್ತಾಗುತ್ತಿದೆ. ಮಳೆಗಾಲದ ಅನುಕೂಲಕರ ವಾತಾವರಣದಲ್ಲಿ ಕರಿಮೆಣಸು ಬಳ್ಳಿಗೆ ಫೈಟೋಪ್ತೆರಾ ಕ್ಯಾಪ್ಸಿಸಿ ಶಿಲೀಂದ್ರ ಸೋಂಕು ತಗಲಿ ಅದರ ಬೇರು ವಲಯ ಘಾಸಿಯಾಗಿರುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೧೧೭)- ಹನಿ

ಆ ನೀರ ಹನಿಗೆ ತುಂಬಾ ಬೇಸರವಾಗಿತ್ತು. ಬೇಜಾರು ಅಂದ್ರೆ ಅಷ್ಟು ಇಷ್ಟ ಅಲ್ಲ. ತನಗೆ ತನ್ನದೇ ಆದ ಒಂದು ಅದ್ಭುತ ಸ್ವರೂಪವಿಲ್ಲ, ಬರಿಯ ಹನಿಯಾಗಿ ಬದುಕ್ತಾ ಇದ್ದೇನೆ. ನನ್ನಿಂದ ದೊಡ್ಡದೇನೋ ಸಾಧನೆ ಆಗ್ತಾ ಇಲ್ಲ . ನನ್ನಿಂದ ಈ ಸಮಾಜಕ್ಕೆ ಉಪಯೋಗ‌ ಆಗ್ತಾ ಇಲ್ಲ .ನನ್ನ ಬದುಕಿಗೊಂದು ಅರ್ಥವೂ ಸಿಕ್ತಾ ಇಲ್ಲ.

Image

ಭಾರತದ ವಿಜ್ಞಾನಿಗಳಿಗೆ ಚಂದ್ರನ ಅಧ್ಯಯನದಲ್ಲಿ ಆಸಕ್ತಿ ಏಕೆ?

ಇಸ್ರೋ 'ಚಂದ್ರಯಾನ ಅಭಿಯಾನ'ಕ್ಕೆ ಅತೀಯಾದ ಮಹತ್ವ ಏಕೆ ನೀಡುತ್ತಿದೆ? ಹಾಗೆಯೇ, ಚಂದ್ರಯಾನ-4ರ ವಿಶೇಷತೆಗಳೇನು? ರವಿ ಕಾಣದ್ದನ್ನು, ಕವಿ ಕಂಡಂತೆ; ಜಗತ್ತಿನ ಅತ್ಯಂತ ಆಧುನಿಕ ತಂತ್ರಜ್ಞಾನ ಹೊಂದಿದ್ದ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ 'ನಾಸಾ' ಪತ್ತೆ ಹಚ್ಚದ ಯಾವ ಅಂಶ ಬಹಳ ಕಡಿಮೆ ಬಜೆಟಿನಲ್ಲಿ ಇಸ್ರೋ ಪತ್ತೆ ಹಚ್ಚಿ ಸಾಧನೆ ಮಾಡುತ್ತಿದೆ?

Image