ಹೀರೆಕಾಯಿ ಪಕೋಡ

ಬೇಕಿರುವ ಸಾಮಗ್ರಿ
ಕಡಲೆಹಿಟ್ಟು ೧ ಕಪ್, ಸಣ್ಣಗೆ ಹೆಚ್ಚಿದ ಹೀರೆಕಾಯಿ ೧ ಕಪ್, ಅಕ್ಕಿ ಹಿಟ್ಟು ೧ ಚಮಚ, ಹೆಚ್ಚಿದ ಈರುಳ್ಳಿ ೧/೨ ಕಪ್, ಹಸಿಮೆಣಸಿನ ಚೂರು ೧ ಚಮಚ, ಕೊತ್ತಂಬರಿ ಸೊಪ್ಪಿನ ಚೂರು ೨ ಚಮಚ, ಶುಂಠಿ ಚೂರು ೧/೪ ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ
ಕಡಲೆ ಹಿಟ್ಟನ್ನು ಬೋಂಡದ ಹಿಟ್ಟಿನ ಹದಕ್ಕೆ ಕಲಸಿ. ಮೇಲೆ ಹೇಳಿದ ಎಲ್ಲ ಸಾಮಾನುಗಳನ್ನು ಹಾಕಿ ಬೆರೆಸಿ. ಹಿಟ್ಟನ್ನು ಕೈಯಲ್ಲಿ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಕಾದ ಎಣ್ಣೆಯಲ್ಲಿ ಕರಿಯಿರಿ. ಸಂಜೆಯ ಟೀಗೆ ಸೊಗಸಾಗಿರುತ್ತದೆ.
-ಸಹನಾ ಕಾಂತಬೈಲು, ಮಡಿಕೇರಿ