ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೂರ್ತಿ ಪೂಜೆ ಬೇಕೆ ಬೇಡವೇ?

ಮೊನ್ನೆ ನಡೆದ ಸಂಸ್ಕೃತ ಸಮ್ಮೇಳನದಲ್ಲಿ ಆರ್ಯಸಮಾಜದ ಮಳಿಗೆಯಿಂದ ಮೂರ್ತಿ ಪೂಜೆ ಒಂದು ಜಿಜ್ನಾಸೆ ಎಂಬ ಪುಸ್ತಕ, ಸುಧಾಕರ  ಚತುರ್ವೇದಿಯವರದು, ಕೊಂಡುಕೊಂಡೆ

ಮೊತ್ತಮೊದಲಿಗೆ ಪರಮಾತ್ಮನಿದ್ದಾನೆ ಎಂಬ ಪ್ರತಿ ಪಾದನೆಯಿಂದ ಶುರುವಾಗುವ ಆ ಪುಸ್ತಕದಲ್ಲಿ ಮೂರ್ತಿ ಪೂಜೆ ಒಂದು ಮೂರ್ಖ . ಆಚರಣೆ ಹಾಗು ಅದರಿಂದ ಆಗುವ ಆನಾಹುತಗಳು ಇವುಗಳ ಬಗ್ಗೆ ವಿವರಿಸಿದ್ದಾರೆ 

ನಿಮ್ಮಗಳ ಅಭಿಪ್ರಾಯವೇನು?

 

ಸುಬ್ಬುವಿನ ಸಂಪದ ಪರ್ಯಟನೆ !

ನನಗೆ ಒಂದು ಅಭ್ಯಾಸವಿದೆ .... ಎಷ್ಟೋ ಇವೆ, ಅದರಲ್ಲಿ ಇದೂ ಒಂದು ...

 

ಅದೇನಪ್ಪಾ ಅಂದರೆ, ನಾನು ಬರೆದು, ಸಂಪದದಲ್ಲಿ ಪ್ರಕಟಿಸಿದ ಬರಹವನ್ನು ನನ್ನ ಸ್ನೇಹಿತ ವೃಂದಕ್ಕೆ ಈ-ಮೈಲ್’ನಲ್ಲಿ ಕಳಿಸುವುದು. ಈ ಅಭ್ಯಾಸದಿಂದಾಗಿ ಹಲವಾರು ಮಂದಿಗೆ ಸಂಪದ ಪರಿಚಯ ಮಾಡಿಕೊಟ್ಟ ಹೆಮ್ಮೆ ನನಗೆ !

 

ಸರಿ ... ಸಂತೋಷ ... ಏನೀಗ? ಅಂದಿರಾ. ಮೊದಲೇ appraisal ಸಮಯ. ಅಂದರೆ, ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವ ಸಮಯ. ಹಾಗೆ ತಟ್ಟಿಕೊಂಡು ನಾನು ಮಾಡಿರುವ ಈ ಪ್ರಚಾರದ ಕಾರ್ಯವನ್ನು ಹೇಳಿಕೊಂಡಲ್ಲಿ, ಸಂಪದದ ಹರಿಕಾರರು ಏನಾದರೂ ಪ್ರಮೋಷನ್ ಕೊಡ್ತಾರೇನೋ ಅನ್ನೋ (ದುರ್)ಉದ್ದೇಶ ಇಲ್ಲ ಕಣ್ರೀ ....
ನಾನು ಮಾಡಿದ ಈ ಪ್ರಚಾರ ಕೆಲಸದಿಂದ ಏನಾಯ್ತು ಅಂತ ಹೇಳಲಿದ್ದೀನಿ, ಕೇಳಿ ...

 

" ಅದಕ್ಕಿನ್ನೂ ಕಾಲವಿದೆ"

"ವೇದಸುಧೆ" ಎಂಬ ನನ್ನ ಬ್ಲಾಗ್ ಹೆಸರು  ಕೇಳಿದಾಗ ಹಲವರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನಾನು ಕೇಳಿದ್ದೇನೆ.
* ಈಗತಾನೇ ಬಿ.ಇ.ಮುಗಿಸಿ ಒಂದು ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿರುವ ನನ್ನ ಮಗನಿಗೆ ಹೇಳಿದೆ" ನನ್ನ ಬ್ಲಾಗ್ "ವೇದಸುಧೆ"ಯನ್ನು ನೋಡು. ಅದರ ಬಗೆಗೆ ಪೂರ್ಣ ವಿಚಾರ ತಿಳಿಯಲು ವ್ಯವಧಾನವಿಲ್ಲದ ಅವನು ಹೇಳಿದ " ಅದಕ್ಕಿನ್ನೂ ಕಾಲವಿದೆ" " ನಾನೂ ನಿನ್ನ ವಯಸ್ಸಿಗೆ ಬಂದಾಗ ಅದೆಲ್ಲಾ  ಶುರುಮಾಡುವೆ
* ವೇದಸುಧೆ ಹೆಸರು ಕೇಳಿದೊಡನೆ ಪುರೋಹಿತರೊಬ್ಬರು " ಎಲ್ಲಾ ವ್ರಥಕಥೆಗಳ ಬಗ್ಗೆಯೂ ಹಾಕಿದ್ದೀರಾ?
* ಸಾಮಾನ್ಯ ಗೃಹಸ್ತರೊಬ್ಬರು ಯಾವುದೋ ಪೂಜಾ ವಿಧಾನದ ಬಗ್ಗೆ ತಮ್ಮ ಸಂಶಯ ಕೇಳಿದರು
* ಆಸ್ತಿಕರೊಬ್ಬರು ಯಜ್ಞ ಯಾಗಾದಿಗಳ ಫೋಟೋಗಳನ್ನು ಕಳುಹಿಸಿಕೊಟ್ಟರು

ಜನ ಏಕೆ ಹೀಗೆ?

ಕಳೆದ ವಾರಾಂತ್ಯದಂದು ಮಂತ್ರಾಲಯ ಪ್ರವಾಸ ಕೈಗೊಂಡಿದ್ದೆವು. ಬೆಂಗಳೂರಿಂದ ರಾಜ ಧ್ವಂಸ(ಹಂಸ) ಬಸ್ಸಿನಲ್ಲಿ ಹೊರೆಟೆವು. ಧ್ವಂಸ ಏಕೆಂದರೆ ಬಸ್ಸಿನಲ್ಲಿ ಹೋದ ಹಾಗೆ ಇರಲಿಲ್ಲ, ಯಾವುದೋ ರಾಗಿ ಮಿಲ್ ನಲ್ಲಿ ಕೂತಂತ ಅನುಭವವಾಯಿತು. ಅದೇನೋ ಸಮಸ್ಯೆಯಿಂದ ಪೂರ್ತಿ ಪ್ರಯಾಣ ಗಿರ್ ಗಿರ್ ಗಿರ್ ಎಂದು ಸದ್ದು ಮಾಡುತ್ತಾ ಎಲ್ಲರ ನಿದ್ದೆ ಕೆಡಿಸುತ್ತಾ ಮಂತ್ರಾಲಯ ತಲುಪಿತು. ಮುಂಚೆಯೇ ತಂಗಲು ವ್ಯವಸ್ಥೆ ಮಾಡಿದ್ದರಿಂದ ಏನೂ ತೊಂದರೆ ಇರಲಿಲ್ಲ. ನಮ್ಮ ಕೋಣೆಗೆ ತೆರಳಿ ಬಹಿರ್ದೆಶೆ ಮುಗಿಸಿಕೊಂಡು ಸ್ನಾನಕ್ಕೆ ನದಿಗೆ ತೆರಳೋಣ ಎಂದುಕೊಂಡೆವು. ಮೂವರು ಮಾತ್ರ ನಾವು ಇಲ್ಲೇ ಕೋಣೆಯಲ್ಲೇ ಬಿಸಿನೀರು ಸ್ನಾನ ಮಾಡುವುದಾಗಿ ಹೇಳಿದರು. ನಾವು ಕ್ಷೇತ್ರಕ್ಕೆ ಬಂದಿದ್ದೀವಿ ಒಂದು ದಿನವಾದರೂ ನದಿಯಲ್ಲಿ ಸ್ನಾನ ಮಾಡೋಣ ಎಂದಾಗ ಇಲ್ಲ ನಾವು ಇಲ್ಲೇ ಮಾಡುತ್ತೇವೆ ಎಂದು ಅಲ್ಲೇ ಬಿಸಿ ನೀರ ಸ್ನಾನ ಮಾಡಿದರು. ಮಿಕ್ಕ ಎಲ್ಲರೂ ನದಿಯಲ್ಲಿ ಸ್ನಾನ ಮಾಡಲು ಹೊರಟೆವು.

ಅದು ಮನವು ನುಡಿವ ಭಾಷೆ.....

ಮುನ್ನುಡಿ: ನಮ್ಮ ಭಾವನೆಗಳನ್ನು ನಾವು ಶಬ್ಧಗಳಲ್ಲಿ ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ.......ಅದನ್ನು ಕೇವಲ ಅನುಭವಿಸಬಹುದು ಅಷ್ಟೇ.......ಹಾಗೆಯೇ......ಬರೀ ಮಾತಿನಲ್ಲಿ ನಾವು ದೇವರ ನೆನೆದರೆ....ಅದು ಅವನಿಗೆ ಸೇರುವುದಿಲ್ಲ....ಮನಸ್ಸು ಅವನಲ್ಲಿ ಮೊರೆಯಿಟ್ಟರೆ ಮಾತ್ರ...ಅದು ಅವನನ್ನು ಮುಟ್ಟುತ್ತದೆ.....


  


ಅವೂ ಶಬ್ಧಗಳು.... ಏನೂ ಹೇಳವು


ಪೂರ್ತಿ ಭರ್ತಿ ಭಾಷೆ(ಭಾವನೆ + ಆಶೆ= ಭಾಷೆ)


ಮಾತಾಡು ಮನವೇ ನೀ ತಿಳಿಸಬೇಕು


ಆವಗ ನನ್ನ ಆಶೆ......


 


ಆ ಮಡಿಲ ಮಲಗಿ


ಈ ಹೆಗಲ ಎರಗಿ


ಕಂಡಂತ ಕನಸ ಭಾಷೆ.....


ಮೂಕ ಶಬ್ಧಗಳು ನುಡಿಯಲಾರವು


ಮನದ ಮಹಾ ಆಶೆ.....


 


ಆ ತಾಯಿ ನಗುವ


ಈ ಮಗುವು ಅಳುವ


ನಡುವೆ ಹರಿವ ಭಾಷೆ.....


ಶಬ್ಧಗಳು ಅಲ್ಲಿಗೆ ಹೋಗಲಾರವು


ಅದು ಮನವು ನುಡಿವ ಭಾಷೆ.....


 


ಹಾಡು ನನ್ನದು, ಕೇಳದು ನಿನಗೆ


ಶ್ಲೋಕ ಯಾವುದೂ ತಾಗದು ನಿನಗೆ

“ಆಳ ಮುಳುಗುವಿಕೆ” ಎಂಬ ಅಪಾಯಕಾರಿ ಕ್ರೀಡೆಯ ಕುರಿತು............

                ನನಗೆ ತುಂಬಾ ಆಶ್ಚರ್ಯವೆಂದೆನಿಸುವ ವಿಷಯಗಳನ್ನ ಇತರರೊಡನೆ ಹಂಚಿಕೊಳ್ಳುವುದು ನನಗಿಷ್ಟ. ಈ ಹಿಂದಿನ ನನ್ನ ಅನೇಕ ಬರಹಗಳು ಅಂತಹವೇ. ಈಗ ನಾನು ಹೇಳಹೊರಟಿರುವುದು ಮುಳುಗುವಿಕೆ (Competitive Apnea) ಎಂಬ ಕ್ರೀಡೆಯ ಕುರಿತು. ಈ ಕ್ರೀಡೆಯ ವಿಷಯ ನಿಮಗೆ ಗೊತ್ತಿರುವ ಸಂಭವ ಕಡಿಮೆಯೆಂದೇ ನನ್ನನಿಸಿಕೆ. ಆದ್ದರಿಂದಲೇ ಈ ಲೇಖನ.

ವೇದಗಳನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಸುಳ್ಳು, ಭ್ರಮೆ ಮತ್ತು ಸತ್ಯ

ಮೊದಲನೆ ಸಾಲಿನಲ್ಲೆ ಸ್ಪಷ್ಟಪಡಿಸುತ್ತಿದ್ದೇನೆ ವೇದದ ಬಗ್ಗೆ ನನಗೇನೂ ತಿಳಿದಿಲ್ಲ. ತಿಳಿಯುವ ಕುತೂಹಲವಿದೆ.

ವೇದದ ಮೂಲ ಸಿದ್ದಾಂತ

ಜ್ಞಾನ ಮತ್ತು ಅಹಿಂಸೆ, ಒಟ್ಟು

(ಜೀವಾತ್ಮ ಪರಮಾತ್ಮ

ಆತ್ಮ ಎಂದರೇನು?) ಇದರ ಬಗ್ಗೆ ನನಗಿರುವ ಸಂಶಯವನ್ನು ಪರಿಹರಿಸಕೊಳ್ಳಬೇಕಿದೆ. ಏಕೆಂದರೆ ಆತ್ಮದ ಅಸ್ತಿತ್ವದಲ್ಲಿ ನನಗೆ ನಂಬಿಕೆಯಿಲ್ಲ. ಆತ್ಮ ಎನ್ನುವುದೇ ಇಲ್ಲ ಎನ್ನುವುದು ನನ್ನ ಬಲವಾದ ಅಭಿಪ್ರಾಯ. ದೀಪ ಉರಿಯುತ್ತಿದೆ, ಎಣ್ಣೆ, ಬತ್ತಿ, ಮುಗಿದು ಹೋದಾಗ ಅಥವ ಹೊರಗಿನ ಗಾಳಿ(ಒತ್ತಡ) ಯಾವುದರಿಂದಾದರೂ ಅದು ಆರಿ ಹೋಗಬಹುದು.   

ಸ್ತ್ರೀಯರಿಗೆ ವೇದಾಧ್ಯಯನಕ್ಕೆ ಅವಕಾಶವಿಲ್ಲವೆ?

ಭಕ್ತಿ ಎಂದರೇನು?

ಪಂಚಭೂತಗಳ ಆರಾಧನೆ ಪ್ರಾರಂಭಕ್ಕೆ  ಕಾರಣವೇನಿರಬಹುದು?

ಮುಚಿಟ್ಟ ಪ್ರೇಮ

ನನ್ನ ಮನದ ಹೊವನ್ನು ಕಂಪಿಸಲು
ತಂಗಾಳಿಯಂತೆ ಸುಳಿದೆ
ಕತ್ತಲೆಯ  ಜೀವನವನ್ನು ಬಣ್ಣಿಸಲು
ನೂರಾರು ರಂಗನ್ನು ವರ್ಣಿಸಿದೆ


 


ನಿನ್ನ ಮನದ ಮಾತನ್ನು
ಹೇಳದೆ ಮೌನವಾದೆ
ಸ್ನೇಹವೆಂಬ ಸಂಭಂದದಿಂದ
ಪ್ರೀತಿಯನ್ನು ಅಳಿಸಲು ಆಗದೆ
ಉಳಿಸಿಕೊಳ್ಳಲು ಆಗದೆ ಪೇಚಾಡಿದೆ


 


ನಿನ್ನ ಮನದ ಈ ಕಾಣದ
ಪ್ರೀತಿಯನ್ನು ಮುಚ್ಚಿ ಇಡಬೇಡ
ನಿನ್ನ ಹೃದಯದ ಭಾವನೆಗಳನ್ನು
ನೀನು ಕಾದರಿಸಬೇಡ


 

ಇದು ಸೀರಿಯಸ್ ವರ್ತನೆಯೇ?!

          ಆಡಳಿತ ಭ್ರಷ್ಟತೆಯ ಬಗ್ಗೆ ಪ್ರಶ್ನಿಸುವುದು ವಿಪಕ್ಷಗಳ ಸೆಂಟ್-ಪರಸೆಂಟ್ ಹಕ್ಕು. ಇಂತಹ ರಣವೀಳ್ಯಕ್ಕೆ ವಿಧಾನ ಮಂಡಲ ಅತ್ಯುಚಿತ ವೇದಿಕೆಯೂ ಹೌದು. ಆದರೆ ಈಗ ನಡೆಯುತ್ತಿರುವ ಕಲಾಪ ಅದಾಗಿಲ್ಲ!


          ಆಳುವವರ ಮಾವಾಳ್ಲುತನ, ಸ್ವಹಿತಕ್ಕಾಗಿ ಸರಕಾರದ ಬೊಕ್ಕಸಕ್ಕೆ ಪಂಗನಾಮ, ಎಲ್ಲೆ-ಗಡಿಗಳಿಲ್ಲದೆ, ದೈತ್ಯ ಹಿರಣ್ಯಾಕ್ಷನಂತೆ ಭೂಕಬಳಿಕೆ ಇತ್ಯಾದಿ ಅಕಲ್ಯಾಣ ಗುಣಗಳು ಮುಗಿಲೆತ್ತರಕ್ಕೆ ಬಿಂಬಿತವಾಗುತ್ತಿವೆ. ಅವುಗಳ ಸತ್ಯಾಸತ್ಯತೆಯನ್ನು ಪ್ರತಿಪಕ್ಷಗಳು ಪದರ-ಪದರವಾಗಿ ಬಿಚ್ಚಿಡಲೇಬೇಕು. ಆದರವು ಸದನದಲ್ಲಿ ಧರಣಿಯ ಪೋಸ್ ಕೊಟ್ಟು ಎದ್ದುಹೋಗುತ್ತಿವೆ! ಚಲಾವಣೆಯಲ್ಲುಳಿಯಲು ಇದು ಅವರಿಗೊಂದು ಸ್ಟ್ರ್ಯಾಟಜಿಯಾಗಬಹುದು. ಆದರೆ ಮುಂದಿನ ಚುನಾವಣೆ ಗೆಲ್ಲಲು ಬುನಾದಿಯಂತೂ ಅಗುವುದಿಲ್ಲ!