ಮುಚಿಟ್ಟ ಪ್ರೇಮ
ಕವನ
ನನ್ನ ಮನದ ಹೊವನ್ನು ಕಂಪಿಸಲು
ತಂಗಾಳಿಯಂತೆ ಸುಳಿದೆ
ಕತ್ತಲೆಯ ಜೀವನವನ್ನು ಬಣ್ಣಿಸಲು
ನೂರಾರು ರಂಗನ್ನು ವರ್ಣಿಸಿದೆ
ನಿನ್ನ ಮನದ ಮಾತನ್ನು
ಹೇಳದೆ ಮೌನವಾದೆ
ಸ್ನೇಹವೆಂಬ ಸಂಭಂದದಿಂದ
ಪ್ರೀತಿಯನ್ನು ಅಳಿಸಲು ಆಗದೆ
ಉಳಿಸಿಕೊಳ್ಳಲು ಆಗದೆ ಪೇಚಾಡಿದೆ
ನಿನ್ನ ಮನದ ಈ ಕಾಣದ
ಪ್ರೀತಿಯನ್ನು ಮುಚ್ಚಿ ಇಡಬೇಡ
ನಿನ್ನ ಹೃದಯದ ಭಾವನೆಗಳನ್ನು
ನೀನು ಕಾದರಿಸಬೇಡ
ನಿನ್ನ ಬಾಳಿನ ದೀಪವಾಗಿ , ನಿನ್ನ ನೋವಲ್ಲು ನಲಿವಾಗಿ
ನಿನ್ನ ಆಸರೆಯಾಗಿ , ನಿನ್ನ ಬಾಳಾ ಸಂಗಾತಿಯಾಗಿ ಇರ ಬಯಸುವವಳು
ನಿನ್ನ ಪ್ರೀತಿಗಾಗಿ ಹಂಬಲಿಸುತಿರುವ
ಹುಚ್ಚು ಪ್ರೇಮಿ.......