ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಭಾವಿತ ಠಕ್ಕ

    ಕೊಡಗಿನಲ್ಲಿ ಹಸಿರು ಗದ್ದೆ-ತೋಟಗಳ ನಡುವೆ ಹತ್ತಡಿ ಅಗಲದ ಡಾಮರುರಸ್ತೆಯಲ್ಲಿ ಸಾಗುತ್ತಿದ್ದರೆ ಇದ್ದಕ್ಕಿದ್ದಂತೆಯೇ ಇಬ್ಬದಿಗಳಲ್ಲಿ ಆರೆಂಟು ಅಂಗಡಿಗಳು, ಒಂದು ಬ್ಯಾಂಕ್, ಒಂದು ಪೋಸ್ಟ್ ಆಫೀಸ್, ಒಂದು ಮಸೀದಿ, ಒಂದು ಮೆಕಾನಿಕ್ ಅಂಗಡಿ, ಅಲ್ಲಲ್ಲಿ ಕೆಲವಾರು ಮನೆಗಳು - ಮೊದಲಾದವು ಪ್ರತ್ಯಕ್ಷವಾಗಿಬಿಡುತ್ತವೆ. ಈ ಒಂದು-ಒಂದೂವರೆ ಕಿಲೋಮೀಟರ್ ಉದ್ದದ ಸಂಕಲನ ಒಂದು ಪೇಟೆ! ಪೇಟೆಯೆಂದು ಹೇಳಿದರೆ ಸೋಮವಾರಪೇಟೆ, ವೀರಾಜಪೇಟೆ, ಮುಂತಾದವನ್ನು ಎಣಿಸಿಕೊಂಡಿದ್ದರೆ, ಕಣ್ಣಾರೆ ಕಂಡಾಗ ಅದೊಂದು ಊರೂ ಅಲ್ಲವಲ್ಲಾ ಎಂದನ್ನಿಸುತ್ತದೆ. 

ದೇವರಿದ್ದಾನೆ ಅನ್ನೋದಕ್ಕೆ ಏನು ಸಾಕ್ಷಿ ಅಂದರೆ .....

ಕಾಣದ ದೇವರು ಊರಿಗೆ ನೂರು, ಕಾಣುವ ತಾಯೇ ಪರಮಗುರು -ಒಂದು ಹಾಡು

ಕೆಟ್ಟ ಮಗನು ಇರಬಹುದು , ಕೆಟ್ಟ ತಾಯಿ ಇರುವದಿಲ್ಲ -ಶಂಕರಾಚಾರ್ಯರು

ದೇವರಿದ್ದಾನೆ ಅನ್ನೋದಕ್ಕೆ ಏನು ಸಾಕ್ಷಿ ಅಂದರೆ ತಾಯಿ, ತಾಯಿ ಅನ್ನೋ ಪದ ಇದೆ ನೋಡಿ ಲೋಕದಲ್ಲಿ ದೇವರ ಪ್ರತಿರೂಪವೇ ಅದು . ಮಗ ಚಂಡಾಲನೇ ಆಗಿರಬಹುದು, ಗುರು ಶಂಕರಾಚಾರ್ಯನೇ ಆಗಿರಬಹುದು. ಏನಾಗತ್ತೆ ಅನ್ನೋ ಯೋಚನೆಯೇ ಇಲ್ಲದೇ ಸಾಗೋದೊಂದೇ ಕೆಲಸ ತಾಯಿಗೆ, ತನ್ನದು ಅಂದುಕೊಂಡು. ಈ ಮಮತೆ ಈ ವಾತ್ಸಲ್ಯ ಎಲ್ಲ ದೇವರೊಬ್ಬನಿಗೇ ಮಾತ್ರ ಸಾಧ್ಯ - ಮಾಸ್ತಿ ವೆಂಕಟೇಶ ಅಯ್ಯಂಗಾರರು.

ಬಾಯಿ ಇರಬೇಕು , ಇಲ್ಲವೆ ತಾಯಿ ಇರಬೇಕು. - ಒಂದು ಗಾದೆಮಾತು.  

ಈ ತನಕ ಕೇಳಿರದ ಒಂದು ರಾಜ್ ಹಾಡು

ಈ ಕ್ಷಣಕ್ಕೆ ಗಿಳಿಯು ಪಂಜರದೊಳಿಲ್ಲ ಹೋಲುವ "http://www.kannadaaudio.com/Songs/Compilations/Legends-Padmabhushana-Dr-Rajkumar-Vol-2/Jeeva-Kogile.ram" ಕೇಳುತ್ತಿದ್ದೇನೆ .

 

ಜೀವ ಕೋಗಿಲೆ(ಯ) ಇಂಚರ

ಅದಕೆ ದೇಹವೆಂಬುದೇ ಪಂಜರ

ಇಂಚರ ಕೇಳಲು ಪಂಜರ ಅವಸರ(=ಅಗತ್ಯ?)

ಪಂಜರ ಮುರಿದರೆ ಇಂಚರ ಅಗೋಚರ

 

ನೀವೂ ಕೇಳಬಹುದು . ಹೊಸ ವಿಚಾರ ಇದೆ ಇಲ್ಲಿ!

ನೀವು ಏನಾದರೂ ಅಂದುಕೊಳ್ಳಿ

ನೀವು ಏನಾದರೂ ಅಂದುಕೊಳ್ಳಿ ನನಗಂತೂ ನಮ್ಮ ಆಡಳಿತದ ಬಗ್ಗೆ ಹೆಮ್ಮೆಯಿದೆ. ಏನಾದರೂ ಮಾಡುತಿರು ಮಂಕುತಿಮ್ಮ ಎಂಬಂತೆ ಹೊಸ ಹೊಸತು ಮಾಡುತ್ತಲೇ ಇರುತ್ತಾರೆ. ಅಲ್ಲಿ ಇಲ್ಲಿ ಸ್ವಲ್ಪ ನ್ಯೂನತೆ ಇರಬಹುದು. ಸಾವಿರಾರು ಜಾತಿ ನೂರಾರು ಭಾಷೆ ಪ್ರತೀ ನೂರು ಕಿಲೋಮೀಟರ್ ಗೆ ಬದಲಾವಣೆಗೊಳ್ಳುವ ಸಂಸ್ಕೃತಿಯ ನಡುವೆ ಭಾರತ ವಿಚಿತ್ರವಾಗಿ ಬೆಳಗುತ್ತಿದೆ. ಬೆಳವಣಿಗೆಯ ವೇಗ ನಿಧಾನ ಇರಬಹುದು ಅದುವೇ ಪ್ರಧಾನ ಬಿಡಿ.


ಜೋಗದ ಬುಡಕ್ಕೆ ಇಳಿಯಲು ಸುಂದರ ಮೆಟ್ಟಿಲು ಮದ್ಯೆ ಸುಂದರ ವಿಶ್ರಾಂತಿ ಗೃಹ ಮರದ ಕೆತ್ತನೆಯ ಕಂಬ ವಾವ್ ಎನ್ನದೆ ಇರಲಾಗದು ಬಿಡಿ. ದಬದಬ ಬೀಳುವ ನೀರಿನ ಮೋಜು ಇಲ್ಲದಿದ್ದರೂ ಗುಡುಗುಡು ಅಂತ ಮೆಟ್ಟಿಲು ಇಳಿದು ಕೆಳಗಡೆ ಹೋಗಿ ಮೇಲೆ ನೋಡಿ ಕುಬ್ಜವಾಗಿ ಅಬ್ಬಾ ಎಂದು ಉದ್ಘಾರ ಹೊರಡಿಸಬಹುದು.

ಹೀಗೊ೦ದು ಕೊರಿಯರ್ (ಕೊರೆಯುವವರ) ಪ್ರಸ೦ಗ !

ಹಲವಾರು ದಿನಗಳಿ೦ದ ಅನಿವಾಸಿ ಮಿತ್ರರೊಬ್ಬರ ಒತ್ತಾಯದ ಫಲವಾಗಿ ನನ್ನ "ಅರಬ್ಬರ ನಾಡಿನಲ್ಲಿ...." ಸರಣಿಯ ಲೇಖನಗಳನ್ನು "ಸ೦ಜೆವಾಣಿ"ಯ ಮ೦ಗಳೂರು ಆವೃತ್ತಿಯಲ್ಲಿ ಪ್ರಕಟಿಸಲು ಒಪ್ಪಿಕೊ೦ಡಿದ್ದೆ.  ಸಾಕಷ್ಟು ಕರೆಗಳು, ಮಿ೦ಚ೦ಚೆಗಳು ಅತ್ತಿ೦ದಿತ್ತ ಓಡಾಡಿದ ನ೦ತರ ಕೊನೆಗೂ ಆ ದಿನ ಬ೦ದೇ ಬಿಟ್ಟಿತು.  ಪ್ರಸಿದ್ಧ ದಿನಪತ್ರಿಕೆಯೊ೦ದರಲ್ಲಿ ನನ್ನ ಮೊದಲ ಲೇಖನ ಪ್ರಕಟವಾಗುವ ದಿನ!   ಹಿ೦ದಿನ ದಿನವೇ ಮಿ೦ಚ೦ಚೆಯಲ್ಲಿ ಪಿಡಿಎಫ್ ಪ್ರತಿಯನ್ನು ಕಳುಹಿಸಿದ್ದ ಸ೦ಪಾದಕರು "ನಿಮಗೆ ಶುಭವಾಗಲಿ, ಪತ್ರಿಕೆಯ ಪ್ರತಿಯನ್ನು ಕೊರಿಯರ್ ಮೂಲಕ ನಿಮ್ಮ ವಿಳಾಸಕ್ಕೆ ಕಳುಹಿಸಿದ್ದೇವೆ" ಎ೦ದು ಶರಾ ಬರೆದಿದ್ದರು.  ಕೊರಿಯರ್ ಕ೦ಪನಿಯ ವಿವರಗಳನ್ನೂ ನೀಡಿದ್ದರು.  ಆ ಕೊರಿಯರ್ ಕ೦ಪನಿಗೆ ಫೋನಾಯಿಸಿದರೆ ಅಲ್ಲಿದ್ದವನು ಎಲ್ಲವನ್ನೂ ಪರೀಕ್ಷಿಸಿ "ನಿಮ್ಮ ಹೆಸರಿನಲ್ಲೊ೦ದು ಕವರ್ ಇದೆ ಸ

ಆ ಮುಸುಕಿನೊಳಗೆ ನಿನ್ನೊಡನೆ

ಮುಸುಕಿನೊಳಗಿ೦ದ ನಿನ್ನೊಡನೆ ಮಾತನಾಡಬೇಕು
ಕನಸಿನೊಳಗಿ೦ದ ಬ೦ದು ನಿನ್ನನ್ನು ಸ್ಪರ್ಷಿಸಬೇಕು
ನಿನ್ನ ಮೋಹಕ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಬೇಕು
ಅದರಲ್ಲಿರುವ ನಿನ್ನ ಭಾವನೆಗಳನ್ನು ಓದಬೇಕು
ಮತ್ತೆ ಅದೇ ಕಲ್ಪನಾ ಲೋಕದಲ್ಲಿ ,,,ನನ್ನನ್ನೂ
ಕರೆದೊಯ್ಯುವೆಯಾ ,,,ಹೇ ಗೆಳತಿ ,,,,,
ಚಿಟ್ಟೆಯ೦ತೆ ಹಗುರವಾಗಬೇಕು
ನೀರಿನ೦ತೆ ಹರಿಯಬೇಕು
ಆಕಾಶದ೦ತೆ ಶುಬ್ರವಾಗಬೇಕು,,
ಆ ಮುಸುಕಿನೊಳಗೆ ನಿನ್ನೊಡನೆ......
ಕಿಲ ಕಿಲನೆ ನಗಬೇಕು ಮತ್ತೆ ಮತ್ತೆ ನಗಬೇಕು

ಬದಲಿ ಚಿಕಿತ್ಸಾ ಪಧ್ಧತಿಯಿಂದ ನಿಮಗೆ ಲಾಭ ಅಥವಾ ನಷ್ಟ ಆಗಿದೆಯೇ?

http://sampada.net/blog/asuhegde/24/12/2010/29672

                                       ಮತ್ತು

http://sampada.net/blog/mpneerkaje/07/01/2011/29885

 

ಈ ಎರಡು ಲೇಖನಗಳು ಪ್ರಸ್ತುತ ಬರಹದ ಹಿನ್ನೆಲೆ.

 

 

ಹೀಗ್ಯಾಕೆ?

                    ಹೀಗ್ಯಾಕೆ ?

ನಾನೆಷ್ಟು  ನೀರ  ಹನಿಸಿದರೂ 

ಮಣ್ಣಡಿಯ  ಗಡ್ಡೆ ಚಿಗುರಲೇ  ಇಲ್ಲ

 ಬಂದಿತೋ  ಪ್ರಥಮ  ಮಳೆ

 ಗಿಡವಾಗಿ  ಬಿಟ್ಟಿತೋ  ಹೂವ!


ನಾನೆಷ್ಟು  ಪರಿ ಹೇಳಿದರೂ

ಮಗ  ಅದನು  ಒಪ್ಪಲೇ  ಇಲ್ಲ

 ಬಂದಿತೋ  ಟೀಚರ  ಆದೇಶ 

ಅದ  ಮಾಡಿಬಿಟ್ಟನೋ  ಬೇಗ !  

ತುಕ್ರ ಬೆಂಗಳೂರಿಗೆ ಹೋದದ್ದು..

ಕಿಟಕಿಯ ಕಡೆಯಿಂದ ಬೀಸುವ ಚಳಿಗಾಳಿಗೆ ಕಬ್ಬಿಣವೂ ಮಂಜುಗಡ್ಡೆಯಾಗಿತ್ತು. `ಏನು ಚಳಿ ದೇವ್ರೆ’ ಅಂತ ಗೊಣಗುತ್ತ ತಣ್ಣಗಿನ ರೈಲಿನ ಕಬ್ಬಿಣದ ಸೀಟ್‌ ಮೇಲೆ ಮಲಗಲಾರದೇ ತುಕ್ರ ಎದ್ದು ಕುಳಿತುಕೊಂಡ. ಕಿಸೆಯಿಂದ ಬೆಲ್ಟ್‌ ತುಂಡಾಗಿರುವ ಟೈಟಾನ್‌ ಕಂಪನಿಯ ವಾಚ್‌ ತೆರೆದು ಗಂಟೆ ನೋಡಿಕೊಂಡ. ಇನ್ನೂ ಆರೂವರೆಯಷ್ಟೇ. ಏಳುವರೆಗೆ ಮೆಜೆಸ್ಟಿಕ್‌ಗೆ ತಲುಪುವುದಾಗಿ ಆತನಿಗೆ ಗೊತ್ತಿತ್ತು. ಈ ಚಳಿಯಲ್ಲಿ ಜನ ಹೇಗೆ ಬದುಕುತ್ತಾರಪ್ಪ ಅಂದುಕೊಳ್ಳುತ್ತ ರೈಲಿನ ಬಾಗಿಲ ಬಳಿ ಕುಳಿತುಕೊಂಡು ಒಂದು ಬೀಡಿಗೆ ಬೆಂಕಿ ಹಚ್ಚಿದ. ಒಳಗೆ ಹೊಗೆ ಪ್ರವೇಶಿಸಿದಾಗ ಮೈ ಒಂದಿಷ್ಟು ಬಿಸಿಯಾಗಿ ಹಾಯೆನಿಸಿತ್ತು. `ಸಾಬ್‌ ಬೀಡಿ’ ಅಂತ ಮುದುಕನೊಬ್ಬ ಇವನ ಪಕ್ಕ ಕುಳಿತುಕೊಂಡಾಗ ಅವನಿಗೂ ಒಂದು ತೆಗೆದುಕೊಟ್ಟ. ಆತ ಸಹ ಬಾಗಿಲ ಪಕ್ಕದಲ್ಲಿ ಇವನಿಗೆ ಒರಗಿ ಕುಳಿತ.

ಪ್ರಶಾಂತನಗರದಲ್ಲಿ ’ಥಟ್ ಅಂತ ಹೇಳಿ’ ಕಾರ್ಯಕ್ರಮ!

ಆತ್ಮೀಯರೆ!


ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ನೀವು ದೂರದರ್ಶನದಲ್ಲಿ ನೋಡುತ್ತಿರುತ್ತೀರಿ. ಅಂತಹುದೇ ಕಾರ್ಯಕ್ರಮಗಳನ್ನು ನಾನು ಅಲ್ಲಲ್ಲಿ ಸಾರ್ವಜನಿಕರಿಗೆ ವೈಯುಕ್ತಿಕ ಮಟ್ಟದಲ್ಲಿ ನಡೆಸುತ್ತಿರುತ್ತೇನೆ. ಕಳೆದ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೀಗೆ ಒಂದು ಕಾರ್ಯಕ್ರಮವನ್ನು ಕೈಗಾರಿಕಾ ಒಕ್ಕೂಟದವರ ಸಹಯೋಗದೊಡನೆ ನಡೆಸಿದೆ. ಸುಮಾರು ೧೦೦ ಜನರು ಆಯ್ಕೆಯ ಸುತ್ತಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ನಾಲ್ಕು ತಂಡಗಳು ಆಯ್ಕೆಯಾದವು. ಅವರಿಗೆ ಅಂತಿಮ ಕ್ವಿಜ಼್ ಸ್ಪರ್ಧೆಯನ್ನು ೧೦ ಸುತ್ತುಗಳಲ್ಲಿ ನಡೆಸಿದೆ. ಗೆದ್ದವರಿಗೆ ಬಹುಮಾನಗಳು ಪುಸ್ತಕರೂಪದಲ್ಲಿರುತ್ತವೆ ಎಂಬುದನ್ನು ನಾನು ವಿಶೇಷವಾಗಿ ಹೇಳಬೇಕಾಗಿಲ್ಲ. ಸ್ಪರ್ಧಿಗಳು ಉತ್ತರ ನೀಡದ ಕೆಲವು ಪ್ರಶ್ನೆಗಳನ್ನು ಪ್ರೇಕ್ಷಕರಿಗೆ ಕೇಳಿದೆ. ಸರಿ ಉತ್ತರವನ್ನು ನೀಡಿದವರಿಗೆ ಅಲ್ಲಿಯೇ ಒಂದು ಪುಸ್ತಕವನ್ನು ಬಹುಮಾನವಾಗಿ ನೀಡಿದೆ.