ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬ್ರಹ್ಮ

 ಬ್ರಹ್ಮ

ನನ್ನವಳು ಕೇಳಿದಳು ಚೆನ್ನಾದ ಪ್ರಶ್ನೆಯನು
ಬ್ರಹ್ಮ ಎಂಬುದು  ಏನು ? ತಿಳಿಸುವೆಯೇನು ?
ಬಹುಕಾಲದ ಸಂದೇಹವ
 ಪರಿಹರಿಸುವೆಯೇನು ?

ಬಲು ಸುಲಭದ ಪ್ರಶ್ನೆ
ಉತ್ತರಕೆ ನಾನಾಗ ತಿಣುಕಾಡಿದೆ
ಭಾರತೀಪತಿ ಬ್ರಹ್ಮ ಎಂದುಬಿಟ್ಟೆ
ಪದಗಳಿಗೆ ಎಟುಕದದು  ಎಂದು ಜಾರಿದ್ದೆ

ಅದ್ವೈತಧಾರೆಯಲಿ ಬ್ರಹ್ಮರಿಬ್ಬರು ಉಂಟೇ ?
ಬ್ರಹ್ಮವೆಂಬುದು ನಮಗೆ ದೂರವುಂಟೇ ?

ನೆನಪುಗಳ ಮೆರವಣಿಗೆಯಲ್ಲಿ

 ಅಂತೂ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದು ಹುಡುಗರೆಲ್ಲ ಸೇರಿ ಬಾಡಿಗೆ ಮನೆ ಮಾಡಿ ಆಮೇಲೆ ಒಂದು ಕೆಲಸ ಹುಡ್ಕಿದ್ದಾಯ್ತು. ಇನ್ನೇನು ಆರಾಮು ಅಂದ್ಕೊಂಡ್ರೆ ಸಮಸ್ಯೆ ಶುರುವಾಗಿದ್ದೆ ಆಗ. ಬೆಳಗ್ಗೆ ಎದ್ರೆ ಏನು ತಿಂಡಿ ಮಾಡೋದು ಅನ್ನೋ ಯೋಚನೆ, ಏನೋ ಮಾಡೋಣ ಅಂದ್ಕೊಂಡು ಶುರು ಮಾಡಿದ್ರೆ, ಇಲ್ಲ ಈರುಳ್ಳಿ ಅಥವಾ ಟೊಮೇಟೊ ಅಥವಾ ಮೆಣಸಿನಕಾಯಿ ಅಥವಾ ಹೆಸರುಬೇಳೆ ಹೀಗೆ ಏನಾದರೂ ಒಂದು ಮಿಸ್. ಅಂತೂ ತಿಂಡಿ ಮಾಡಿ ಆಫೀಸಿಗೆ ರೆಡಿ ಆಗಿ ಬಸ್ ಹಿಡಿಯೋಕೆ ಹೋದ್ರೆ, ನಮ್ಮ ಹಳ್ಳಿ ಬಸ್ಸಾದ್ರೂ ಆಗಬಹುದು ಉಹುಂ ಬಿ.ಎಂ.ಟಿ.ಸಿ ಬಸ್ ಸಹವಾಸ ಅಲ್ಲ. ಮಕ್ಕಳನ್ನು ಕಂಡ್ರೆ ಬೆಂಗ್ಳೂರಿನ ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗಿ ಕಚ್ಹೋ ಹಾಗೆ ಜನಗಳು ಸೀಟ್ ಹಿಡ್ಕೊಳ್ಳೋಕೆ ನುಗ್ತಿರ್ತಾರೆ.

ಬುರುಡೆ ಪುರಾಣ ....

ಮೊನ್ನೆ ತುಂಬಾ ಕೆಲಸವಿದ್ದ ಕಾರಣ, ಆಫೀಸ್ ನಿಂದ ಸ್ವಲ್ಪ ತಡವಾಗಿ ಹೋದೆ. ಮಡದಿ, ಮಗ ಇಬ್ಬರು ನಿದ್ದೆಯಲ್ಲಿ ಇದ್ದರು. ತೊಂದರೆ ಏಕೆ? ಮಾಡಬೇಕು ಎಂದು ಅವರನ್ನು ಎಬ್ಬಿಸದೇ, ನಾನೇ ಊಟ ಮಾಡಿ, ಬೆಡ್‌ರೂಮ್ ಗೆ ಹೋಗದೇ, ಹಾಲ್ ನಲ್ಲಿ ನಿದ್ದೆಗೆ ಜಾರಿದೆ. ಹಾಸಿಗೆ ಮೇಲೆ ಒರಗಿದ ಕೂಡಲೇ, ನಿದ್ರಾ ದೇವಿಗೆ ಶರಣಾಗಿ ಬಿಟ್ಟೆ. ಮಧ್ಯ ರಾತ್ರಿ ಯಾರೋ... ನನ್ನನ್ನು ಎಬ್ಬಿಸಿದ ಹಾಗೆ ಆಯಿತು. ಆ ಕಡೆ ಒರಗಿ ಮಲಗಿಕೊಂಡೆ. ಮತ್ತೆ ಬಡಿದು ಎಬ್ಬಿಸಿದ ಹಾಗೆ ಆಯಿತು. ಕಣ್ಣು ಬಿಟ್ಟೆ, ಚಾಕು ಹಿಡಿದು ಯಾರೋ.. ನಿಂತ ಹಾಗೆ ಅನ್ನಿಸಿತು. ನನ್ನ ಉಸಿರೇ ನಿಂತ ಹಾಗೆ ಆಗಿತ್ತು. ಪಕ್ಕದಲ್ಲಿ ಬೇರೆ ಮಡದಿ ಇಲ್ಲಾ, ಇದ್ದಿದ್ದರೆ ಸ್ವಲ್ಪ ಧೈರ್ಯ ಬರಬಹುದಿತ್ತು.

ಜನಪದ ಹಾಡು......

ಹಾಡು ಹಾಡು ನೀ ಹಾಡೊಂದನ್ನು


ಎಲ್ಲರೂ ಕೂಡುವ ಹಾಡೊಂದನ್ನು.......


ನನ್ನ ನಿನ್ನ ಎಲ್ಲರ ಹಾಡನ್ನು


ಎಲ್ಲರೂ ಹಾಡುವ ಹಾಡೊಂದನ್ನು.....


  


ಪದ ಪದ ಪೋಣಿಸೆ ಪದವಾದೀತು


ಎಲ್ಲರೂ ಹಾಡಲು, ಜನಪದವಾದೀತು.....


ಹಾಡಬೇಕು ಆ ಹಾಡೊಂದನ್ನು


ಜನರನು ಬೆಸೆಯುವ ಹಾಡೊಂದನ್ನು.....


 


ತಾತನ ಕಥೆಗಳು ಕಲಿಸುವ ಹಾಡು


ಅಜ್ಜಿಯ ತುತ್ತಲಿ ಬೆರೆತಿರೋ ಹಾಡು


ಇವುಗಳ ಸೇರಿಸಿ ಹಾಡನು ಮಾಡು


ಜನಪದವೆಂದು, ಅದನು ನೀ ಹಾಡು......


 


ಕಲ್ಲನು ಉಳಿಯು ಮೀಟುವ ಹಾಡು


ಹನಿಗಳು ಧರೆಯನು ತೊಳೆಯುವ ಹಾಡು.....


ಕಾಡಲಿ ಗಾಳಿಯು ಓಡುವ ಹಾಡು


ಮನವನು ಕುಣಿಸುವ ಜನಪದ ಹಾಡು.....


  


ಮಾರಮ್ಮ ಮೈ ಹೊಕ್ಕಿ, ಬೀರಪ್ಪ ಕುಣಿದಿರಲು


ತಮಟೆಯ ತೊಗಲು ಹಾಡುವ ಹಾಡು......


ನಡೆ-ನಡೆದು ಬಿದ್ದಾಗ, ದುಡಿ-ದುಡಿದು ಸತ್ತಾಗ


ಹುರಿದುಂಬಿಸಿ ಎತ್ತುವಾ ಜನಪದ ಹಾಡು......

ಇಂಚರದ ಹಕ್ಕಿಗೆ

ಕನ್ನಡಾಂಬೆ ಮಡಿಲ ವನದಿ

ನಿದ್ರಿಸುತಿಹ ವಿಹಗವೇ

ಜ್ಞಾನ  ಸೂರ್ಯನುದಯ ಸಮಯ

ಬರಲು ಜಡತೆ  ನ್ಯಾಯವೇ

 

ನಿನ್ನ ಸವಿಯ ಕೊರಳಿನಲ್ಲಿ

ಹಲವು ರಾಗ ಅಡಗಿದೆ

ವಿವಿಧ ಕಲೆಯು ಕಥೆಯು ತುಂಬಿ

ವಿಶ್ವಕೋಶದಂತಿದೆ

 

ಜನತೆ ಜಡತೆ ದುಃಖಗಳಲಿ

ಮುಳುಗಿ ಗುರಿಯ ಮರೆತಿದೆ

ನಿನ್ನ ದನಿಯ ಕೇಳಿ ಮಂದಿ

ಚೇತನವನು ತಾಳದೆ?

 

ಮಧುರ ರವದಿ ಹಾಡಿ ಜಗದ

ಜನಕೆ ಮಾಡು ಎಚ್ಚರ

ತನುಮನದಲಿ ಬಲವ ಮುದವ

ತರಲಿ ನಿನ್ನ ಇಂಚರ

-ಅಪ್ಪಿಕೋ ನನ್ನ ಒಪ್ಪಿಕೋ-

-ಅಪ್ಪಿಕೋ ನನ್ನ ಒಪ್ಪಿಕೋ-


 


ಮುಂಗಾರು ಮಳೆಯ ದನಿಗಳ, ಹನಿಗಳ ಲೀಲೆ,
ಆ ಹನಿಯ ಭೂ ಅಪ್ಪಿಗೆಯ ನೀ ಅರಿಯದೆ ಹೋದೆ ಓ ಬಾಲೆ,


 


ಹನಿ ಹನಿಯ ಚಮತ್ಕಾರದ, ಮನ ತಣಿಸುವ ಕಲೆ,
ನೀ ಅರಿಯದಾದೆ ಅದರ ಅಪ್ಪುಗೆಯ ಚಂದದ ಬೆಲೆ,


 


ಬಾನಿಗೂ, ಭೂಮಿಗೂ ಅಪ್ಪುಗೆಯ ಸೆಲೆ,
ಅದೇ ಆ ನೀರಿನ ಮುತ್ತಿನ ಹನಿಯ ನೆಲೆ


 


ನೀ ಅಪ್ಪಿಕೋ ನನ್ನ, ಆ ಓಡುವ ನದಿಯ ನೋಡಿ,
ನೀ ಒಪ್ಪಿಕೋ ನನ್ನ ಆ ಸಾಗರವ ಸೇರುವ ಪರಿಯ ಮೋಡಿ,


 


ನಾ ಅಪ್ಪುವೇ, ನಿನ್ನ ಒಪ್ಪುವೆ  ನನ್ನ ಬಾಳೆಲ್ಲಾ
ನೀ ಅಪ್ಪಿಕೋ ನನ್ನ ಒಪ್ಪಿಕೋ ನಿನ್ನ  ಅಂತರಾಳವೆಲ್ಲಾ,


 


ನನ್ನ ಸನಿಹ ನೀ ಸಹಿಸಿಕೋ ಅತೀ ಸಹನೆಯಿಂದ,
ನಾ ನಿನ್ನ ಸಂತ್ಯೆಸುವೆ ಅತೀ ಸಲುಗೆಯಿಂದ,


 


ದೂರ ಬೆಟ್ಟದ ಮನೆಯ ಸುತ್ತಾ ಹೊರಾಶಿಯ ಕನಸು ಬೇಡ,
ನಿನ್ನ ಮನದ ಹೂ ತೋಟದಲ್ಲಿ ನನ್ನ ನೆಡಲು ಮರೆಯ  ಬೇಡ,


 

ಲಾವಣ್ಯ ಎಂಬ ಬಾಲ್ಯದ ಗೆಳತಿ

ಮೊನ್ನೆ ನನ್ನ ರಿಲೇಷನ್‌ ಹುಡುಗಿ ಮಮತಾ ಸಿಕ್ಕಾಗ ಸುಮ್ಮಗೆ ಕೇಳಿದ್ದೆ? ಲಾವಣ್ಯ ಹೇಗಿದ್ದಾಳೆ ಅಂತ? ಅವಳಿಗೆ ಎಷ್ಟು ಅಚ್ಚರಿಯಾಯಿತೆಂದರೆ

`ನೀನಿನ್ನೂ ಅವಳನ್ನು ಮರೆತಿಲ್ವಾ? ಅಂತ ಕೇಳಿ ಆಮೇಲೆ `ಅವಳಿಗೆ ಮದುವೆಯಾಗಿದೆ. ಗಂಡ ಮಿಲಿಟರಿಯಲ್ಲಿದ್ದಾನೆ’ ಅನ್ನೋ ಬಾಂಬ್‌ ಕೂಡ ಹಾಕಿದಳು. ಆದರೆ ಆ ಬಾಂಬ್‌ ಸ್ಪೋಟಗೊಂಡಿರಲಿಲ್ಲ.

ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿ ಯಾದದ್ದು...


 

ಕೆಲವು ದಿನಗಳ ಹಿಂದೆ ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿಯಾಗಲು ಹೋಗುತ್ತೇವೆ. Appointment ಈಗಾಗಲೇ ತೆಗೆದು ಕೊಂಡಿದ್ದೇವೆ ಎಂದಾಗ ತಮಾಷೆ ಮಾಡುತ್ತಿದ್ದಾರೆ ಎಂದು ಸುಮ್ಮನಾಗಿದ್ದೆ. ಆದರೆ ನಿನ್ನೆ ಬೆಳಿಗ್ಗೆ ಹಠಾತ್ತ್ ಆಗಿ ಅನಿ ತಾನು ಇಂದು ಸ್ನೇಹ ಜೊತೆ ಸಿ ಎಂ ಅನ್ನು ಭೇಟಿ ಆಗಲು ಹೋಗುತ್ತೇನೆ ಎಂದಾಗ ಆವಕ್ಕಾದೆ!

ಆಫೀಸ್ ಕೆಲಸ ಮುಗಿಸಿ ಸಿ ಎಂ ಭೇಟಿ ವಿವರ ಕೇಳಲು ಹಾತೊರೆಯುತ್ತಿದ್ದ ನಾನು ಸಾಯಂಕಾಲ ರೂಮ್ ಗೆ ಹೋದಾಗ ಅನಿ ಟೀ ಕುಡಿಯುತ್ತಾ ಟಿವಿ ಮುಂದೆ ಕುಳಿತಿದ್ದಳು.

ಗೋಧೂಳಿ

ಗೋಧೂಳಿ

ಬಾಳ ಹಣೆಯಲಿ ಕುಂಕುಮದ ರಂಗು ಮಾಸಿದೆ
ಬಾನ ಹಣೆಯೋಳು ಕುಂಕುಮ ಚದುರಿದೆ
ಆಸರೆಯ ಕೈಗಳು ಬಾನಾಡಿಯ ದಾರಿ ಹಿಡಿದಿವೆ
ನೆರಿಗೆಯ ಎಡೆಯಲಿ ಜಾರುವ ಕಂಬನಿಯೊಂದೇ ನನ್ನ ಪಾಲಾಗಿದೆ
ಬಯಲಿನ ಒಂಟಿ ಮರವಾದೆ ನಾ ಈ ಗೋಧೂಳಿಯೋಳು

ಹಾಲುಣಿಸಿದ ಮಗ ಸೊಸೆಯ ಮಾತಿಗೆ ಮರಳು
ಮಗಳ ಮಾತಿಗೆ ಹೊಸ ಅಳಿಯನ ಕಿವಿ ಕಿವುಡು
ಇವರ ಅಗಲಿಕೆ ಮಮ್ಮಕ್ಕಳ ಮುದ್ದು ನಗು ಮರೆಸಿತು
ನೆಂಟರಿಷ್ಟರು ಮನೆಗೆ ಮೀಸಲಾದರು ,ಆಶ್ರಮದ ದಾರಿ ಮರೆತರು
ಬಯಲಿನ ಒಂಟಿ ಮರವಾದೆ ನಾ ಈ ಗೋಧೂಳಿಯೋಳು

ನೆರಿಗೆ ತುಂಬಿದ ಕಣ್ಣೊಳು ಇಂದೂ ನೋಡುವೆ ನೀ ಬರುವ ದಾರಿ
ಕಿವುಡಾದ ಕಿವಿ ಹಂಬಲಿಸುತಲಿದೆ ಅಮ್ಮಾ ಎನ್ನುವ ನಿನ್ನ ದನಿಗೆ