ಇಂಚರದ ಹಕ್ಕಿಗೆ
ಕವನ
ಕನ್ನಡಾಂಬೆ ಮಡಿಲ ವನದಿ
ನಿದ್ರಿಸುತಿಹ ವಿಹಗವೇ
ಜ್ಞಾನ ಸೂರ್ಯನುದಯ ಸಮಯ
ಬರಲು ಜಡತೆ ನ್ಯಾಯವೇ
ನಿನ್ನ ಸವಿಯ ಕೊರಳಿನಲ್ಲಿ
ಹಲವು ರಾಗ ಅಡಗಿದೆ
ವಿವಿಧ ಕಲೆಯು ಕಥೆಯು ತುಂಬಿ
ವಿಶ್ವಕೋಶದಂತಿದೆ
ಜನತೆ ಜಡತೆ ದುಃಖಗಳಲಿ
ಮುಳುಗಿ ಗುರಿಯ ಮರೆತಿದೆ
ನಿನ್ನ ದನಿಯ ಕೇಳಿ ಮಂದಿ
ಚೇತನವನು ತಾಳದೆ?
ಮಧುರ ರವದಿ ಹಾಡಿ ಜಗದ
ಜನಕೆ ಮಾಡು ಎಚ್ಚರ
ತನುಮನದಲಿ ಬಲವ ಮುದವ
ತರಲಿ ನಿನ್ನ ಇಂಚರ
Comments
ಉ: ಇಂಚರದ ಹಕ್ಕಿಗೆ
ಉ: ಇಂಚರದ ಹಕ್ಕಿಗೆ
ಉ: ಇಂಚರದ ಹಕ್ಕಿಗೆ
ಉ: ಇಂಚರದ ಹಕ್ಕಿಗೆ