ಗೋಧೂಳಿ
ಗೋಧೂಳಿ
ಬಾಳ ಹಣೆಯಲಿ ಕುಂಕುಮದ ರಂಗು ಮಾಸಿದೆ
ಬಾನ ಹಣೆಯೋಳು ಕುಂಕುಮ ಚದುರಿದೆ
ಆಸರೆಯ ಕೈಗಳು ಬಾನಾಡಿಯ ದಾರಿ ಹಿಡಿದಿವೆ
ನೆರಿಗೆಯ ಎಡೆಯಲಿ ಜಾರುವ ಕಂಬನಿಯೊಂದೇ ನನ್ನ ಪಾಲಾಗಿದೆ
ಬಯಲಿನ ಒಂಟಿ ಮರವಾದೆ ನಾ ಈ ಗೋಧೂಳಿಯೋಳು
ಹಾಲುಣಿಸಿದ ಮಗ ಸೊಸೆಯ ಮಾತಿಗೆ ಮರಳು
ಮಗಳ ಮಾತಿಗೆ ಹೊಸ ಅಳಿಯನ ಕಿವಿ ಕಿವುಡು
ಇವರ ಅಗಲಿಕೆ ಮಮ್ಮಕ್ಕಳ ಮುದ್ದು ನಗು ಮರೆಸಿತು
ನೆಂಟರಿಷ್ಟರು ಮನೆಗೆ ಮೀಸಲಾದರು ,ಆಶ್ರಮದ ದಾರಿ ಮರೆತರು
ಬಯಲಿನ ಒಂಟಿ ಮರವಾದೆ ನಾ ಈ ಗೋಧೂಳಿಯೋಳು
ನೆರಿಗೆ ತುಂಬಿದ ಕಣ್ಣೊಳು ಇಂದೂ ನೋಡುವೆ ನೀ ಬರುವ ದಾರಿ
ಕಿವುಡಾದ ಕಿವಿ ಹಂಬಲಿಸುತಲಿದೆ ಅಮ್ಮಾ ಎನ್ನುವ ನಿನ್ನ ದನಿಗೆ
ಶುಷ್ಕ ಶರೀರ ಬಯಸಿದೆ ನಿನ್ನ ಆ ಕೋಮಲ ಆಲಿಂಗನ
ಒಂದು ಬಾರಿ ಬಂದು ನೋಡು ನಿನ್ನ ಆಸರೆಯ ಈ ಮನವ
ಅಂತಿಮ ಪಯಣದ ದಾರಿಯೋಳು ಹೆಜ್ಜೆ ಮರೆಯಾಗುವ ಮುನ್ನ
ನಿಮ್ಮ
ಕಾಮತ್ ಕುಂಬ್ಳೆ
Rating
Comments
ಉ: ಗೋಧೂಳಿ
In reply to ಉ: ಗೋಧೂಳಿ by Tejaswi_ac
ಉ: ಗೋಧೂಳಿ
ಉ: ಗೋಧೂಳಿ
In reply to ಉ: ಗೋಧೂಳಿ by vani shetty
ಉ: ಗೋಧೂಳಿ