ಬ್ರಹ್ಮ
ಕವನ
ಬ್ರಹ್ಮ
ನನ್ನವಳು ಕೇಳಿದಳು ಚೆನ್ನಾದ ಪ್ರಶ್ನೆಯನು
ಬ್ರಹ್ಮ ಎಂಬುದು ಏನು ? ತಿಳಿಸುವೆಯೇನು ?
ಬಹುಕಾಲದ ಸಂದೇಹವ ಪರಿಹರಿಸುವೆಯೇನು ?
ಬಲು ಸುಲಭದ ಪ್ರಶ್ನೆ
ಉತ್ತರಕೆ ನಾನಾಗ ತಿಣುಕಾಡಿದೆ
ಭಾರತೀಪತಿ ಬ್ರಹ್ಮ ಎಂದುಬಿಟ್ಟೆ
ಪದಗಳಿಗೆ ಎಟುಕದದು ಎಂದು ಜಾರಿದ್ದೆ
ಅದ್ವೈತಧಾರೆಯಲಿ ಬ್ರಹ್ಮರಿಬ್ಬರು ಉಂಟೇ ?
ಬ್ರಹ್ಮವೆಂಬುದು ನಮಗೆ ದೂರವುಂಟೇ ?
ಬ್ರಹ್ಮ ಸಾಕ್ಷಾತ್ಕಾರ ಎನಗಾಗದನ್ನಕವೂ
ಭಾರತಿಯ ದಾಹವನು ನೀಗಲುಂಟೇ ?
'ಏಕಂಸತ್ ' ಇದೋ ನೋಡು ಇದೇ ನಿನ್ನ ಬ್ರಹ್ಮ
ಸತ್ಯದತ್ತ ಹೊರಟಿರುವ ನಾನು ನನ್ನ ಬ್ರಹ್ಮ
ಬ್ರಹ್ಮನರಸಿಯಾಗಬೇಕು ವಾಣಿಯಾಗಿ ಎನ್ನ
ವಿದ್ಯಾಭಿಮಾನಿ ದೇವತೆಯು ನೀನೆ ನನ್ನ ಚಿನ್ನ
--- *** ---
( ನನ್ನವಳು ಕವಿಪತ್ನಿ ಭಾರತಿ )
-- ಸದಾನಂದ
Comments
ಉ: ಬ್ರಹ್ಮ
In reply to ಉ: ಬ್ರಹ್ಮ by raghumuliya
ಉ: ಬ್ರಹ್ಮ
ಉ: ಬ್ರಹ್ಮ
ಉ: ಬ್ರಹ್ಮ