-ಅಪ್ಪಿಕೋ ನನ್ನ ಒಪ್ಪಿಕೋ-

-ಅಪ್ಪಿಕೋ ನನ್ನ ಒಪ್ಪಿಕೋ-

ಕವನ

-ಅಪ್ಪಿಕೋ ನನ್ನ ಒಪ್ಪಿಕೋ-


 


ಮುಂಗಾರು ಮಳೆಯ ದನಿಗಳ, ಹನಿಗಳ ಲೀಲೆ,
ಆ ಹನಿಯ ಭೂ ಅಪ್ಪಿಗೆಯ ನೀ ಅರಿಯದೆ ಹೋದೆ ಓ ಬಾಲೆ,


 


ಹನಿ ಹನಿಯ ಚಮತ್ಕಾರದ, ಮನ ತಣಿಸುವ ಕಲೆ,
ನೀ ಅರಿಯದಾದೆ ಅದರ ಅಪ್ಪುಗೆಯ ಚಂದದ ಬೆಲೆ,


 


ಬಾನಿಗೂ, ಭೂಮಿಗೂ ಅಪ್ಪುಗೆಯ ಸೆಲೆ,
ಅದೇ ಆ ನೀರಿನ ಮುತ್ತಿನ ಹನಿಯ ನೆಲೆ


 


ನೀ ಅಪ್ಪಿಕೋ ನನ್ನ, ಆ ಓಡುವ ನದಿಯ ನೋಡಿ,
ನೀ ಒಪ್ಪಿಕೋ ನನ್ನ ಆ ಸಾಗರವ ಸೇರುವ ಪರಿಯ ಮೋಡಿ,


 


ನಾ ಅಪ್ಪುವೇ, ನಿನ್ನ ಒಪ್ಪುವೆ  ನನ್ನ ಬಾಳೆಲ್ಲಾ
ನೀ ಅಪ್ಪಿಕೋ ನನ್ನ ಒಪ್ಪಿಕೋ ನಿನ್ನ  ಅಂತರಾಳವೆಲ್ಲಾ,


 


ನನ್ನ ಸನಿಹ ನೀ ಸಹಿಸಿಕೋ ಅತೀ ಸಹನೆಯಿಂದ,
ನಾ ನಿನ್ನ ಸಂತ್ಯೆಸುವೆ ಅತೀ ಸಲುಗೆಯಿಂದ,


 


ದೂರ ಬೆಟ್ಟದ ಮನೆಯ ಸುತ್ತಾ ಹೊರಾಶಿಯ ಕನಸು ಬೇಡ,
ನಿನ್ನ ಮನದ ಹೂ ತೋಟದಲ್ಲಿ ನನ್ನ ನೆಡಲು ಮರೆಯ  ಬೇಡ,


 


ಅಪ್ಪಿಕೋ ನನ್ನ , ಒಪ್ಪಿಕೋ ಓ ಬೆಳದಿಂಗಳ ಬಾಲೆ
ನಾ ಬಿಡದೆ ಒಂದಾಗಿರುವೆ ಕಣ್ಣ ರೆಪ್ಪೆಯ ಹಾಗೆ


 


ಮಾತೆಲ್ಲಾ ಮುಗಿದಾ ಮೇಲೆ,  ಮೌನದಲ್ಲಿ ಅಪ್ಪಿಕೋ
ಪ್ರೀತಿಯ ಮಾಡಲು ನನ್ನ,  ನಿನ್ನ ಮನದಲ್ಲಿ ಒಪ್ಪಿಕೋ


 


                                                         ಮಧ್ವೇಶ್/೦೬.೦೧.೨೦೧೧