ಕೆಲವು ದಿನಗಳ ಹಿಂದೆ ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿಯಾಗಲು ಹೋಗುತ್ತೇವೆ. Appointment ಈಗಾಗಲೇ ತೆಗೆದು ಕೊಂಡಿದ್ದೇವೆ ಎಂದಾಗ ತಮಾಷೆ ಮಾಡುತ್ತಿದ್ದಾರೆ ಎಂದು ಸುಮ್ಮನಾಗಿದ್ದೆ. ಆದರೆ ನಿನ್ನೆ ಬೆಳಿಗ್ಗೆ ಹಠಾತ್ತ್ ಆಗಿ ಅನಿ ತಾನು ಇಂದು ಸ್ನೇಹ ಜೊತೆ ಸಿ ಎಂ ಅನ್ನು ಭೇಟಿ ಆಗಲು ಹೋಗುತ್ತೇನೆ ಎಂದಾಗ ಆವಕ್ಕಾದೆ!
ಆಫೀಸ್ ಕೆಲಸ ಮುಗಿಸಿ ಸಿ ಎಂ ಭೇಟಿ ವಿವರ ಕೇಳಲು ಹಾತೊರೆಯುತ್ತಿದ್ದ ನಾನು ಸಾಯಂಕಾಲ ರೂಮ್ ಗೆ ಹೋದಾಗ ಅನಿ ಟೀ ಕುಡಿಯುತ್ತಾ ಟಿವಿ ಮುಂದೆ ಕುಳಿತಿದ್ದಳು.
"ಒಳಗೆ ಬಾ" ಎಂದು ಕರೆದು ಅವಳಲ್ಲಿ "ಹೇಗಿತ್ತು ಅನುಭವ" ಎಂದು ಕೇಳಿದಾಗ, ಯಾವಗಲೂ ಬಿ ಜೆ ಪಿ ಯನ್ನು ಹೊಗಳುತ್ತಿದ್ದ ಸುಬ್ಬಿ, ಯುಡಿಯುರಪ್ಪರನ್ನ ಸರಿಯಾಗಿ ಬೈದಳು. ‘ಯಾಕಲೇ ಏನಾಯಿತು? ಎಂದು ಕೇಳಿದಾಗ, "ಸ್ವಲ್ಪ ಮಾನವೀಯತೆನೂ ಇಲ್ಲ ಅವರಿಗೆ... ಸಿ ಎಂ ಅಂತೆ ಸಿ ಎಂ... ಜನರನ್ನು ಹೇಗೆ ಮಾತನಾಡಿಸಬೇಕು, ಹೇಗೆ ವರ್ತಿಸಬೇಕು ಎಂದು ತಿಳಿಯಲ್ಲ ಅವರಿಗೆ. ಅವರಿಗಿಂತ ಅವರ ಸೆಕ್ರೆಟರಿ ಅವರನ್ನು ಸಿ ಎಂ ಮಾಡುತ್ತಿದ್ದರೆ ನಮ್ಮ ಕರ್ನಾಟಕ ಉದ್ದಾರವಾಗುತ್ತಿತ್ತೋ ಏನು... at least ಜನ ಸಮಾನ್ಯ ಮಾತನಾಡಿದ್ದ ಇಂಗ್ಲಿಷ್ ಅವರಿಗೆ ಅರ್ಥ ವಾಗಲ್ಲ...’ ಹೀಗೆ ಉಸಿರು ಬಿಡದೇ ಬೈಯುತ್ತಿದ್ದಳು. (ಅವಳು ಅಲ್ಲಿ ಕಂಡಂತಹ ಪ್ರತಿಯೊಂದು ದ್ರಶ್ಯವನ್ನು ವಿವರಿಸ ಹೊರಟರೆ ಮಿನಿ ಧಾರವಾಹಿ ಆಗಿ ಹೋಗುತ್ತೆ...ಅವರೇನೂ ಸಿ ಎಂ ಅವರಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡಿಲ್ಲ... ತಮ್ಮ ಸಮಸ್ಯೆಯ ಕೆಲವು ಪದಗಳನ್ನು ಇಂಗ್ಲಿಷ್ ನಲ್ಲಿ ಬಳಸಬೇಕಾಯಿತು)
"ಕರ್ನಾಟಕದವರಾಗಿ ಕನ್ನಡ ಮಾತನಾಡಿ ಎಂಬರ್ಥದಲ್ಲಿ ಅವರು ವರ್ತಿಸಿರಬಹುದು’ ಎಂದು ನಾನು ಸಮಜಾಯಿಸಿ ನೀಡಲು ಹೋದರೆ, "ಇಲ್ಲ... ಅಂಥನೇನಾಗಿರುತ್ತಿದ್ದರೆ ನಾನು ಅವರ ಬಗ್ಗೆ ಹೆಮ್ಮೆ ಪಡುತ್ತಿದ್ದೆ. ನಿಮ್ಮ ಸಮಸ್ಯೆನಾ ಕನ್ನಡದಲ್ಲೇ ಹೇಳಿ... ಅಥವಾ ಕರ್ನಾಟಕದಲ್ಲಿ ಕನ್ನಡ ಮಾತನಾಡಿ’ ಎಂದು ಹೇಳಿದರೆ ನಾವು ಸಂತೋಷವಾಗಿ ಮಾತನಾಡುತ್ತಿದ್ದೇವು. ಅದರೆ ಅವರ ಮಾತಿನ ಶೈಲಿ ಚೆನ್ನಾಗಿರಲಿಲ್ಲ. ಅವರು ಪಕ್ಕದಲ್ಲಿದ್ದವರಲ್ಲಿ ಇಂಗ್ಲಿಷ್ನಲ್ಲಿದ್ದುದನ್ನು ಕನ್ನಡಕ್ಕೆ ಭಾಷಾಂತರಿಸಲು ಹೇಳಿದರು.’ "ಛೆ! ಸರಿಯಾಗಿ ವ್ಯವಹರಿಸಲು, ಗೌರವದಿಂದಲು ಗೊತ್ತಿಲ್ಲವಾ... ?’ "ಬಿಡು ನಾನು ಅಪ್ಪಂಗೆ ಹೇಳ್ತೆನೆ ಅವರಿಗೆ ಓಟು ಕೊಡಬೇಡಿ ಅಂತ. ಅವರಿಗೆ ಓಟು ಬೇಕಾದಾಗ ಜಾತಿ, ಮತ, ಭಾಷೆ, ಸ್ತ್ರೀ ಪುರುಷ ಎಲ್ಲರೂ ಒಂದೇ... ಆದರೆ ಸಹಾಯ ಕೋರಿ ಹೋದಾಗ ಅಲ್ಲಿದ್ದವರನ್ನು ಎಷ್ಟು ಕೇವಲವಾಗಿ ನೋಡುತ್ತಿದ್ದರು ಗೊತ್ತಾ? ಒಬ್ಬಾಕೆಗೆ ನಿಮ್ಮ ಪತಿ ಏನು ಸರ್ಕಾರಿ ಕೆಲಸದಲ್ಲಿದ್ದಾನ ಎಂದು ಕೇಳಿದ್ದರು. ಸರ್ಕಾರಿ ಕೆಲಸದಲ್ಲಿದ್ದರೆ ಮಾತ್ರವೇ ಅವರಿಗೆ ಸಹಾಯ ಮಾಡುತ್ತಾರಂತೆ! ಓಟು ಕೇಳಲು ಬರುವಾಗ ಮಾತ್ರ ಇವರಿಗೆ ಬರಿಯ ಸರ್ಕಾರಿ ಕೆಲಸದಲ್ಲಿದ್ದವರು ಓಟು ಕೋಡೋರೆನು?’ ಅನಿ ನಾನ್ ಸ್ಟಾಪ್ ಆಗಿ ಸಿ ಎಂನ ಗುಣಗಾನ ಮಾಡುತ್ತಿದ್ದಳು. ಸ್ನೇಹಳಂತೂ ಮಿರರ್ ಇಮೇಜ್ ಬಗ್ಗೆ ಹೇಳಿ ವ್ಯಂಗದೊಂದಿಗೆ ಹಾಸ್ಯ ಸೇರಿಸಿ ಮಾತು ಮರೆತಳು.
ಹೋದ ಕೆಲಸವಂತೂ ಆಗಲ್ಲ... ಅದ್ರೆ ನಮ್ಮ ರಾಜಕಾರಣಿಗಳು ಕ್ಯಾಮೆರಾ, ಮಾಧ್ಯಮಗಳ ಮುಂದೆ ಹೇಗೆ ವರ್ತಿಸುತ್ತಿದ್ದಾರೆ, ಕ್ಯಾಮೆರಾ/ಮಾಧ್ಯಮಗಳ ಹಿಂದೆ ಹೇಗೆ ವರ್ತಿಸುತ್ತಿದ್ದಾರೆ ಎಂದು ತಿಳಿಯಿತು. ಸುವರ್ಣ ಚಾನೆಲ್ನಲ್ಲಿ ಯುಡಿಯುರಪ್ಪ-ರಮ್ಯಾ ಸಂಭಾಷಣೆ ಕಂಡು ಗ್ರೇಟ್ ವ್ಯಕ್ತಿ ಎಂದು ತಿಳಿದ್ದಿದ್ದ ನನಗೆ ನಿಜ ವ್ಯಕ್ತಿತ್ವ ಕಂಡು ನಿಜಕ್ಕೂ ಬೇಸರವಾಯಿತು. ತಪ್ಪು ಮಾಡದವರು ಯಾರಿದ್ದಾರೆ?...
‘ಯಾಕೆ ವಿದ್ಯಾವಂತರನ್ನ, ಮಾನವೀಯತೆಯುಳ್ಳವರನ್ನ, ಸಮಾಜ ಸೇವಕರನ್ನ ನಾವು ಸಿ ಎಂ ಮಾಡಲ್ಲ?’ ಎನ್ನುವ ಆಕೆಯ ಪ್ರಶ್ನೆಗೆ ಉತ್ತರ ನಾನಿನ್ನೂ ನೀಡಿಲ್ಲ...
‘ಯಾಕೆ ವಿದ್ಯಾವಂತರನ್ನ, ಮಾನವೀಯತೆಯುಳ್ಳವರನ್ನ, ಸಮಾಜ ಸೇವಕರನ್ನ ನಾವು ಸಿ ಎಂ ಮಾಡಲ್ಲ?’ ಎನ್ನುವ ಆಕೆಯ ಪ್ರಶ್ನೆಗೆ ಉತ್ತರ ನಾನಿನ್ನೂ ನೀಡಿಲ್ಲ...
(ಒಬ್ಬರನ್ನ ಹೊಗಳಿ, ಮತ್ತೊಬ್ಬರನ್ನ ತೆಗಳುವ ಉದ್ದೇಶ ನನ್ನದ್ದಲ್ಲ)
Comments
ಉ: ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿ ಯಾದದ್ದು...

In reply to ಉ: ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿ ಯಾದದ್ದು... by veenadsouza
ಉ: ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿ ಯಾದದ್ದು...
ಉ: ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿ ಯಾದದ್ದು...
ಉ: ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿ ಯಾದದ್ದು...
ಉ: ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿ ಯಾದದ್ದು...
In reply to ಉ: ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿ ಯಾದದ್ದು... by ksraghavendranavada
ಉ: ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿ ಯಾದದ್ದು...
In reply to ಉ: ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿ ಯಾದದ್ದು... by ಉಉನಾಶೆ
ಉ: ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿ ಯಾದದ್ದು...