ಹೀಗ್ಯಾಕೆ?

ಹೀಗ್ಯಾಕೆ?

ಕವನ

                    ಹೀಗ್ಯಾಕೆ ?

ನಾನೆಷ್ಟು  ನೀರ  ಹನಿಸಿದರೂ 

ಮಣ್ಣಡಿಯ  ಗಡ್ಡೆ ಚಿಗುರಲೇ  ಇಲ್ಲ

 ಬಂದಿತೋ  ಪ್ರಥಮ  ಮಳೆ

 ಗಿಡವಾಗಿ  ಬಿಟ್ಟಿತೋ  ಹೂವ!


ನಾನೆಷ್ಟು  ಪರಿ ಹೇಳಿದರೂ

ಮಗ  ಅದನು  ಒಪ್ಪಲೇ  ಇಲ್ಲ

 ಬಂದಿತೋ  ಟೀಚರ  ಆದೇಶ 

ಅದ  ಮಾಡಿಬಿಟ್ಟನೋ  ಬೇಗ !  

Comments