ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೊದಲೆನಿಸಿದವರು..ಮೊದಲೆಣಿಸಿದವರು..?

 "ಮೊದಲೆನಿಸಿದವರು ಈಗ ಅನಿಸುವದಿಲ್ಲ
  ಮೊದಲೆಣಿಸಿದವರು ಈಗ ಎಣಿಸುವದಿಲ್ಲ
  ನಮ್ಮೊಳಗೆ ನಾವೇ ಎಲ್ಲಾ
  ಈ ಜೀವನದಲ್ಲಿ ಜೀವವೇ ಇಲ್ಲ..,
 

ದಕ್ಷಿಣ ಏಷ್ಯಾ ಭಾಷೆಗಳ ವಿಶ್ಲೇಷಣೆ – 29ನೇ ದುಂಡು ಮೇಜಿನ ಸಮ್ಮೇಳನ

ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯು ಜನವರಿ 6ರಿಂದ 8ರವರೆಗೆ ಮೂರು ದಿನಗಳ ಕಾಲ ದಕ್ಷಿಣ ಏಷ್ಯಾ ಭಾಷೆಗಳ ವಿಶ್ಲೇಷಣೆ ಕುರಿತು 29 ನೇ ಅಂತಾರಾಷ್ಟ್ರೀಯ ದುಂಡು ಮೇಜಿನ ಸಮ್ಮೇಳನವನ್ನು ಆಯೋಜಿಸಿದೆ.

 

ದಕ್ಷಿಣ ಏಷ್ಯಾ ಭಾಷೆಗಳ ಕುರಿತು ವಿಶೇಷವಾಗಿ ಅಧ್ಯಯನ ಮಾಡಿರುವ/ಮಾಡುತ್ತಿರುವ ಸುಮಾರು 120 ಮಂದಿ ಭಾಷಾತಜ್ಞರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಇವರಲ್ಲಿ ಅಮೆರಿಕ, ಕೆನಡ, ಸಿಂಗಪೂರ್, ಮಲೇಶಿಯ, ಜಪಾನ್ ಮುಂತಾದ ದೇಶಗಳ 25 ಮಂದಿ ಭಾಷಾತಜ್ಞರು ಕೂಡ ಸೇರಿದ್ದು, ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.

 

ಜನ ಸರೀ ಇಲ್ಲ ತಂದೆ.....

ಮುನ್ನುಡಿ: ಮೊನ್ನೆ ಮೈಸೂರಿಗೆ ಹೋದಾಗ....ನಂಜನಗೂಡು ಹತ್ತಿರ ಇರುವ ಒಂದು ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ವಿ....


ಆ ದೇವರು ಕೇಳಿದ್ದನ್ನು ಎಲ್ಲ ಕೊಡುತ್ತಾನೆ ಅನ್ನೋ ಒಂದು ನಂಬಿಕೆ ಇದೆ.....ಅದಕ್ಕೆ ಅಲ್ಲಿಯ ಜನ ಅವನಿಗೆ....ಹುಚ್ಚು ವೇಣುಗೋಪಾಲ ಸ್ವಾಮಿ ಅಂತ ಕರೀತಾರೆ....ಇದನ್ನು ಕೇಳಿ ಬಹಳ ನೋವಾಯಿತು.


 ಕೇಳಿದ್ದನ್ನೆಲ್ಲ ಕೊಟ್ಟರೆ...ಜನ ದೇವರನ್ನು ಕೂಡ ಹುಚ್ಚು ಮಾಡ್ತಾರೆ ಅನ್ನೋದಕ್ಕೆ ಇದು ಸೂಕ್ತ ಉದಾಹರಣೆ.....


 ಅಲ್ಲಿ ಇದ್ದ ದೊಡ್ಡ Queue ನಲ್ಲಿ ಕಾದೂ ಕಾದೂ ಸುಸ್ತಾದಾಗ ...ಈ ಕವಿತೆ ಹುಟ್ಟಿತು....


  


ಆಗಲ್ಲಿ ಹೋಗಿ, ಈಗಿಲ್ಲಿ ಬಂದು


 ಈ ಗಲ್ಲಿ ಗುಡಿಯ ಮುಂದೆ....


 ಗಲ್ಲಿ ಗುಡಿಯ ಹಂಗ್ಯಾಕ ನನಗ


 ನಾ ನಿನ್ನ ಒಳಗಾ ಮಿಂದೆ.....


  


ನಾ ಕೇಳಿದೆಲ್ಲ ನೀ ಕೊಡಲೆಬೇಡ...


 ಜನ ಸರೀ ಇಲ್ಲ ತಂದೆ.....


 ನಿನ್ನನಾ ಅವರು ಹುಚ್ಚು ಎಂಬುವವರು

ಮರೆತರೆ

ಮತ್ತುಗಳೆಲ್ಲ ಮುಳ್ಲಾದವು
ಭಾವನೆಗಳೆಲ್ಲ ಕರಗಿ ನೀರದವು



ಪ್ರೀತಿಯ  ಸ್ನೇಹದ ಸಂಭಂದಿಂದ    ದೂರ ಮಾಡಬೇಡ


 


ನಿನ್ನ ಮರೆತು ಹೇಗೆ ಬಾಳಲಿ
ಮರೆತ ಆ ಕ್ಷಣವೇ ನನ್ನ ಉಸಿರು ಕೊನೆಯಾಗಿ ಹೋಗಲಿ

ಧ್ವಜಾರೋಹಣಕ್ಕೂ ಇರುಸುಮುರುಸು ಪಕ್ಷಾತಿ ಗಣ್ಯರಲ್ಲಿ

ನಮ್ಮ ದೇಶದ ಉತ್ತರ ಶಿಖರ ನೆರೆಯ ರಾಷ್ತ್ರಗಳಿಂದ ಆಗಲೇ ಅರ್ಧ ಕಬಳಿಸಿ ಆಗಿದೆ.ಇನ್ನೂ ಮಂತ್ರಿ ಮಹೋದಯರು ಎನೇನು ಮಾಡಬೇಕೆಂದಿದ್ದಾರೋ ಎನೋ ಗೊತ್ತಿಲ್ಲ.ಜಮ್ಮು ಕಾಶ್ಮೀರದಲ್ಲಿ ಲಾ ಲ್ ಚೌಕ್  ಅಲ್ಲಿ ಭಾ.ಜ.ಪ ಯುವ ಮೊರ್ಚಸದಸ್ಯರ ಗಣತಂತ್ರ ದಿವಸದಂದು  ಧ್ವಜಾರೋಹಣ ಕಾರ್ಯಕ್ರಮವಂತೆ.ಅದಕ್ಕೆ ಅಲ್ಲಿನ ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಅವರಿಂದ ಭಾ.ಜ.ಪ ದ ಈ ಕಾರ್ಯಕ್ರಮದ ಬಗ್ಗೆ ಅವರಿಗೆ ಒಪ್ಪಿಗೆಯಿ ಲ್ಲವಂತೆ ಕಾರಣ ರಾಜ್ಯದ ಎಲ್ಲ ಜಿಲ್ಲಾ ಕೆಂದ್ರ ಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮವಿರುತ್ತ್ತದೆ  ಎಂದು. ಧ್ವಜಾರೋಹಣಕ್ಕೂ ಇರುಸುಮುರುಸು  ಪಕ್ಷಾತಿ ಗಣ್ಯರಲ್ಲಿ .ಪಕ್ಷ ಯಾವುದೇ ಇರಲಿ ದೇಶದ ಧ್ವಜಾರೋಹಣ ಮಾಡಿದರೆ ಏನು ತೊಂದರೆ ಅಂತ?

 

ಯಾರಿವರು ?

         ಯಾರಿವರು?

ನೆಮ್ಮದಿಯ  ತವರು 

 ಎಲ್ಲಿಹುದೆಂದು  ತಿಳಿಯದವರು  

  ಕಚ್ಚಾಡುವವರು

 ತಡಕಾಡುವವರು

 ಧನದ ರಾಶಿ  ಪೇರಿಸುವವರು

ಅವಕಾಶವಿದೆ  ಬಾಳ ಹಿಡಿದೆತ್ತಿ

 ಸುಮಧುರಗೊಳಿಸಲು

 ಬೇಡವಿದು

ಸ್ವಂತಕ್ಕೆ  ನುಂಗುವುದೇ 

ಇವರ  ತಾಕತ್ತು

 ನಡೆಯುತಿದೆ  ಕರಾಮತ್ತು

 ತಾಯ್ನಾಡ  ಒಡಲ  ಬಗೆದು

 ಭಾಷಣದಿ  ಹರಿಯಬಿಡುವರು

ಸರ್ವ ಜನರ  ಉದ್ಧಾರವ 

ಪವಾಡವೋ

ಕೇಳುಗ ರಿಗೇನು  ಸಹ್ಯವೋ

 ಮರೆತು ಬಿಡುವ  ಜನರಿದ್ದೊಡೆ

ಪುನರಾವರ್ತನೆ  ಎಲ್ಲಕಡೆ

 ಬಯಸುವುದು  ಸ್ವಾರ್ಥ 

ಸೇವೆಯ  ಸೋಗು

ಅರಿವೆಂಬ ಕಣ್ಣು

ಹುರುಳನರಿಯಬೇಕು ತನ್ನ ತಿಳಿವುಗಣ್ಣಿನಲೇ
ಬೇರೆ ಪಂಡಿತರರಿವು ತನ್ನದಾಗುವುದಿಲ್ಲ
ಚಂದಿರನ ಅಂದವನು ನಾವೆ ದಿಟ್ಟಿಸದೇ
ಕಂಡವರು ನೋಡಿದರೆ ಮನದಣಿವುದಿಲ್ಲ

ಸಂಸ್ಕೃತ ಮೂಲ (ಶಂಕರಾಚಾರ್ಯರ ವಿವೇಕ ಚೂಡಾಮಣಿಯಿಂದ)

ವಸ್ತು ಸ್ವರೂಪಂ ಸ್ಫುಟ ಬೋಧ ಚಕ್ಷುಷಾ
ಸ್ವೇನೈವ ವೇದ್ಯಂ ನ ತು ಪಂಡಿತೇನ |
ಚಂದ್ರ ಸ್ವರೂಪಂ ನಿಜ ಚಕ್ಷುಷೈವ
ಜ್ಞಾತವ್ಯಂ ಅನೈರವಗಮ್ಯತೇ ಕಿಂ ||

-ಹಂಸಾನಂದಿ

ಹೊಟ್ಟೆ ಕೆರೆಯ ಮೇಲಿನ ಕಟ್ಟೆ....

ನನ್ನ ಅಕ್ಕನ ಮಗಳ ಮದುವೆಗೆ ಎಂದು ಧಾರವಾಡಕ್ಕೆ ಹೋಗಿದ್ದೆ. ಅಲ್ಲಿ ಕೆಲ ಚಿಕ್ಕವರು ದೊಡ್ಡವರಿಗೆ ನಮಸ್ಕಾರ ಮಾಡುವ ದೃಶ್ಯ ನನಗೆ ಕಾಣಿಸಿತು. ನಾನು ಹೋದೊಡನೆಯೆ, ನನಗೆ ಅಮ್ಮ, ಇವರು ನನ್ನ ಮಾವನ ಮಗ ಎಂದು ಪರಿಚಯ ಮಾಡಿಕೊಟ್ಟರು. ಈಗ ನಾನು ಅವ್ರಿಗೆ ನಮಸ್ಕಾರ ಮಾಡಬೇಕೋ ಅಥವಾ ಅವರು ನನಗೆ ನಮಸ್ಕಾರ ಮಾಡಬೇಕೋ ಎಂಬುದು ಸೋಜಿಗದ ಸಂಗತಿ. ಕಡೆಗೆ ಅವರೇ ನನಗೆ ನಮಸ್ಕಾರ ಮಾಡಲು ಬಂದರು. ಅದಕ್ಕೆ ನನ್ನ ಅಮ್ಮ ಲೇ ಅವನು ದೊಡ್ಡವನು ಕಣೋ ನೀನೆ ನಮಸ್ಕಾರ ಮಾಡು ಎಂದು ಫರ್ಮಾನು ಹೊರಡಿಸಿದರು. ನಾನು ಮನಸಿನಲ್ಲಿ ಇದೊಳ್ಳೇ ಸಂಪ್ರದಾಯ ಎಂದು ಬಗ್ಗಿ ನಮಸ್ಕರಿಸಿದೆ.