ಪ್ರೇಮ ಪಲ್ಲವಿ
- Read more about ಪ್ರೇಮ ಪಲ್ಲವಿ
- Log in or register to post comments
ನಮಸ್ಕಾರ ಪ್ರೀತಿಯ ಕನ್ನಡಿಗರೆ,
"ಅನಿಸುತಿದೆ ಯಾಕೋ ಇಂದು..ಜಯಂತ್ ಬಗ್ಗೆ ಮಾತಾಡಬೇಕು ಎಂದು".
ಚಿತ್ರದಲ್ಲಿ ಇರುವುದು ಏನು ?? ಇದು ಕರ್ನಾಟಕದಲ್ಲಿ ಎಲ್ಲಿದೆ ತಿಳಿಸಿ ???
ಬಟ್ಟ ಬಯಲಲ್ಲೊಂದು ಬಂಡೆಯನು ಇಟ್ಟು
ಸುತ್ತಿಗೆ ಉಳಿಗಳನ್ನು ಬಳಸಿ ಶಿಲ್ಪವಾಗಿಸುತ್ತೇನೆ
ನೋಡಲು ರಂಬೆಯಂತೆ ಕಂಡರೂ
ಜೀವ ಕೊಡುವಲ್ಲಿ ನಾ ಸೋಲುತ್ತೇನೆ....
ನಾ ದೇವ ಮಾನವನಲ್ಲ
ಸತ್ತ ವಸ್ತುಗಳಿಗೆ ಜೀವವನು ತುಂಬಲು
ನನ್ನಲ್ಲೂ ಅಡಗಿರುವುದು ಮೂಳೆ ಮಾಂಸಗಳೆ
ಚಿರಂಜೀವಿಯಂತಾಗಲು ನನಗೂ ಆಸೆಯಿದೆ
ಅಮೃತವನು ಕೊಡಲ್ಯಾರು ಮುಂದೆ ಬರರು....
ಕಾಶ್ಮೀರವನ್ನೇ ಮಾರಿಯಾದರೂ ಸರಿ
ಕನ್ಯಾಕುಮಾರಿಯನ್ನೇ ಅಡಕಿಟ್ಟರು ಸರಿ
ನನ್ನ ಗೊಂಬೆಗೆ ನಾ
ಜೀವ ತುಂಬಲೆತ್ನಿಸುತ್ತೇನೆ..
ಬಾಯ್ತೆರೆದು ಮಾತಾಡುವ ತನಕ
ಅನ್ನನೀರುಗಳ ತೊರೆದು ಕಾಯುತ್ತೇನೆ..
ಮಧುನ್ಯಾಯ
ಅರಳಿಹವು ಸುಮಗಳಿವು
ಹೂದೋಟದೊಡಲಿನಲಿ
ಸುಮಗಳೊಡಲಿನಲಿಹುಮ
ಕುಸುಮ ಜೇನು
ಎಲ್ಲ ಸಂಪದ ಮಿತ್ರರಿಗೂ ಹೊಸ ವರ್ಷದ ಶುಭಾಶಯಗಳು..... ಒಂದು ವಾರದಿಂದ ಪ್ರವಾಸದಲ್ಲಿದ್ದ ಕಾರಣ ಸಂಪದದಂಗಳಕ್ಕೆ ಬರಲಾಗಿರಲಿಲ್ಲ...
ವಾಪಸು ಬಂದು ನಿಮ್ಮೆಲ್ಲರ ಲೇಖನಗಳನ್ನು ಓದಿದೆ. ಖುಷಿಯಾಯ್ತು.
ಮತ್ತೆ ನನ್ನ singapore ಪ್ರವಾಸದ ಕಥೆಯೊಂದಿಗೆ ಹಿಂದಿರುಗುತ್ತೇನೆ.
ಅಲ್ಲಿಯವರೆಗೂ ಬೈ ಬೈ :)
ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ
ಇಹದ ಮೊದಲ ನೇಹಗಾಥೆ
ಮಹಿಯ ಎಲ್ಲ ಗೆಳೆಯರಿ೦ಗೆ
ವಹಿಲದಿ೦ದ ಹೇಳುವಾಸೆಯಿಹುದು ಮನಸಿಗೆ
ಕುಹಕವಲ್ಲ ರಹದ ಸುದ್ದಿ
ಅಹನಿಯಷ್ಟೆ ದಿಟವು ಪೀಳ್ವೆ
ಸಹನೆಯಿ೦ದ ಕೇಳಿರಿ೦ದು ಕಿವಿಯಗೊಡುತಲಿ
ನೀರೆಯೊಬ್ಬಳಾಕೆ ಭರದಿ
ವಾರೆನೋಟವನ್ನು ಬೀರಿ
ಸಾರುತಿದ್ದಳ೦ದು ಪಥದಿ ಪಿತನ ಸುತ್ತಲು
ಮೇರುಗಿರಿಯ ಶಿಖರವನ್ನು
ಏರಿ ನಿ೦ದು ವಿಹರಿಸಿರ್ದ
ಏರುಜವ್ವನಿಗನು ಸೆಳೆಗೆ ಸೂರೆಹೋದನು
ಮೊದಲನೋಟ ಸ೦ಧಿಸುತಲೆ
ಪದಪು ಮೂಡಿತಾಗ ಹದದಿ
ಮಧುರ ಭಾವನೆಗಳು ಮನದಲುಕ್ಕುತೀರ್ವರ
ಮುದದಲೊ೦ದುಗೂಡಿ ಸದರ
ಪದಗಳನ್ನೆ ನುಡಿಯುತಿರುತ
ಪದುಳವಾ೦ತು ಸೊಗದಲವರು ಬಾಳುತಿರ್ದರು
ಹಸಿರ ಸೀರೆಯುಡುತ ಚೆಲುವೆ
ರಸನೆಗೈಯುತಿಹಳು ಸನಿಹ
ರಸಿಕನುಸುರುತಿರಲು ಸೊಗಸಗೀತೆ ಕಿವಿಯಲಿ
ಮಿಸುಕುತಿರುವ ರಸದ ಸುಧೆಯು
ವಿಸರಿಸಿರಲು ತನುವ ಕಾ೦ತಿ
ಹಸನು ತು೦ಬಿ ಎಸೆಯುತಿಹುದು ಹರುಷ ಮೊಗದಲಿ
೧೦೬ ಶ್ರೀ ರಾಮನಾಮ ಸ್ಮರಣೆ ಭಜನೆ
ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ರಾಮ ನಾಮ ಜಪಿಸಿದವಗೆ ದುರಿತವಿಲ್ಲವೋ
ರಾಮ ನಾಮ ಜಪಿಸಿದವಗೆ ಜಯವೇ ಎಲ್ಲವೋ
ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ರಾಮ ನಾಮ ಜಪಿಸಿದವಗೆ ದುರ್ಗುಣಗಳಿಲ್ಲವೋ
ರಾಮ ನಾಮ ಜಪಿಸುವವಗೆ ಸದ್ಗುಣಗಳೆಲ್ಲವೋ
ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ರಾಮ ನಾಮ ಜಪಿಸಿದವಗೆ ದುರ್ಮತಿಯಿಲ್ಲವೋ
ರಾಮ ನಾಮ ಜಪಿಸಿದವಗೆ ಸುನ್ಮತಿಯೇ ಎಲ್ಲವೋ
ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ರಾಮ ನಾಮ ಜಪಿಸಿದವಗೆ ದೌರ್ಭಾಗ್ಯವಿಲ್ಲವೋ
ರಾಮ ನಾಮ ಜಪಿಸುವವಗೆ ಸೌಭಾಗ್ಯವೆಲ್ಲವೋ