ಕಲ್ಲು ಶಿಲ್ಪ....!.
ಕವನ
ಬಟ್ಟ ಬಯಲಲ್ಲೊಂದು ಬಂಡೆಯನು ಇಟ್ಟು
ಸುತ್ತಿಗೆ ಉಳಿಗಳನ್ನು ಬಳಸಿ ಶಿಲ್ಪವಾಗಿಸುತ್ತೇನೆ
ನೋಡಲು ರಂಬೆಯಂತೆ ಕಂಡರೂ
ಜೀವ ಕೊಡುವಲ್ಲಿ ನಾ ಸೋಲುತ್ತೇನೆ....
ನಾ ದೇವ ಮಾನವನಲ್ಲ
ಸತ್ತ ವಸ್ತುಗಳಿಗೆ ಜೀವವನು ತುಂಬಲು
ನನ್ನಲ್ಲೂ ಅಡಗಿರುವುದು ಮೂಳೆ ಮಾಂಸಗಳೆ
ಚಿರಂಜೀವಿಯಂತಾಗಲು ನನಗೂ ಆಸೆಯಿದೆ
ಅಮೃತವನು ಕೊಡಲ್ಯಾರು ಮುಂದೆ ಬರರು....
ಕಾಶ್ಮೀರವನ್ನೇ ಮಾರಿಯಾದರೂ ಸರಿ
ಕನ್ಯಾಕುಮಾರಿಯನ್ನೇ ಅಡಕಿಟ್ಟರು ಸರಿ
ನನ್ನ ಗೊಂಬೆಗೆ ನಾ
ಜೀವ ತುಂಬಲೆತ್ನಿಸುತ್ತೇನೆ..
ಬಾಯ್ತೆರೆದು ಮಾತಾಡುವ ತನಕ
ಅನ್ನನೀರುಗಳ ತೊರೆದು ಕಾಯುತ್ತೇನೆ..
ಕಲ್ಲು ಮಾತನಾಡುವ ಕಾಲ ಕಲಿಕಾಲದಲ್ಲಲ್ಲ
ನಮಗೂ ಅರಿವಿದ ದೇವಯುಗದಲ್ಲಿ
ನಿನ್ನ ಜೀವವೇ ತೋರೆದೋದರು
ಶಿಲೆಯು ಶಿಲೆಯಂತೆಯೆ ನಿಲ್ಲುವುದು....
ವಾಸ್ತವತೆಯನು ಅರಿತು...
ನಿನ್ನ ಮೂಡ ಭ್ರಮೆಯಿಂದ ಹೊರ ಬಾ....
ವಸಂತ್