ಈ ನಯನ ನೂತನ - ಜಯಂತ್ ಕಾಯ್ಕಿಣಿ ಅವರ ಚಿತ್ರ ಗೀತೆಗಳ ಸ್ಪಂದನ
ನಮಸ್ಕಾರ ಪ್ರೀತಿಯ ಕನ್ನಡಿಗರೆ,
"ಅನಿಸುತಿದೆ ಯಾಕೋ ಇಂದು..ಜಯಂತ್ ಬಗ್ಗೆ ಮಾತಾಡಬೇಕು ಎಂದು".
ಹೌದು. ಇಂದು ಜಯಂತ್ ಅವರ ಬಗ್ಗೆ ಹಾಗು ಅವರ ಅಭಿಮಾನಿಯೊಬ್ಬನ ಬಗ್ಗೆ ಮಾತಾಡಬೇಕು ಎಂದು ಮನ ಹಾತೊರೆಯುತ್ತಿದೆ. ಕನ್ನಡ ಚಿತ್ರಗೀತೆಗಳನ್ನು ಶ್ರೀಮಂತಗೊಳಿಸಿದವರು ಜಯಂತ್ ಕಾಯ್ಕಿಣಿ. ಅವರ ಹಾಡುಗಳಿಂದ ಹುಚ್ಚು ಇಡಿಸಿಕೊಂಡವರೆಷ್ಟೋ ಮಂದಿ ಇದ್ದಾರೆ. ಅಂಥವರಲ್ಲಿ ಒಬ್ಬರು ನನ್ನ ಗೆಳೆಯ "ಅವಿನಾಶ್ ಕಾಮತ್". ಅವಿನಾಶ್ ಒಬ್ಬ ವಿಶೇಷ ಥರನಾದ ಅಭಿಮಾನಿ. ಜಯಂತ್ ಬರೆದ ಹಾಡುಗಳ ವಿಮರ್ಶೆ ಹಾಗು ಅವಲೋಕನ ಮಾಡುವ ಸಾಹಸ ಮಾಡಿದ್ದಾರೆ. ತಮ್ಮ ಮೆಚ್ಚಿನ ಗೀತೆ ರಚನೆಕಾರ ಜಯಂತ್ ಅವರಿಗೆ ಗಿಫ್ಟ್ ಆಗಿ ಒಂದು ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ಯೋಗರಾಜ್ ಭಟ್, ಮನೋಮೂರ್ತಿ, ರಮೇಶ್ ಅರವಿಂದ್, ನಾಗತಿಹಳ್ಳಿ ಚಂದ್ರಶೇಖರ್ ಮುಂತಾದವೆರಲ್ಲ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ.ಅವರ ಎರಡು ಹಾಡುಗಳಿಗೆ ನಾನು ವಿಮರ್ಶೆ ಬರೆದಿದ್ದೇನೆ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತದೆ. ಈ ರೀತಿ ಅಭಿಮಾನಿಯೊಬ್ಬ ಪುಸ್ತಕ ಬಿಡುಗಡೆ ಮಾಡಿರುವುದು ಇದೆ ಮೊದಲು. ಈ ಪುಸ್ತಕದ ಹೆಸರು "ಈ ನಯನ ನೂತನ - ಜಯಂತ್ ಕಾಯ್ಕಿಣಿ ಅವರ ಚಿತ್ರ ಗೀತೆಗಳ ಸ್ಪಂದನ". ಈ ಪುಸ್ತಕ ಬೆಂಗಳೂರಿನ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ (ಸಪ್ನಾ ಬುಕ್ ಸ್ಟಾಲ್ , ಅಂಕಿತ ಬುಕ್ ಸ್ಟಾಲ್, ನವ ಕರ್ನಾಟಕ ಹಾಗು ಮುಂತಾದ ಪುಸ್ತಕ ಅಂಗಡಿಗಳು) ಲಭ್ಯವಿದೆ.