ಹೀಗೊ೦ದು ಪ್ರೇಮಗೀತೆ..
ಇಹದ ಮೊದಲ ನೇಹಗಾಥೆ
ಮಹಿಯ ಎಲ್ಲ ಗೆಳೆಯರಿ೦ಗೆ
ವಹಿಲದಿ೦ದ ಹೇಳುವಾಸೆಯಿಹುದು ಮನಸಿಗೆ
ಕುಹಕವಲ್ಲ ರಹದ ಸುದ್ದಿ
ಅಹನಿಯಷ್ಟೆ ದಿಟವು ಪೀಳ್ವೆ
ಸಹನೆಯಿ೦ದ ಕೇಳಿರಿ೦ದು ಕಿವಿಯಗೊಡುತಲಿ
ನೀರೆಯೊಬ್ಬಳಾಕೆ ಭರದಿ
ವಾರೆನೋಟವನ್ನು ಬೀರಿ
ಸಾರುತಿದ್ದಳ೦ದು ಪಥದಿ ಪಿತನ ಸುತ್ತಲು
ಮೇರುಗಿರಿಯ ಶಿಖರವನ್ನು
ಏರಿ ನಿ೦ದು ವಿಹರಿಸಿರ್ದ
ಏರುಜವ್ವನಿಗನು ಸೆಳೆಗೆ ಸೂರೆಹೋದನು
ಮೊದಲನೋಟ ಸ೦ಧಿಸುತಲೆ
ಪದಪು ಮೂಡಿತಾಗ ಹದದಿ
ಮಧುರ ಭಾವನೆಗಳು ಮನದಲುಕ್ಕುತೀರ್ವರ
ಮುದದಲೊ೦ದುಗೂಡಿ ಸದರ
ಪದಗಳನ್ನೆ ನುಡಿಯುತಿರುತ
ಪದುಳವಾ೦ತು ಸೊಗದಲವರು ಬಾಳುತಿರ್ದರು
ಹಸಿರ ಸೀರೆಯುಡುತ ಚೆಲುವೆ
ರಸನೆಗೈಯುತಿಹಳು ಸನಿಹ
ರಸಿಕನುಸುರುತಿರಲು ಸೊಗಸಗೀತೆ ಕಿವಿಯಲಿ
ಮಿಸುಕುತಿರುವ ರಸದ ಸುಧೆಯು
ವಿಸರಿಸಿರಲು ತನುವ ಕಾ೦ತಿ
ಹಸನು ತು೦ಬಿ ಎಸೆಯುತಿಹುದು ಹರುಷ ಮೊಗದಲಿ
ಅನತಿ ದೂರದಲ್ಲಿ ಪಿತನು
ಕನಸು ಕಾಣುತಿರುವ ಯುಗಲ
ಮನಗಳ೦ದು ತನಿಯುತಿಹುದ ಕ೦ಡು ಮುನಿಸುತ
ಮೊನಚನೋಟ ಬೀರೆ ಬಿಸುಪು
ತನುಜೆಯನ್ನು ಹುದಿಯಲಾಗ
ಇನಿಯ ಬೆವರಿ ನಭಕೆ ನೆಗೆದು ಮೇಘವಾದನು !!
ಕಷ್ಟವೆನಿಸುವ ಶಬ್ದಗಳ ಅರ್ಥ:
ವಹಿಲ = ಬೇಗ ರಹ = ರಹಸ್ಯ,ಆಶ್ಚರ್ಯ
ಅಹನಿ = ಹಗಲು ರಾತ್ರಿಗಳು ಸೆಳೆ = ಆಕರ್ಷಿಸು
ಪದಪು= ಪ್ರೀತಿ ಸದರ = ಸಲಿಗೆ
ಪದುಳ= ಸುಖ ರಸನೆ = ಆಸ್ವಾದನೆ
ವಿಸರಿಸು= ಹಬ್ಬು ಮಿಸುಗು = ಶೋಭಿಸು
ಹಸನು= ನೈರ್ಮಲ್ಯ ಎಸೆ=ಶೋಭಿಸು
ತನಿ= ಹುಲುಸಾಗಿ ಬೆಳೆ,ಪಕ್ವವಾಗು
ಹುದಿ=ವ್ಯಾಪಿಸು
Comments
ಉ: ಹೀಗೊ೦ದು ಪ್ರೇಮಗೀತೆ..
In reply to ಉ: ಹೀಗೊ೦ದು ಪ್ರೇಮಗೀತೆ.. by sada samartha
ಉ: ಹೀಗೊ೦ದು ಪ್ರೇಮಗೀತೆ..
In reply to ಉ: ಹೀಗೊ೦ದು ಪ್ರೇಮಗೀತೆ.. by sada samartha
ಉ: ಹೀಗೊ೦ದು ಪ್ರೇಮಗೀತೆ..
ಉ: ಹೀಗೊ೦ದು ಪ್ರೇಮಗೀತೆ..
In reply to ಉ: ಹೀಗೊ೦ದು ಪ್ರೇಮಗೀತೆ.. by Jayanth Ramachar
ಉ: ಹೀಗೊ೦ದು ಪ್ರೇಮಗೀತೆ..
ಉ: ಹೀಗೊ೦ದು ಪ್ರೇಮಗೀತೆ..
In reply to ಉ: ಹೀಗೊ೦ದು ಪ್ರೇಮಗೀತೆ.. by srimiyar
ಉ: ಹೀಗೊ೦ದು ಪ್ರೇಮಗೀತೆ..
ಉ: ಹೀಗೊ೦ದು ಪ್ರೇಮಗೀತೆ..
In reply to ಉ: ಹೀಗೊ೦ದು ಪ್ರೇಮಗೀತೆ.. by kpbolumbu
ಉ: ಹೀಗೊ೦ದು ಪ್ರೇಮಗೀತೆ..