ಮಧುನ್ಯಾಯ
ಅರಳಿಹವು ಸುಮಗಳಿವು
ಹೂದೋಟದೊಡಲಿನಲಿ
ಸುಮಗಳೊಡಲಿನಲಿಹುಮ
ಕುಸುಮ ಜೇನು
ಹಿರಿದು ಕಿರಿದುಗಳಿಹವು
ಬಿರಿದ ಹೂವುಗಳಲ್ಲಿ
ಆರಿಸಲು ಬಂದಿಹುದು
ಹಾರಿ ಜೇನು
ತೋಟದೊಡೆಯನು ಯಾರು ?
ಹೂವಿಗರಸನು ಯಾರು ?
ರಸವುಂಬ ಜೇನಿಗದು
ಲಕ್ಷ್ಯವೇನು ?
ತೋಟ ಒಡೆಯನಿಗಿರಲಿ
ಹೂವು ಅರಸನಿಗಿರಲಿ
ಜಾಣ ಜೇನುಗಳಿಂದ
ಮಧುರ ಜೇನು
- ಸದಾನಂದ
Comments
ಉ: ಮಧುನ್ಯಾಯ
In reply to ಉ: ಮಧುನ್ಯಾಯ by raghumuliya
ಉ: ಮಧುನ್ಯಾಯ
ಉ: ಮಧುನ್ಯಾಯ
In reply to ಉ: ಮಧುನ್ಯಾಯ by gopaljsr
ಉ: ಮಧುನ್ಯಾಯ