ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಲ್ಪನೆ

ಮುಗಿಲ ತಾರೆಯ ಮಡಿಲಲಿ

ನಿನ್ನ ನಗುವ ಕಣ್ಣಲಿ

ಮಳೆಬಿಲ್ಲಿನ ಸುಖದ ರಂಗಲಿ

ಮನ ಇನಿಯನ ಪ್ರೀತಿಯಲಿ

ನನ್ನ ಹೃದಯ ಮಿಂಚಿದೆ

ನಕ್ಕು ನಲಿದು ಹಾರಾಡಿದೆ

ಪ್ರೀತಿಯ ತೆರೆಯಲಿ ಮುಳುಗಿದೆ

ನೀ ಪ್ರೇಮದ ಕವನ ಹಾಡಿದೆ

ನೆಲುಮೆಯ ಪತ್ರವ ಬರೆದಿಹೆ

ಮುಗಿಲ ತಾರೆಯ ಮಡಿಲಲಿ

ಮಧುಚಂದ್ರನ ಬೆಳಕಲಿ

ತನು ಮನವು ನಿನ್ನಲಿ

ಮನ ಮುಳುಗಿದೆ ಪ್ರೀತಿಯಲಿ

 

 

ಈ ಸ್ಥಳ ಗುರುತಿಸುವಿರಾ?

೨ ದಿನದ ರಜೆಯಲ್ಲಿ ಮಾಮೂಲಿನಂತೆಯೆ ಚಾರಣಕ್ಕೆ ಹೊರಟಾಗ ಹೊಳೆದದ್ದು, ಹೊರನಾಡು ಪಕ್ಕದಲ್ಲಿರುವ ಮೇರುತಿ ಗುಡ್ಡ. ವಸತಿ ಊಟ ಸೌಲಭ್ಯಕ್ಕೆ ಸಹಾಯವಿತ್ತ ರಾಘವೇಂದ್ರ ನಾವಡರಿಗೆ ಮತ್ತವರ ಸ್ನೇಹಿತ ಸುಂದರ ಅವರಿಗೂ ಧನ್ಯವಾದಗಳು. ಶನಿವಾರ ಬೆಳಿಗ್ಗೆಯೆ ಬೆಂಗಳೂರಿನಿಂದ ಹೊರಟಾಗ ಬೇಗನೆ ಹೊರನಾಡನ್ನು ತಲುಪುವ ಬದಲು ಈ ಕೆರೆಯನ್ನು ಹುಡುಕಿ ಹೊರಟೆ. ಕೊನೆಗೂ ಸಿಕ್ಕ ಈ ಕೆರೆಯ ನೋಟ ರಮಣೀಯ. ಹೆಚ್ಚು ಪ್ರಸಿದ್ದವಲ್ಲ ಆದ್ದರಿಂದಲೇ ಬಹುಶಃ ಇನ್ನೂ ಈ ಪ್ರದೇಶ ನೈರ್ಮಲ್ಯದಿಂದಿದೆ.

ಭಾರತದಲ್ಲಿ ಕ್ರಿಸ್ತ ಶಕದ ಬಳಕೆಯೇ ಏಕೆ ಮತ್ತು ಹೇಗೆ ಬಂದಿತು

ಮೊನ್ನೆ  ಒಂದು ಚರ್ಚೆಯಲ್ಲಿ  ದೇವ ದೂತ ಏಸು ಕ್ರಿಸ್ತರು ಶಂಕರಾಚಾರ್ಯರಲ್ಲಿ  ವೇದ ಮಂತ್ರ ಗಳನ್ನು ಕಲಿತರು ಎಂಬುದು ಟಿವಿಯಲ್ಲಿ ಬರುತ್ತಿತ್ತು. ಒಮ್ಮೆಗೆ ಹೌದಲ್ಲವಾ ಭಾರತದ ಇತಿಹಾಸ ಎಷ್ಟು ಹಳೆಯದು ಎಂದು ಅನ್ನಿಸಿಒಂದು ರೀತಿಯ ಉನ್ನತ ಭಾವ ಮೂಡುತ್ತಿದ್ದಂತೆಯೇ ಏಕೋ  ಕ್ರಿಸ್ತಶಕವೇ ಹೇಗೆ ಬಳಕೆಯಲ್ಲಿ ಬಂತು  ಎಂಬ ಪ್ರಶ್ನೆ ಮೂಡಿತು

ನಮ್ಮ ಯಾವುದೇ ಇತಿಹಾಸದ ಪಠ್ಯವನ್ನು ತೆಗೆದುಕೊಂಡರೂ , ಪುರಾಣದ ( ಮಹಾಭಾರತದ ಕಾಲವನ್ನು ಹೇಳಲು ಸಹಾ ಕ್ರಿಸ್ತ ಪೂರ್‍ವ ೩೦೦೦ ದ ಮುಂಚೆ ಎಂದೇ ಹೇಳುತ್ತಾರೆ) ಏಕೆ  ಕ್ರಿಸ್ತನ ಶಕೆಯನ್ನೇ ರೆಫರೆನ್ಸ್ ಆಗಿ ತೆಗೆದುಕೊಳ್ಳಲಾಗುತ್ತಿದೆ

ನಮ್ಮಲ್ಲಿ ಶಾಲಿವಾಹನ ಶಕೆ ಅಥವ ವಿಕ್ರಮ ಶಕೆ ಈ ರೀತಿಯ ಶಕೆಗಳೂ ಇವೆ. ಇವುಗಳೇಕೆ ಪ್ರಚಲಿತವಿಲ್ಲ

ಋಣಿ

ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡು ಸಲಹಿದ ಕಡಲಿಗೆ ಆ ಮುತ್ತು ಋಣಿ


ತನ್ನ ರಸವನ್ನೇ ಉಣಬಡಿಸಿದ ಹೂವಿಗೆ ಆ ದುಂಬಿ ಋಣಿ


ತನ್ನ ಮಡಿಲಲ್ಲಿ ಗೂಡಿಗೆ ಜಾಗ ಕೊಟ್ಟ ಮರಕ್ಕೆ ಆ ಹಕ್ಕಿ ಋಣಿ


 


ತಾನು ಸಲಹಿದ ಬಿಂದು ಮುತ್ತಾಯಿತೆಂಬ ಭಾವಕ್ಕೆ ಕಡಲು ಯಾರಿಗೆ ಋಣಿ


ತಾನು ಸಿಹಿ ಹಣ್ಣು ಆದೆನೆಂಬ ಸಾರ್ಥಕತೆಗೆ ಹೂವು ಯಾರಿಗೆ ಋಣಿ


ಒಂಟಿಯಾದ ಹೆಮ್ಮರಕ್ಕೆ ಹಾಡಿ ಮುದ ನೀಡಿದ ಹಕ್ಕಿಗೆ ಯಾರು ಋಣಿ


 


ನನ್ನೊಳಗೆ ನೀನಿರಿಸಿದ ಚೇತನಕ್ಕೆ ನಾನೂ....?


ಆ ಚೇತನಕ್ಕೆ ಮಾಧ್ಯಮವಾದ ನನಗೆ ಅದೋ.... ?


ನಮ್ಮಿಬ್ಬರ ಮಿಲನ ಮಾಡಿಸಿದ ನಿನಗೆ ನಾವೋ.....?

ರಂಗಸ್ವಾಮಿ 'ಸಾಮಿ'

ಆಸೀತ್ ಪುರಾ ಬೆಂಗಳೂರು ಮಹಾನಗರೇ ರಂಗಸ್ವಾಮಿ ನಾಮ ಪುಂಡಪ್ರಚಂಡ:


ರಂಗಸ್ವಾಮಿ ಅಲಯಾಸ್ ರಂಗ ಅಲಯಾಸ್ ಸ್ಪಾಟ್ ರಂಗ ಒಬ್ಬ ಸು'ಸ್ಲಂ'ಸ್ಕೃತ ಹುಡುಗ, ಇಡೀ area ಬೆಚ್ಚಿ ಬೀಳುವ ಮಚ್ಚು ಹುಡುಗ.ಇವನ ಕಥೆ ಹೇಳ್ತಾಹೊದ್ರೆ too ಮಚ್ಚು  ಆಗತ್ತೆ ಅಂತ ಒಂದು episode ಮಾತ್ರ ಹೇಳ್ತೀನಿ.

 

ಇತ್ತೀಚಿನ ದಿನಗಳಲ್ಲಿ ಬರ್ತಿರೋ ಮಚ್ಚು ಲಾಂಗು ಕನ್ನಡ ಚಿತ್ರಗಳಿಗೆ ಇವನು SME (subject matter expert ).ರಿಯಲ್ ಎಸ್ಟೇಟ್ , ಕಳ್ಳದಂಧೆ ನಲ್ಲಿ ದುಡ್ಡು ಮಾಡಿ, ಹೆಸರು ಮಾಡೋಕ್ಕೊಸ್ಕರ ಕನ್ನಡ ಸಿನಿಮಾ produce ಮಾಡ್ತಿರೋ ಫಿಲ್ಮ್ producers ಗಳಿಗೆ ಇವನ ಸಲಹೆ ಅತ್ಯಗತ್ಯ , ಮಚ್ಚು ಹೇಗೆ ಬೀಸೋದು , ಪೆಟ್ರೋಲ್ ಬಾಂಬ್ ಹೇಗೆ ಮಾಡೋದು ಎಲ್ಲ ನೈಜ ವಾಗಿ ಮೂಡಲು ಇವನ ಸಲಹೆ ಬೇಕೇಬೇಕು.

ಹರಟೆ: ಪೀಕಿವೀಡಿಯದಲ್ಲಿ ಕನ್ನಡಪದಗಳಿಗೆ ಸಮನಾಂತರ ಇಂಗ್ಲೀಷ್ ಪದಗಳು

ಈದಿನ ಸಂಪದ ನೋಡುವಾಗ ಒಂದು ಲೇಖನ ಗಮನಿಸಿದೆ "ವೀಕಿಪೀಡಿಯದಲ್ಲಿ ಇಂಗ್ಲೀಷ್ ಪದಗಳಿಗೆ ಸಮಾನಂತರ ಕನ್ನಡ ಪದಗಳು". ನನಗೆ ಏಕೊ ಅನ್ನಿಸಿತು ಇದಾದರೆ ಪರವಾಗಿಲ್ಲ ನಮ್ಮ ಕನ್ನಡ ಬಾಷೆಯ ಪರಿಚಯವಿರುವದರಿಂದ ಹೇಗೊ ವಿಷಯವನ್ನು ಮುಟ್ಟಿಸಬಹುದು, ಆದರೆ ಇದರ ಇನ್ನೊಂದು ಮುಖ (vice_versa) ವಾದರೆ ಅದು ಕಷ್ಟವೆನಿಸಿತು. ಅಂದರೆ ಕನ್ನಡ ಪದಗಳಿಗೆ ಸಮಾನಾಂತರ ಇಂಗ್ಲೀಷ್ ಪದಗಳನ್ನು ತಿಳಿಯುವುದು. ಇದೇನು ಸುಲುಬವೆನ್ನಬೇಡಿ ಹಲವು ಸಾರಿ ನನ್ನ ತಲೆ ತಿಂದಿದೆ( ಇದನ್ನು ಇಂಗ್ಲೀಷ್ ನಲ್ಲಿ ಹೇಳಿ)


ಕಳೆದವಾರ ತುಮಕೂರಿಗೆ ಹೋಗಿದ್ದೆ , ಬೆಳಗ್ಗೆ ಎದ್ದು ಹಾಸಿಗೆಗಳನ್ನು ಸುತ್ತಿಡುತ್ತಿದ್ದರು. ಬೆಂಗಳೂರಿನ ಬಹಳ ಮನೆಗಳಲ್ಲಿ ಮಂಚ ಇರುವದರಿಂದ ಈ ಪದ್ದತಿ ಕಡಿಮೆ. ನೋಡುತ್ತ ಕುಳಿತಿದ್ದ ನನ್ನ ಮಗಳು ತಲೆ ಕೆಡಸಿದಳು ’ಅಪ್ಪ ಹಾಸಿಗೆ ಸುತ್ತಿಡು ಅಂತ ಇಂಗ್ಲೀಷ್ ನಲ್ಲಿ ಹೇಗೆ ಹೇಳುವುದು?’

ಕುವೆಂಪು ಜನ್ಮ ದಿನ (ಡಿಸೆಂಬರ್ 29) : ಒಂದಷ್ಟು ಕವಿತೆಗಳ ಮೆಲುಕು

ಕುವೆಂಪು


ಹಕ್ಕಿಯುಲಿಗಳುಕ್ಕುವಿಂಪು
ಸುಗ್ಗಿದಳಿರ ಸಗ್ಗಸೊಂಪು
ಹೊಸಹೊಂಗೆಯ ನೆಳಲ ತಣ್ಪು
ಚಿಂಗೆನ್ನೆಯ ಚೆಲುವು ನುಣ್ಪು
ಸುರಹೊನ್ನೆಯ ಗೊಟ್ಟಿಗಂಪು
ಉಸಯಾಸ್ತದ ಬೈಗುಗೆಂಪು
ನಿರ್ಝರಿಣಿಯ ನೆರೆಯ ತಿಣ್ಪು
ಗಿರಿಶೃಂಗದ ಬರ್ದಿಲ ಬಿಣ್ಪು
ಗಡಿಕಾಣದ ಕಡಲ ಗುಣ್ಪು
ಉಡು ರವಿ ಶಶಿ ನಭದ ಪೆಂಪು
ಆದಿ ಆತ್ಮದ ಸಿರಿ ಅಲಂಪು
ಎಲ್ಲವೊಂದುಗೂಡಲೆಂದು
ವಿಧಿಯ ಮನಸು ಕಡೆದ ಕನಸು
ಕಾಣ್ಬ ಕಣಸೆ, ಕಾಣ್: ಕುವೆಂಪು!
ಭಕ್ತಿಯಡಿಯ ಹುಡಿ - ಕುವೆಂಪು!
ಗುರುಹಸ್ತದ ಕಿಡಿ - ಕುವೆಂಪು!
ನುಡಿರಾಣಿಯ ಗುಡಿ - ಕುವೆಂಪು!
ಸಿರಿಗನ್ನಡ ಮುಡಿ - ಕುವೆಂಪು!
ಇರ್ದುಮಿಲ್ಲದೀ ಕುವೆಂಪು!


ಶ್ರೀ ರಾಮಾಯಣ ದರ್ಶನಂ

ಪುಟ್ಟಿ ಗಂಡ ಹೊಟ್ಟೆ ತುಂಬಾ ಉಂಡ....

ನನ್ನ ಪೋಸ್ಟ್ ಪೇಡ್ ಮೊಬೈಲ್ ಬಿಲ್ಲು ನೋಡಿ, ಏನೇ? ಇದು ಎಂದು ಕೇಳಿದೆ. ಅದಕ್ಕೆ.. ನನ್ನ ಮಡದಿ ಅದು ಮೊಬೈಲ್ ಬಿಲ್ಲು ಎಂದಳು. ನಾನೆಲ್ಲಿ ಹೇಳಿದೆ ಕಾಮನಬಿಲ್ಲು ಅಂತ ಎಂದೆ. ಕಾಮನ ಬಿಲ್ಲು ಅಲ್ಲಾರಿ ಅದು ಕಾಮಣ್ಣನ ಬಿಲ್ಲು ಇರಬಹುದು ಎಂದು ಹೀಯಾಳಿಸಿದಳು. ಓ ಅಂದ ಹಾಗೆ ಇವತ್ತು ಆಫೀಸ್ ನಿಂದ ಬರುವ ಸಮಯದಲ್ಲಿ ಕಾಮನಬಿಲ್ಲು ಸಿ ಡಿ ತೆಗೆದುಕೊಂಡು ಬನ್ನಿ, ನನಗೆ ಆ ಸಿನೆಮಾ ಅಂದರೆ ತುಂಬಾ ಇಷ್ಟ ಎಂದು ಮಾತು ಮರೆಸಲು ನೋಡಿದಳು. ನೀನು ಹೀಗೆ ಫೋನ್ ಯೂಸ್ ಮಾಡ್ತಾ ಇದ್ದರೆ, ನಾನು ಬಿಲ್ಲು ಹಿಡ್ಕೊಂಡು ಕಾಡಿಗೆ ಹೋಗಬೇಕಾಗುತ್ತೆ ಎಂದೆ. ನಾನೊಬ್ಬನೇ ಅಲ್ಲ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ಶ್ರೀ ರಾಮನ ಜೊತೆ ಸೀತಾ ಮಾತೆ ಹೋಗಲಿಲ್ಲವೆ ಹಾಗೆ ಎಂದೆ. ಓ.. ನಾನು ಬರಲ್ಲಪ್ಪಾ ಬೇಕಾದರೆ ನೀವು ಹೋಗಿ ಬನ್ನಿ.