ಕಲ್ಪನೆ

ಕಲ್ಪನೆ

ಕವನ

ಮುಗಿಲ ತಾರೆಯ ಮಡಿಲಲಿ

ನಿನ್ನ ನಗುವ ಕಣ್ಣಲಿ

ಮಳೆಬಿಲ್ಲಿನ ಸುಖದ ರಂಗಲಿ

ಮನ ಇನಿಯನ ಪ್ರೀತಿಯಲಿ

ನನ್ನ ಹೃದಯ ಮಿಂಚಿದೆ

ನಕ್ಕು ನಲಿದು ಹಾರಾಡಿದೆ

ಪ್ರೀತಿಯ ತೆರೆಯಲಿ ಮುಳುಗಿದೆ

ನೀ ಪ್ರೇಮದ ಕವನ ಹಾಡಿದೆ

ನೆಲುಮೆಯ ಪತ್ರವ ಬರೆದಿಹೆ

ಮುಗಿಲ ತಾರೆಯ ಮಡಿಲಲಿ

ಮಧುಚಂದ್ರನ ಬೆಳಕಲಿ

ತನು ಮನವು ನಿನ್ನಲಿ

ಮನ ಮುಳುಗಿದೆ ಪ್ರೀತಿಯಲಿ