ಹರಟೆ: ಪೀಕಿವೀಡಿಯದಲ್ಲಿ ಕನ್ನಡಪದಗಳಿಗೆ ಸಮನಾಂತರ ಇಂಗ್ಲೀಷ್ ಪದಗಳು

ಹರಟೆ: ಪೀಕಿವೀಡಿಯದಲ್ಲಿ ಕನ್ನಡಪದಗಳಿಗೆ ಸಮನಾಂತರ ಇಂಗ್ಲೀಷ್ ಪದಗಳು

ಈದಿನ ಸಂಪದ ನೋಡುವಾಗ ಒಂದು ಲೇಖನ ಗಮನಿಸಿದೆ "ವೀಕಿಪೀಡಿಯದಲ್ಲಿ ಇಂಗ್ಲೀಷ್ ಪದಗಳಿಗೆ ಸಮಾನಂತರ ಕನ್ನಡ ಪದಗಳು". ನನಗೆ ಏಕೊ ಅನ್ನಿಸಿತು ಇದಾದರೆ ಪರವಾಗಿಲ್ಲ ನಮ್ಮ ಕನ್ನಡ ಬಾಷೆಯ ಪರಿಚಯವಿರುವದರಿಂದ ಹೇಗೊ ವಿಷಯವನ್ನು ಮುಟ್ಟಿಸಬಹುದು, ಆದರೆ ಇದರ ಇನ್ನೊಂದು ಮುಖ (vice_versa) ವಾದರೆ ಅದು ಕಷ್ಟವೆನಿಸಿತು. ಅಂದರೆ ಕನ್ನಡ ಪದಗಳಿಗೆ ಸಮಾನಾಂತರ ಇಂಗ್ಲೀಷ್ ಪದಗಳನ್ನು ತಿಳಿಯುವುದು. ಇದೇನು ಸುಲುಬವೆನ್ನಬೇಡಿ ಹಲವು ಸಾರಿ ನನ್ನ ತಲೆ ತಿಂದಿದೆ( ಇದನ್ನು ಇಂಗ್ಲೀಷ್ ನಲ್ಲಿ ಹೇಳಿ)


ಕಳೆದವಾರ ತುಮಕೂರಿಗೆ ಹೋಗಿದ್ದೆ , ಬೆಳಗ್ಗೆ ಎದ್ದು ಹಾಸಿಗೆಗಳನ್ನು ಸುತ್ತಿಡುತ್ತಿದ್ದರು. ಬೆಂಗಳೂರಿನ ಬಹಳ ಮನೆಗಳಲ್ಲಿ ಮಂಚ ಇರುವದರಿಂದ ಈ ಪದ್ದತಿ ಕಡಿಮೆ. ನೋಡುತ್ತ ಕುಳಿತಿದ್ದ ನನ್ನ ಮಗಳು ತಲೆ ಕೆಡಸಿದಳು ’ಅಪ್ಪ ಹಾಸಿಗೆ ಸುತ್ತಿಡು ಅಂತ ಇಂಗ್ಲೀಷ್ ನಲ್ಲಿ ಹೇಗೆ ಹೇಳುವುದು?’


ಹೌದಲ್ಲವೆ ಇದು ಕಷ್ಟವೆ ’ROLL THE BED ? ' ಅಂದರೆ ಉರುಳಿಸು ಅಂತ ಅರ್ಥಬರುತ್ತೆ , ಹಾಸಿಗೆ ಉರುಳಿಸಿವುದೆ ? ! . ’FOLD THE BED?' ಹಾಸಿಗೆ ಮಡಚುವುದೆ? ’FOLD SPIRALLY THE BED?' :)ಏಕೊ ಸರಿಹೋಗುತ್ತಿಲ್ಲ ಅನ್ನಿಸಿ ಸುಮ್ಮನಾದೆ.


ಹಿಂದೊಮ್ಮೆ ಹೀಗೆ ಕೇಳಿದ್ದಳು "ನೀನು ನಿಮ್ಮಪ್ಪನಿಗೆ ಎಷ್ಟನೆ ಮಗ?" ಈ ಪ್ರಶ್ನೆಯನ್ನು ಇಂಗ್ಲೀಷಿಗೆ ತರ್ಜುಮೆ ಮಾಡು ಅಂತ. ಹೇಗೆ ಹೇಳುವುದು "WHAT IS THE RANK OF YOU AMMONG THE SONS OF YOUR FATHER ? " ಛೇ ! ಏಕೊ ಅಸಂಬದ್ದ ಅನ್ನಿಸಿತು. ಸುಮ್ಮನಾದೆ.


ಅದೆ ನೋಡಿ ಅವರ ಸಾಮಾಜಿಕ ಸ್ಥಿಥಿ ನಮ್ಮಲ್ಲಿ ಇಲ್ಲದಿದ್ದರು ನಾವು ಅವರ ಸಮಾಜದ ಪ್ರಶ್ನೆಯನ್ನು ಕನ್ನಡದಲ್ಲಿ ಸುಲುಬವಾಗಿ ಕೇಳಬಹುದು. ’ನೀನು ನಿಮ್ಮ ಎಷ್ಟನೆ ಅಪ್ಪನ ಎಷ್ಟನೆ ಮಗ? ಎಂದು. ನಮ್ಮಲೊಬ್ಬರು ವಿದೇಶಿಯರ ಸಾಮಾಜಿಕ ಸ್ಥಿಥಿಯನ್ನು ಸುಲುಬವಾಗಿಯೆ ಹೇಳಿದರು


ಗಂಡ ಹೆಂಡತಿಗೆ ಹೇಳುತ್ತಾನಂತೆ " my children and your children are playing with our childern" ಅಂತ.


ನನ್ನ ನೆನೆಪು ಏಕೊ ಹಿಂದಕ್ಕೆ ಓಡಿತ್ತು, ನಾನಾಗ ಕಾಲೇಜಿನಲ್ಲಿ ಓದುತ್ತಿದ್ದೆ , ಬೆಳಗ್ಗೆ ಹೊರಡುವಾಗ ನಾನು ಬಾಡಿಗೆಗಿದ್ದ ರೂಮಿನ ಒಡೆಯನ ಮಗಳು ಎಂಟನೆ ತರಗತಿ ಇರಬಹುದು , ತನ್ನ ರಜಾ ಚೀಟಿಯನ್ನು ಅವಳ ಶಾಲೆಗೆ ತಲುಪಿಸುವಂತೆ ಹೇಳಿ ಕೊಟ್ಟಳು. ನಾನು ಹೇಗು ಅದೇ ದಾರಿಯಲ್ಲಿ ಹೋಗುವುದು ಹಾಗಾಗಿ ಒಪ್ಪಿಕೊಂಡೆ . ದಾರಿಯಲಿ ಸುಮ್ಮನಿರದೆ ಅ ರಜಾಚೀಟಿಯನ್ನು ತೆಗೆದು ನೋಡಿದೆ. ಸುಂದರ ಅಕ್ಷರಗಳಲ್ಲಿ ಬರೆದಿದ್ದಳು ಅವಳ ಕ್ಲಾಸ್ ಟೀಚರ್ ಗೆ " AS I AM SUFFERING FROM MY SISTER MARRIAGE KINDLY GRANT ME ONE DAY LEAVE ON-----" . ನಾನು ನಗುತ್ತ ಸುಮ್ಮನಾದೆ.


ನಮ್ಮಲ್ಲಿ ನೋಡಿ ಇಪ್ಪತ್ತು ಸಂಬದಗಳು ಅತ್ತಿಗೆ ಚಿಕ್ಕಮ್ಮ ದೊಡ್ಡಮ್ಮ ಅತ್ತೆ ಸೋದರತ್ತೆ ನಾದಿನಿ ಹೀಗೆ ಆದರೆ ಈಗ ಒಂದೆ ಪದ "ಆಂಟಿ’ ಅಂತ ಅದೇ ರೀತಿ ’ಅಂಕಲ್’ ಸಹ


ಇಂತಹುಗಳನ್ನೆಲ್ಲ ನೆನೆಯುವಾಗ ಅನ್ನಿಸುತ್ತೆ , ಕನ್ನಡ ಪದಗಳಿಗೆ ಸಮಾನಾಂತರವಾಗಿ ಇಂಗ್ಲೀಷ್ ಪದಗಳನ್ನು ಕಂಡು ಹಿಡಿಯುವ ಅಗತ್ಯವಿದೆಯೇನೊ ಎಂದು.

Rating
No votes yet

Comments