ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹನಿಯಾದ ಪ್ರೀತಿ..

ಆ ಮೋಡ ನಾನಾದೆ ಈ ಭೂಮಿ ನೀನಾದೆ

ಮೋಡದ ಅಂದ ನೀ ಸವಿದೆ

ನೀ ಸವಿದ ಸುಖವ ನಾ ಕಂಡೆ

ನಮ್ಮಿಬ್ಬರ ಮಿಲನ ಇದ್ದಂತೆ

ಮೋಡವಾದ ನಾನು ನಿನಗಾಗಿ ಕರಗಿದೆ

ಮಳೆಯ ಪುಟ್ಟ ಹನಿಯಾಗಿ ಧರೆಗಿಳಿದೆ

ಒಲವು ತುಂಬಿದ ಹೃದಯ ನನ್ನದಂತೆ

ಚಿನ್ಮಯ ಪ್ರೀತಿ ಗೂಡು ನಿನ್ನದಂತೆ

ಮುಂಗಾರು ಮಳೆಯಲ್ಲಿ ನಿನ್ನ ಅಪ್ಪಿಕೊಂಡೆ

ಮುತ್ತಿನಂಥ ಮುತ್ತನ್ನು ನೀ ಕೊಟ್ಟೆ

ನಾಚಿ ನಾ ನೀರಾಗಿ ನಾ ನಿನ್ನಲ್ಲಿ ಕರಗಿದೆ

ನಾ ನೀನಾಗಿ ನೀ ನಾನಾಗಿದೆ

ಭೂಮಿಯಲ್ಲಿ ಹನಿಯನ್ನು ಹುಡುಕಾಡಿದೆ

ಮಿಲನವಾದ ಪ್ರೀತಿ ಕಂಡು ಖುಷಿಯಾದೆ

ನೆನಪಲ್ಲೆ ಆವಿಯಾಗಿ ನಭ ಸೇರಿದೆ

ಆ ಮೋಡ ನೀನಾದೆ ಈ ಭೂಮಿ ನಾನಾದೆ

 

 

ನಿಸರ್ಗದ ರೂಪ..

ಮಧುರವಾದ ಮಾತುಗಳಿಂದ

ಮನ ಪ್ರೀತಿಯಿಂದ ತುಂಬಿದೆ

ಆಕಾಶ ಭೂಮಿಯು ಒಂದಾಗಿ

ಅಪ್ಪಿಕೊಂಡಂತೆ ಕಾಣಿದೆ 

ಮೋಡವನ್ನು ನೋಡಿ ನವಿಲು

ಕುಣಿದು ಕುಪ್ಪಳಿಸಿದೆ

ಮುಂಜಾನೆಯ ಇಬ್ಬನಿಗೆ

ಎಲೆಯು ಅರಳಿ ನಾಚಿದೆ

ಸೂರ್ಯನ ಕಿರಣಗಳಿಗೆ ಬೆರಗಾಗಿ

ಹೂ ತನ್ನ ಸೌಂದರ್ಯ ರೂಪಿಸಿದೆ
ಮುಸ್ಸಂಜೆಯ ಪಕ್ಷಿಗಳು ಚಿಲಿಪಿಲಿ

ಶಬ್ದ ಮಾಡಿ ಗೂಡು ಸೇರಿವೆ

ಹೀಗೆ ಕಣ್ಣು ಮುಚ್ಚಿ ಕುಳಿತರೆ
ನಿಜವಾದ ನಿಸರ್ಗದ ರೂಪ ಕಾಣುತ್ತದೆ..

 

ಹೂವು

ಕಿತ್ತುಕೊಳ್ಳಿ ಈ ಸಣ್ಣ ಹೂವನ್ನು ತಡಮಾಡದೆ
ನೆಲಕ್ಕೆ ಬಿದ್ದು ಧೂಳಾಗುವುದೆಂಬ ಭಯವಿದೆ ನನ್ನಲ್ಲಿ\\

ಅವನ ಕೊರಳ ಹಾರದಲ್ಲಿ ಜಾಗ ಸಿಗುವುದೋ ಕಾಣೆ
ಆದರೆ ಗೌರವಿಸೋಣ, ನೋವಿನ ಕೈಗಳಿಂದ
ಸ್ಪರ್ಶಿಸಿ ಕಿತ್ತು ಅರ್ಪಿಸೋಣ ಅವನಿಗೆ
ಸಮರ್ಪಿಸುವ ಕಾಲ ಕಳೆದುಹೋಗುವುದೇನೋ
ಎಂಬ ಭಯವಿದೆ ಆಗದ ಹಾಗೆ ನೋಡಿಕೋ\\

ಅದರ ಬಣ್ಣಗೆಟ್ಟಿದ್ದರೂ, ವಾಸನೆ ಕ್ಷೀಣವಾಗಿದ್ದರೂ
ಆ ಹೂವನ್ನು ಅವನ ಸೇವೆಗಾಗಿಯೇ ಕಿತ್ತುಕೊಳ್ಳಿ
ಇನ್ನೂ ಬಹಳಷ್ಟು ಕಾಲವಿದೆಯೆಂದು ವಿಳಂಬ ಮಾಡಬೇಡಿ\\

ಪ್ರೇರಣೆ: Flower by Rabindranatha Tagore

ಸಮ್ಮಿಶ್ರ ಸಂಸಾರ ....

ನಮ್ಮ ಸಮ್ಮಿಶ್ರ ಸಂಸಾರ(ಸರಕಾರ) ಸುಗಮವಾಗಿ ನಡೆದು ಕೊಂಡು ಹೋಗಬೇಕಾದರೆ ಬೇಕೇ.. ಬೇಕು.. ಸರ (ಅದು ಬಂಗಾರದ್ದು ಮಾತ್ರ) ಮತ್ತು ಕಾರ(ಸಧ್ಯ ಇನ್ನೂ ಕೇಳಿಲ್ಲ.)... ಒಂದು ದಿನ ಏನೋ? ಇರಲಿ ಎಂದು ಪ್ಲ್ಯಾಟಿನಮ್ ಸರ ತೆಗೆದುಕೊಂಡು ಬಂದಿದ್ದೆ. ಅವಳಿಗೆ ಸಕ್ಕತ್ ಕೋಪ ಬಂದು ಬಿಟ್ಟಿತ್ತು. ಏನ್ರೀ..? ನನಗೆ ಅಲ್ಯೂಮಿನಿಯಮ್ ಸರ ತಂದು ಕೊಟ್ಟಿದ್ದೀರ?. ಎಲ್ಲಾ ಗಂಡಸರು ಇಷ್ಟೇ... ಮದುವೆ ಆಗುವ ಮುಂಚೆ ಚಿನ್ನ... ರನ್ನ... ಎಂದೆಲ್ಲ ಹೋಗಳುವದು. ಆಮೇಲೆ ಮಡದಿ ಎಂದರೆ ಅಷ್ಟಕ್ಕೇ ಅಷ್ಟೇ ಎಂದು ಸರ ಬಿಸಾಡಿದಳು. ಸರಸರನೇ ಹೋಗಿ ಅದನ್ನು ಎಕ್ಸ್‌ಚೇಂಜ್ ಮಾಡಿ ಚಿನ್ನದ ಸರ ತಂದೆ.

ಬಾಲ್ಕನಿಯ ತುಳಸಿ

ಹಳ್ಳಿ ಬಿಟ್ಟರೂ ಬಿಡದು ಮಣ್ಣ ವಾಸನೆ
ಹೊಗೆ ತಿನ್ನುತ್ತಾ
ನೆಲದಿಂದ ಮೇಲಕ್ಕೇರಿ ಏರಿ ಎತ್ತರಕ್ಕೇರಿದರೂ
ಮಾರ್ಬಲ್ಲುಗಳ ಮೇಲೆ
ಮಣ್ಣಿನ ಚಟ್ಟಿಯೊಳಗೊಂದು
ನನಗೂ ಸ್ಥಾನ
ಕೆಳಗಿನ ತುಳಸಿಗಳೀಗ
ನನ್ನ ಮಟ್ಟವಿಲ್ಲದ ನೋವು
ನನಗೋ ಉಳಿವಿಗಾಗಿ ದ್ಯುತಿ ಸಂಶ್ಲೇಷಣೆಯ
ದಿನದರ್ಧ ಬೀಳುವ ಸೂರ್ಯರಶ್ಮಿಗಳ ನೆರವು
ಸಿಕ್ಕಷ್ಟು ಮಣ್ಣಲ್ಲಿ ಊರಿ ಬೆಳೆಯಲು
ನಾನೊಂದು ನಾಗರಿಕ ತುಳಸೀ
ಹಸಿರಿಗೆ, ಮರೆಯದ ಹಿನ್ನಲೆಗೆ
ಮೂರ್ತ ರೂಪವಾಗುವ ಕಿರಿಯ ಸಸಿ
ಮಣ್ಣಲ್ಲಿ ಬೆರೆಯಲಾಗದಿದ್ದರೂ ನನಗೆ
ಮತ್ತೆ ನೀರುಣಿಸಲೆಂದು ಸ್ನಾನ ಮಾಡಿದ್ದಾಳೆ ಗರತಿ
ವಾಸ ಬಾಲ್ಕನಿಯಲ್ಲಾದರೇನು
ಅವಳ ಮನದಲ್ಲಿ ಈಗಲೂ ನಿಂತಿರುವೆ ನಾನು  

ಹೊಸ ವರುಷದ ಹರುಷ

 

ಬಂತು ನೋಡಿ ಹೊಸ ವರುಷ

ಮರೆಯದಿರಿ ಹಳೆ ವರುಷದ ಹರುಷ

ಸುಖ ಶಾಂತಿಯ ವರುಷ

ನಿಮ್ಮದಾಗಲಿ ಕೋಟಿ ಹರುಷ

 

ಬಂತು ನೋಡಿ ಹೊಸ ವರುಷ

ಕಿತ್ತೆಸೆಯಿರಿ ದುಃಖದ ವಿರಸ

ಸ್ನೇಹ ಪ್ರೀತಿಯ ಈ ವರುಷ

ನಿಮ್ಮದಾಗಲಿ ಕೋಟಿ ಹರುಷ

 

ಬಂತು ನೋಡಿ ಹೊಸ ವರುಷ

ಮಾಡದಿರಿ ಕೆಟ್ಟ ಕೆಲಸ

ಒಳಿತು ಭಾವದ ಈ ವರುಷ

ನಿಮ್ಮದಾಗಲಿ ಕೋಟಿ ಹರುಷ

 

ಬಂತು ನೋಡಿ ಹೊಸ ವರುಷ

ನೀನಾಗು ಸುಗುಣಿ ಬಂಗಾರದ ಮನುಷ್ಯ

ಸುಂದರ ಜೀವನದ ಈ ವರುಷ

ನಿಮ್ಮದಾಗಲಿ ಕೋಟಿ ಹರುಷ

 

ಬಂತು ನೋಡಿ ಹೊಸ ವರುಷ

ಹಾರೈಸುವೆ ನಾ ಮನಸಾ

ನೀವು ಬಾಳಿರಿ ನೂರು ವರುಷ

ನಿಮ್ಮದಾಗಲಿ ಕೋಟಿ ವರುಷ