ಬಾಲ್ಕನಿಯ ತುಳಸಿ
ಹಳ್ಳಿ ಬಿಟ್ಟರೂ ಬಿಡದು ಮಣ್ಣ ವಾಸನೆ
ಹೊಗೆ ತಿನ್ನುತ್ತಾ
ನೆಲದಿಂದ ಮೇಲಕ್ಕೇರಿ ಏರಿ ಎತ್ತರಕ್ಕೇರಿದರೂ
ಮಾರ್ಬಲ್ಲುಗಳ ಮೇಲೆ
ಮಣ್ಣಿನ ಚಟ್ಟಿಯೊಳಗೊಂದು
ನನಗೂ ಸ್ಥಾನ
ಕೆಳಗಿನ ತುಳಸಿಗಳೀಗ
ನನ್ನ ಮಟ್ಟವಿಲ್ಲದ ನೋವು
ನನಗೋ ಉಳಿವಿಗಾಗಿ ದ್ಯುತಿ ಸಂಶ್ಲೇಷಣೆಯ
ದಿನದರ್ಧ ಬೀಳುವ ಸೂರ್ಯರಶ್ಮಿಗಳ ನೆರವು
ಸಿಕ್ಕಷ್ಟು ಮಣ್ಣಲ್ಲಿ ಊರಿ ಬೆಳೆಯಲು
ನಾನೊಂದು ನಾಗರಿಕ ತುಳಸೀ
ಹಸಿರಿಗೆ, ಮರೆಯದ ಹಿನ್ನಲೆಗೆ
ಮೂರ್ತ ರೂಪವಾಗುವ ಕಿರಿಯ ಸಸಿ
ಮಣ್ಣಲ್ಲಿ ಬೆರೆಯಲಾಗದಿದ್ದರೂ ನನಗೆ
ಮತ್ತೆ ನೀರುಣಿಸಲೆಂದು ಸ್ನಾನ ಮಾಡಿದ್ದಾಳೆ ಗರತಿ
ವಾಸ ಬಾಲ್ಕನಿಯಲ್ಲಾದರೇನು
ಅವಳ ಮನದಲ್ಲಿ ಈಗಲೂ ನಿಂತಿರುವೆ ನಾನು
ಎಂಬ ಒಣ ಹೆಮ್ಮೆಯ ನಾನೀಗ ಒಡತಿ
Rating
Comments
ಉ: ಬಾಲ್ಕನಿಯ ತುಳಸಿ
In reply to ಉ: ಬಾಲ್ಕನಿಯ ತುಳಸಿ by Tejaswi_ac
ಉ: ಬಾಲ್ಕನಿಯ ತುಳಸಿ
ಉ: ಬಾಲ್ಕನಿಯ ತುಳಸಿ
In reply to ಉ: ಬಾಲ್ಕನಿಯ ತುಳಸಿ by gopaljsr
ಉ: ಬಾಲ್ಕನಿಯ ತುಳಸಿ
ಉ: ಬಾಲ್ಕನಿಯ ತುಳಸಿ
In reply to ಉ: ಬಾಲ್ಕನಿಯ ತುಳಸಿ by Iynanda Prabhukumar
ಉ: ಬಾಲ್ಕನಿಯ ತುಳಸಿ
ಉ: ಬಾಲ್ಕನಿಯ ತುಳಸಿ
In reply to ಉ: ಬಾಲ್ಕನಿಯ ತುಳಸಿ by kamath_kumble
ಉ: ಬಾಲ್ಕನಿಯ ತುಳಸಿ
In reply to ಉ: ಬಾಲ್ಕನಿಯ ತುಳಸಿ by santhosh_87
ಉ: ಬಾಲ್ಕನಿಯ ತುಳಸಿ