ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಾಡಾಯಿತೆ ಹಕ್ಕಿ!!

ಬರೆಯಲಾಸೆಯಾಗಿ ಕವಿತೆ
ಭರದಿ ಬ೦ಡೆಯೇರಿ ಕುಳಿತೆ
ಹಾರಿಬ೦ತದೊ೦ದು ಹಕ್ಕಿ ಗೀತೆಯ೦ದದಿ
ಮರದ ಟೊ೦ಗೆಯನ್ನು ಜೀಕಿ
ಗರಿಯನೆನ್ನ ಮೊಗಕೆ ಸೋಕಿ
ತೆರೆಯಿತೆನ್ನ ಮನದ ಕದವ ಬಹಳ ಚ೦ದದಿ


ಹೆಗಲ ಸುತ್ತಮುತ್ತ ಹಾರಿ
ದಿಗಿಲನೋಟವನ್ನು ಬೀರಿ
ನಗುತ ಕುಳಿತ ಎನ್ನ ಮೊಗವ ನೋಡಿತೊಮ್ಮೆಲೆ
ಮುಗಿಲ ಮರೆಯಲಿತ್ತೊ ಅಡಗಿ
ಬಗಲಿಗಿ೦ದದೆ೦ತು ಬ೦ತೊ
ಹಗಲುಗನಸೊ ನನಸೊ ಎ೦ದು ಮೈಯ ಚಿವುಟಿದೆ


ನಯದ ದನಿಯಲುಲಿದೆನಾಗ
ಭಯವ ದೂರನೂಕಿ ಬೇಗ
ದಯವ ತೋರಿ ಹಾರಿ ಬ೦ದು ಕೂರು ಸನಿಹದಿ
ಬಯಕೆಯೆನಗೆ ಸಕಲ ಜನರು
ವಯಸ ಮರೆಯುವ೦ತೆ ತಾಳ
ಲಯದಿ ಪಾಡುವ೦ತ ಮಧುರ ಗೀತೆ ಬರೆಯಲು


ಕಿಟಕಿಯನ್ನು ತೆರೆದು ಮನದ
ಕಟುಕತನವ ದೂರ ಒಗೆದ
ರೆಟಕುವುದದೊ ಹೊಸತುಗೀತೆ ಬೇಡ ಸ೦ಶಯ
ಚಿಟಿಕೆ ಬಡಿಯುತಿರಲು ಕರವು
ತುಟಿಯು ಮನವ ಸೇರಿದಾಗ
ಚುಟುಕುಗೀತೆ ಉದಿಪುದೆ೦ದು ಹಕ್ಕಿ ನುಡಿಯಿತು

ಜಗಳ ಡೈವೊರ್ಸ್‌ವರೆಗೆ ತಲುಪಿದೆ..

"ಕಮಲೇಶ್‌ನ ಫೋನ್ ಬಂತು ಮಾರಾಯ...ಜಗಳ ಡೈವೊರ್ಸ್‌ವರೆಗೆ ತಲುಪಿದೆ. ತಾಳಿ ಕಿತ್ತು ಎಸೆದಿದ್ದಾಳಂತೆ. ಕೂಡಲೇ ಬರಬೇಕು ಎಂದು ಹೇಳಿರುವನು. ಏನು ಮಾಡಲಿ ಗೊತ್ತಾಗುತ್ತಿಲ್ಲ. ಜತೆಗೆ ನೀನೂ ಇದ್ದರೆ ಒಳ್ಳೆಯದಿತ್ತು" ನನ್ನ ಗೆಳೆಯ ಶನಿವಾರ ರಾತ್ರಿ ತೀರಾ ಟೆನ್ಷನ್‌ನಲ್ಲಿ ಫೋನ್ ಮಾಡಿದನು.


-ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ- ಥಿಯರಿಯಲ್ಲಿ ನನಗೆ ನಂಬಿಕೆ ಜಾಸ್ತಿ. "ಗಾಬರಿಯಾಗಬೇಡ. ಏನಾದರೂ ಕಾರಣ ಹೇಳಿ ಈಗ ಬರಲಾಗುವುದಿಲ್ಲ, ಅಂತ ಹೇಳು. ನಾಳೆ ಹೇಗೂ ಸಂಡೆ. ಬೆಳಗ್ಗೆ ೯ ಗಂಟೆಗೆ ಅವರ ಮನೆಗೆ ಹೋಗೋಣ" ಅಂದೆ. ರಾತ್ರಿ ಸರಿ ನಿದ್ರೆ ಬರಲಿಲ್ಲ.


೯ ಗಂಟೆ ಸಮಯ ಹೇಳಿದ್ದರೂ, ೮ ಗಂಟೆಗೇ ನಾನೂ, ಗೆಳೆಯ ಕಮಲೇಶನ ಮನೆಗೆ ಹೋದೆವು.


ಮನೆಗೆ ಬೀಗ!!


ಗೆಳೆಯನಿಂದ ನನಗೆ ಸಹಸ್ರಾರ್ಚನೆ ಶುರುವಾಯಿತು-" ನಿನ್ನೆನೇ ಬಂದಿರುತ್ತಿದ್ದರೆ ಸಾಲ್ವ್ ಮಾಡಬಹುದಿತ್ತೋ ಏನೋ..........."


ಕಮಲೇಶನ ಮೊಬೈಲ್‌ಗೆ ಫೋನ್ ಮಾಡಿದೆವು- ಸ್ವಿಚ್ ಆಫ್!

ನೆನಪಿನಾಳದಿ೦ದ.....೧೫.... ದೀಪಾವಳಿ ಅಮಾವಾಸ್ಯೆಯ ದುರ೦ತ ರಾತ್ರಿ!

ನಾನು ಬೆ೦ಗಳೂರಿಗೆ ಬ೦ದು ಕೆಲಸಕ್ಕೆ ಸೇರಿಕೊ೦ಡು ನೆಲೆ ನಿ೦ತ ಬಳಿಕ ತಮ್ಮನನ್ನೂ ಕರೆ ತ೦ದು ಬೆ೦ಗಳೂರಿನಲ್ಲಿ ಕೆಲಸಕ್ಕೆ ಸೇರಿಸಿ ನೆಲೆ ನಿಲ್ಲಿಸಿದೆ. ಇಬ್ಬರು ಗ೦ಡು ಮಕ್ಕಳೂ ಬೆ೦ಗಳೂರಿನಲ್ಲೇ ಇದ್ದುದರಿ೦ದ ದೂರ ಇರಲಾಗದೆ ಅಮ್ಮ ಬೆ೦ಗಳೂರಿಗೆ ವರ್ಗಾವಣೆ ಮಾಡಿಸಿಕೊ೦ಡು, ಹಲ ವರ್ಷ ಸೇವೆ ಸಲ್ಲಿಸಿ, ಸೇವಾವಧಿಯಲ್ಲಿ ಹಲವಾರು ಏರು ಪೇರುಗಳನ್ನು ಕ೦ಡು ಬೆ೦ಗಳೂರಿನಲ್ಲೇ ಸೇವೆಯಿ೦ದ ನಿವೃತ್ತರಾದರು. ನಿವೃತ್ತರಾದಾಗ ಬ೦ದ ಹಣದ ಜೊತೆಗೆ ಇನ್ನೊ೦ದಿಷ್ಟು ಸೇರಿಸಿ ತನ್ನದೇ ಆದ ಸ್ವ೦ತ ಮನೆ ಕಟ್ಟುವ ಕನಸು ಕಾಣುತ್ತಿದ್ದರು. ಒಮ್ಮೆ ಲಗ್ಗೆರೆಗೆ ಬ೦ದ ಅವರಿಗೆ ನನ್ನ ಮನೆಯ ಮು೦ದೆಯೇ ಮಾರಾಟಕ್ಕಿದ್ದ ದೊಡ್ಡ ಸೈಟನ್ನು ತೋರಿಸಿದೆ. ಯಾವುದಕ್ಕೂ ನಿಮ್ಮಪ್ಪನನ್ನು ಒ೦ದು ಮಾತು ಕೇಳಿ ಹೇಳುತ್ತೇನೆ ಎ೦ದು ಹೇಳಿ ಹೋದ ಅಮ್ಮ ಮತ್ತೆ ನಮ್ಮ ಮನೆಗೆ ಬರಲೇ ಇಲ್ಲ!

ಬರುವೆನೆಂದು ಬರಲಿಲ್ಲ ಯಾಕೋ..

 


 ಜೊತೆಯಲ್ಲಿ ಕಳೆದಿದ್ದೇವೆ ಅನೇಕ ಮಧುರ ಕ್ಷಣಗಳನ್ನು


ಜೊತೆಯಲ್ಲಿ ಸುತ್ತಿದ್ದೇವೆ ಪಾರ್ಕು ಮಂದಿರಗಳನ್ನು


ಜೊತೆಯಲ್ಲಿ ನೋಡಿದ್ದೇವೆ ಸಿನೆಮಾ ನಾಟಕಗಳನ್ನು


ಜೊತೆಯಲ್ಲಿ ಉಂಡಿದ್ದೇವೆ ಗೆಳೆತನದ ಸಿಹಿ ಕಹಿಗಳನ್ನು


ಆದರೆ ಇಂದೇಕೋ ನೀನು ಜೊತೆಯಲ್ಲಿ ಇಲ್ಲ..!


 


ನಾನೋ ಒಬ್ಬಂಟಿ, ಮನೆಯಲ್ಲಿ – ಮನದಲ್ಲಿ


ನನ್ನವರನ್ನೆಲ್ಲಾ ಬಿಟ್ಟು ದೂರದೂರಿನಲ್ಲಿ


ನೀನೂ ಬರುವೆನೆಂದಿದ್ದೆ ನನ್ನ ಜೊತೆಗೂಡಿ


ತಿಂಗಳೆರಡಾದರೂ ಬಂದಿಲ್ಲ, ಕಾರಣ, ಕೇಳಬೇಡಿ.


 


ನೀನು ಅತ್ತಾಗ ಕಣ್ಣೀರು ಒರೆಸಿದ್ದೇನೆ


ಕಷ್ಟದಲಿ ನಿನಗೆ ಬೆನ್ನೆಲುಬಾಗಿ ನಿಂತಿದ್ದೇನೆ


ನಿನ್ನನ್ನು ಅತಿಯಾಗಿ ಪ್ರೀತಿಸಿದ್ದೇನೆ


ನಾನು ಮಾಡಿದ ತಪ್ಪು ಅದೊಂದೇ ತಾನೆ..!


 


ಕಷ್ಟವೇನೂ ಇಲ್ಲ, ಇರದಿದ್ದರೂ ನೀನು ಜೊತೆಯಲ್ಲಿ


ಇದೆಯಲ್ಲ ನಿನ್ನ ಭಾವಚಿತ್ರ ನನ್ನ ಎದೆಯಲ್ಲಿ


ನನ್ನದೇ ಕೈಗಳಿಂದ ನನ್ನೆದೆಯನ್ನೇ ಆಲಂಗಿಸಿಕೊಳ್ಳುತ್ತೇನೆ

ಮಗುವಿಗೆ ಹೆಸರು ಸೂಚಿಸಿ

ನನ್ನ ಅಕ್ಕನ ಮಗಳಿಗೆ ಹೆಸರನ್ನು ಹುಡುಕುತ್ತಿದ್ದೇವೆ.


ಜೊ, ಬ, ಬಿ, ಯ, ಯೊ, ಯೌ


ಮೇಲಿನ ಅಕ್ಷರಗಳಲ್ಲಿ ಪ್ರಾರಂಭವಾಗುವಂತಿರಬೇಕು.ಕನ್ನಡ ಅಥವಾ ಸಂಸ್ಕೃತ ಹೆಸರುಗಳಿದ್ದಲ್ಲಿ ಒಳ್ಳೆಯದು.


ಹೆಸರುಗಳಿಗೆ ಅರ್ಥವನ್ನೂ ಕೊಟ್ಟಲ್ಲಿ ಇನ್ನೂ ಚೆನ್ನ


 


ನಮಸ್ಕಾರ --ಮನು

ಅರ್ಕಾವತಿ ಜಮೀನು : ರೈತರಿಗೆ ಬೇಕಾದ್ದು ಏನು?

ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ವಿರುಧ್ಧ ರೈತರ ಚಳುವಳಿ ಹತ್ತೊಂಭತ್ತನೇ ದಿನಕ್ಕೆ ಕಾಲಿಟ್ಟಿದೆ ಎಂದು ಪತ್ರಿಕೆಗಳಲ್ಲಿ ಓದಿದೆ. ಆದರೆ ಆ ವರದಿಯಲ್ಲಿದ್ದಂಥ ರೈತರ ಬೇಡಿಕೆಗಳನ್ನು ಓದಿ ನನಗೆ ಆಶ್ಚರ್ಯವಾಯಿತು. ಆ ರೈತರ ಬೇಡಿಕೆ ಏನೆಂದರೆ ಎಕರೆಗೆ ಮೂವತ್ತು ಕೋಟಿ ರೂಪಾಯಿಗಳಂತೆ ಪರಿಹಾರ ಕೊಡಬೇಕು ಎಂಬುದಾಗಿ. ಜಮೀನು ಕೊಡಲಾರೆವು ಎಂದು ಯಾರೂ ಹೇಳಿದ್ದು ನನಗೆ ತಿಳಿದಿಲ್ಲ. ಅಂದರೆ ರೈತರೂ ಹಣಕ್ಕೆ ತಮ್ಮನ್ನು ತಾವು ಮಾರಿಕೊಂಡಿದ್ದಾರೆ ಎಂದರ್ಥವೇ? ಮೂವತ್ತು ಕೋಟಿ ರೂ ಇಟ್ಟುಕೊಂಡು ರೈತ ಏನು ಮಾಡುತ್ತಾನೆ? ಬೇರೆ ಕಡೆ ಇನ್ನೊಂದು ಜಮೀನು ಕೊಳ್ಳಲೂ ಇಷ್ಟೊಂದು ಹಣ ಬೇಕಿಲ್ಲ. ಆ ಹಣದಲ್ಲಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಧಂಧೆ ಮಾಡುವ ಹುನ್ನಾರವೇ? ಹಾಗಿದ್ದಲ್ಲಿ ರೈತರಿಗೂ ರಾಜಕಾರಣಿಗಳಿಗೂ ಏನು ವ್ಯತ್ಯಾಸ?