ಬರುವೆನೆಂದು ಬರಲಿಲ್ಲ ಯಾಕೋ..

ಬರುವೆನೆಂದು ಬರಲಿಲ್ಲ ಯಾಕೋ..

 


 ಜೊತೆಯಲ್ಲಿ ಕಳೆದಿದ್ದೇವೆ ಅನೇಕ ಮಧುರ ಕ್ಷಣಗಳನ್ನು


ಜೊತೆಯಲ್ಲಿ ಸುತ್ತಿದ್ದೇವೆ ಪಾರ್ಕು ಮಂದಿರಗಳನ್ನು


ಜೊತೆಯಲ್ಲಿ ನೋಡಿದ್ದೇವೆ ಸಿನೆಮಾ ನಾಟಕಗಳನ್ನು


ಜೊತೆಯಲ್ಲಿ ಉಂಡಿದ್ದೇವೆ ಗೆಳೆತನದ ಸಿಹಿ ಕಹಿಗಳನ್ನು


ಆದರೆ ಇಂದೇಕೋ ನೀನು ಜೊತೆಯಲ್ಲಿ ಇಲ್ಲ..!


 


ನಾನೋ ಒಬ್ಬಂಟಿ, ಮನೆಯಲ್ಲಿ – ಮನದಲ್ಲಿ


ನನ್ನವರನ್ನೆಲ್ಲಾ ಬಿಟ್ಟು ದೂರದೂರಿನಲ್ಲಿ


ನೀನೂ ಬರುವೆನೆಂದಿದ್ದೆ ನನ್ನ ಜೊತೆಗೂಡಿ


ತಿಂಗಳೆರಡಾದರೂ ಬಂದಿಲ್ಲ, ಕಾರಣ, ಕೇಳಬೇಡಿ.


 


ನೀನು ಅತ್ತಾಗ ಕಣ್ಣೀರು ಒರೆಸಿದ್ದೇನೆ


ಕಷ್ಟದಲಿ ನಿನಗೆ ಬೆನ್ನೆಲುಬಾಗಿ ನಿಂತಿದ್ದೇನೆ


ನಿನ್ನನ್ನು ಅತಿಯಾಗಿ ಪ್ರೀತಿಸಿದ್ದೇನೆ


ನಾನು ಮಾಡಿದ ತಪ್ಪು ಅದೊಂದೇ ತಾನೆ..!


 


ಕಷ್ಟವೇನೂ ಇಲ್ಲ, ಇರದಿದ್ದರೂ ನೀನು ಜೊತೆಯಲ್ಲಿ


ಇದೆಯಲ್ಲ ನಿನ್ನ ಭಾವಚಿತ್ರ ನನ್ನ ಎದೆಯಲ್ಲಿ


ನನ್ನದೇ ಕೈಗಳಿಂದ ನನ್ನೆದೆಯನ್ನೇ ಆಲಂಗಿಸಿಕೊಳ್ಳುತ್ತೇನೆ


ಒಣಗಿದ ಕೆನ್ನೆಗಳಿಗೆ ಕಣ್ಣ ಹನಿ ಉಣಿಸುತ್ತೇನೆ.

Rating
No votes yet

Comments