ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೂಢ ಉವಾಚ -49

          ಮೂಢ ಉವಾಚ -49


ದೇವರನು ಅರಸದಿರಿ ಗುಡಿ ಗೋಪುರಗಳಲ್ಲಿ|
ದೇವನಿರುವನು ನಮ್ಮ ಹೃದಯ ಮಂದಿರದಲ್ಲಿ||
ಹೃದಯವದು ಶುದ್ಧವಿರೆ ನಡೆಯು ನೇರವಿರೆ|
ಪರಮಾತ್ಮನೊಲಿಯದಿಹನೆ ಮೂಢ||


 


ಕೋಲುಗಳು ಕಲ್ಲುಗಳು ದೇಹವನು ಘಾತಿಪವು|
ಸಿಟ್ಟಿನಾ ಮಾತುಗಳು ಮನಸನು ನೋಯಿಪವು||
ಮಡುಗಟ್ಟಿದಾ ಮೌನ ಹೃದಯವನು ತಿಂದಿರಲು|
ಕೆಡುಕೆಣಿಸಿದವರಿಗೊಳಿತನೆ ಬಯಸು  ಮೂಢ||


*****************


-ಕವಿನಾಗರಾಜ್.

? ? ? ? ? ?

ಮಣ್ಣ ಹಾದಿಗಳಲ್ಲಿ ಏಕಾಂಗಿ 

ಯಾತ್ರೆ ಹೊರಟ ಪಯಣಿಗ 

ಬದುಕ ಮರ್ಮ ಅರಿಯುವೆನೆಂಬ 

ಸಾಹಸದಿ ಮುನ್ನಡೆಯುತಿರಲು...

 

ಆಗಾಗ ಜೊತೆ ನಡೆವ 

ನೆರಳು ಮುನಿಸಿಕೊಂಡಂತೆ ಮಾಯ.

ಹಾದಿಬದಿಯ ಬೇಲಿಯ ಮೇಲಿನ 

ಗೋಸುಂಬೆ ಗೋಣುದ್ದ ಮಾಡಿ 

ಕರೆದಂತೆಯೋ, ಪ್ರಶ್ನಿಸಿದಂತೆಯೋ, 

 ಹ್ಞೂ ಗುಟ್ಟಂತೆಯೋ ಭಾಸ.

 

ಕಾನನದ ಗರ್ಭದಿಂದ ಕಲ್ಲಾದ 

ಅಹಲ್ಯೆಯದೋ ಅಥವ ಕಾಯುತಿರುವ 

ಶಬರಿಯದೋ ಕ್ಷೀಣ ಧ್ವನಿ. 

ಬೇಡನ ಬಲೆಗೆ ಬಿದ್ದ 

ಎಲ್ಲೆ ಮೀರಿ, ಕಾಳಿನಾಸೆಗೆ ಹಾರಿಬಂದ 

ಮುಗ್ಧ ಹಕ್ಕಿಗಳ ಚೀರಾಟ. 

ಹುಲಿಯ ಬಾಯಿಗೆ ಇನ್ನೇನು 

ಸಿಕ್ಕೇ ಬಿಡುವ ಭಯದಲಿರುವ ಜಿಂಕೆ.

ಎಲ್ಲದರ ನಡುವೆ ನಿರಂತರ 

ನನ್ನ ಪರಿಚಯ

ನಮಸ್ತೆ.. ನನ್ನ ಹೆಸರು ಶಮೀಮ. ನಾನು ಮಂಗಳೂರಿನವಳು, ಸಧ್ಯಕ್ಕೆ ಹೈದರಾಬಾದಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಪ್ರಾಥಮಿಕ ವಿಧ್ಯಾಭ್ಯಾಸದ ಸಮಯದಲ್ಲಿ ಕಥೆ, ಕವನ ಬರೆಯುವ ಹವ್ಯಾಸವಿತ್ತು. ಕೆಲವು ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ನಂತರ ವಿಧ್ಯಾಭ್ಯಾಸದಲ್ಲಿ ಮುಳುಗಿ ಬರೆಯಲು ಸಮಯ ಸಿಕ್ಕಿರಲಿಲ್ಲ. ಒಬ್ಬರಿಂದ ಈ ಜಾಲದ ಪರಿಚಯವಾಗಿದೆ. ಇನ್ನು ಮುಂದೆ ನಿಮ್ಮೆಲ್ಲರ ಪ್ರೋತ್ಸಾಹದಿಂದ ಇಲ್ಲಿ ನನ್ನ ಕಲೆಯನ್ನು ಮುಂದುವರಿಸಬೇಕೆನ್ದಿದ್ದೇನೆ.  

||ಸತ್ಯ-ಮಿಥ್ಯ||

ಸೂರ್ಯಾಸ್ತದ ರಕ್ತವರ್ಣ
ನಾಳೆಗೆ ಮುನ್ನುಡಿ
ಕಹಿನೆನಪುಗಳ ಕರಾಳವರ್ಣ
ಕಳೆದದಿನಗಳ ಹಿನ್ನುಡಿ
ನಾಳೆಯು ಬರಲಿ.....
ಸಂತಸ ತರಲಿ.....


ಸಾಗರದಲೆಗಳ ಮಾರ್ಧನಿಯ ಲಹರಿ
ನಾಳೆಯ ಜೀವನಕೆ ಮುನ್ನುಡಿಯ ಶಾಯರಿ
ಹೋದವರು ಕೆಲವರು ಮರಳಿಬಾರರು
ಮಿಥ್ಯ ಜೀವನದ ಭಾಗೀದಾರರು
ಹಿರಿಯರ ಜೀವನ ಸಂಧ್ಯೆಯ ತಿಳಿಹಾಸ
ಎಳೆಯರ ನಾಳೆಗಳ ಮಂದಹಾಸ

ಸುದ್ದಿ ಮಾತಿನ ಭಟ್ಟರು ಸುದ್ದಿಯದಾಗ…


 ‘ಸರ್, ಆಗಸತ್ತರಕ್ಕೆ ನೀವು ಬೆಳೆಸಿದ ಪತ್ರಿಕೆ ಇ೦ದೆ ಸದ್ದಿಲ್ಲದೆ ಹೊರಬರಲು ಕಾರಣವೇನು ? ಹೊಸ ಚಿ೦ತನೆಗಳು, ಮೊನಚಾದ ಬರಹಗಳು, ಅ೦ಕಣಗಳು ಒ೦ದೇ ಎರಡೇ..ಲವಲವಕೆ ಯ೦ತಹ ಹೊಸ ರೂಪವನ್ನು ಪತ್ರಿಕೆಗೆ ಪರಿಚಯಿಸಿದಿರಿ, ರಾಜಕಾರಣಿ ಗಳ ಮಾನ ಹರಾಜು ಹಾಕಿ ಪತ್ರಿಕೊಧ್ಯಮದ ಘನತೆ ಹೆಚ್ಚಿಸಿದಿರಿ…..ನೀವಿಲ್ಲದ ಪತ್ರಿಕೆ ಇನ್ನುಮು೦ದೆ ನೀರಸ…ನಿಮ್ಮೂದಿಗೆ ನಾವಿದ್ದೇವೆ..’

ಚಪ್ಪಲ್ ಚನ್ನಿಗರಾಯ ....

ನಮ್ಮ ಕಾಲೇಜ್ ನಲ್ಲಿ ಅಂಜನ್ ಎಂಬ ಹುಡುಗ ಇದ್ದ. ಸಕ್ಕತ್ ಜಿಪುಣ. ಒಂದು ಪೈಸೆ ಕೂಡ ಬಿಚ್ಚುತ್ತಿರಲಿಲ್ಲ. ಹುಡುಗಿಯರು ಎಂದರೆ ಅತ್ಯಂತ ಆಪ್ಯತೆ. ಅವರ ಜೊತೆ ಕೂಡ ಒಂದು ಪೈಸೆ ಬಿಚ್ಚುತ್ತಿರಲಿಲ್ಲ. ಹುಡುಗಿಯರ ಹತ್ತಿರಾನೇ ದುಡ್ಡು ವಸೂಲಿ ಮಾಡುತ್ತಿದ್ದ. ಕ್ಯಾಂಟೀನ್ ಗೆ ಬಂದರು ದುಡ್ಡು ಕೊಟ್ಟು ಖರೀದಿಸದೇ, ನಾನು ಸ್ವಲ್ಪ ರುಚಿ ನೋಡುತ್ತೇನೆ ಎಂದು ಹೇಳಿ ಎಲ್ಲರ ಪ್ಲೇಟ್ ಗೆ ಕೈ ಹಾಕಿ ತಿನ್ನುತ್ತಿದ್ದ. ಕೆಲ ಹುಡುಗರು ಅವನು ಬರುತ್ತಾನೆ ಎಂದರೆ ಗಬ.. ಗಬ.. ಎಂದು ಬೇಗನೆ ತಿಂದು ಜಾಗ ಖಾಲಿ ಮಾಡುತ್ತಿದ್ದರು. ಹುಡುಗಿಯರನ್ನು ಪರಿಚಯ ಇಲ್ಲದೇ ಇದ್ದರು ಅವರನ್ನು ಹೋಗಿ ಮಾತನಾಡಿಸುತ್ತಿದ್ದ. ಒಂದು ಹುಡುಗಿ ಅಂಜನಾ ಎಂದು ಇತ್ತು. ಅವಳ ಹೆಸರಿಗೂ ತನ್ನ ಹೆಸರು ತುಂಬಾ ಮ್ಯಾಚ್ ಆಗುತ್ತೆ ಎಂದು ಅವಳ ಹಿಂದೆ ಬಿದ್ದಿದ್ದ.