ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರೂಪಾ೦ತರ

ಪ್ರಿಯೇ,

ನನ್ನ
ಪ್ರೇಮದಲ್ಲಿ
ಹಿ೦ದಿನ
ಕಾವು ಉನ್ಮಾದ
ಆವೇಶ ಮತಿಭ್ರಮಣೆ
ಎಲ್ಲವೂ
ಈಗ ಮರೆಯಾಗಿದೆ
ಈಗಿನ ಪ್ರೇಮ
ಪೂರ್ಣಚ೦ದಿರನ೦ತೆ ಶಾ೦ತ
ಬಿರುಗಾಳಿಗೆ ಮೈಯೊಡ್ಡಿದ
ಒ೦ದು ಹೆಬ್ಬ೦ಡೆ
ವಾಸ್ತವಕ್ಕೆ
ಸನಿಹದಲ್ಲಿರುವ೦ಥ ಪ್ರೇಮ
.....
ಬೇಸರನಾ?
ಈ ಜಗತ್ತಿನಲ್ಲಿ
ಮಿ೦ಚು ಗುಡುಗು
ಚ೦ಡಮಾರುತ ಕೇವಲ
ಕ್ಷಣಿಕ.
ನಾನು ನಿಸರ್ಗದಿ೦ದ
ಪಾಠ ಕಲಿತಿರುವೆ
ಅರ್ಥವಾಗುವುದು ಕ್ರಮೇಣ
ನಿನಗೆ
ನನ್ನ ಈ ರೂಪಾ೦ತರ
ಅಲ್ಲಿಯವರೆಗೂ
ನಮ್ಮ ನಡುವೆ
ಈ ಅ೦ತರ
ಬೇಕಾ ಗೆಳತೀ...

ಸೂಪರ್.......ವಜ್ರವಲ್ಲಿ

ನಾನು ಸೂಪರ್...ಅಲ್ಲಾ...


ವಜ್ರವಲ್ಲಿ ಬಗ್ಗೆ ಹೇಳಲು ಹೊರಟಿದ್ದು. ಓದಿ..ಕೊನೆಯಲ್ಲಿ "ಸೂಪರ್ ವಜ್ರವಲ್ಲಿ" ಅನ್ನುವಿರಿ.


***********


ಬೆಳಗ್ಗೆ ನಾನು ಎಷ್ಟೇ ಬೇಗ ಏಳಲಿ, ಕೆಲಸಕ್ಕೆ ಹೊರಡುವಾಗ ಮಾತ್ರ ತಡವಾಗುವುದು. ಹೊರಟ ಮೇಲೆ, ಬೈಕ್ ಕವರ್ ತೆಗೆದು ಕಾರ್ನರ್‌ಗೆ ಎಸೆದು, ಬ್ಯಾಗ್ ಹೆಗಲಿಗೆ ಏರಿಸಿ, ಉಳಿದ ಬೈಕಿಗರೊಂದಿಗೆ ರೇಸ್‌ನಲ್ಲಿ ಭಾಗವಹಿಸುವುದು ದಿನ ನಿತ್ಯದ ರೂಢಿ.


ಸಂಜೆ ಮಾತ್ರ ರೇಸ್ ಇಲ್ಲ- ಯಾಕೆಂದರೆ ಟೈಮಿಗೆ ಮೊದಲೇ ಕೆಲಸ ಮುಗಿಸಿ ಹೊರಡುತ್ತೇನಲ್ಲಾ... ಮನೆಗೆ ಬಂದ ಮೇಲೆ, ಬೈಕ್‌ಗೆ ಕವರ್ ಹೊದಿಸಿ, ಬೆಚ್ಚಗೆ ಮಲಗಿಸಿಯೇ ಮನೆಯೊಳಗೆ ಹೋಗುವೆನು.


ಮೊನ್ನೆ ಸಂಜೆ ಬೈಕ್ ಕವರ್ ಹೊದಿಸಲು ಹೋದಾಗ, ಅದರೊಳಗಿಂದ "ಲಕ್ಷ್ಮೀ ಚೇಳು" ಕೆಳಗೆ ಬಿತ್ತು! ಬಿದ್ದದ್ದೇ ಎಕ್ಸ್‌ಪ್ರೆಸ್ ಟ್ರೈನ್ ತರಹ ಸೀದಾ ಹೋಗಿ ಹೂ ಕುಂಡಗಳ ಎಡೆಗೆ ಸೇರಿಕೊಂಡಿತು.

ಮೂಢ ಉವಾಚ -46

          ಮೂಢ ಉವಾಚ -46


ಉರಿಯುವ ಬೆಂಕಿಗೆ ಕೀಟಗಳು ಹಾರುವೊಲು|
ಗಾಳದ ಹುಳುವಿಗೆ ಮತ್ಸ್ಯವಾಸೆ ಪಡುವೊಲು||
ವಿಷಯ ಲೋಲುಪರಾಗಿ ಬಲೆಗೆ ಸಿಲುಕುವರ|
ಭ್ರಮೆಯದೆನಿತು ಬಲಶಾಲಿ ಮೂಢ||


 


ನಾಚಿಕೆಯ ಪಡದೆ ಏನೆಲ್ಲ ಮಾಡಿಹರು
ಆಸ್ತಿ ಅಂತಸ್ತ್ತಿಗಾಗಿ ಬಡಿದಾಡುತಿಹರು
ಸುಖವನೇ ಹಂಬಲಿಸಿ ದುಃಖವನು ಕಾಣುವರು
ದುಃಖದ ಮೂಲವರಿಯರವರು ಮೂಢ


*********************


-ಕವಿನಾಗರಾಜ್.

ಮರಳಿ ಬಾ ಕಾಲವೇ .......

       ಏನೋ ಗೊತ್ತಿಲ್ಲ ೫ ನಿಮಿಷ ಟೈಮ್ ಸಿಕ್ಕರೂ  ಮನಸ್ಸು ಹಿಂದೆ ಓಡುತ್ತೆ .ಎಲ್ಲೋ ನಾ ಕಳೆದ ಬಾಲ್ಯ ಧುತ್ತನೆ ಕಣ್ಮುಂದೆ ಬರುತ್ತೆ. ಇವಾಗಿನ ನನ್ನ ಸ್ಥಿತಿ ನೋಡಿ ಅಣಕಿಸಿದಂತೆ ಆಗುತ್ತೆ. ಎಲ್ಲಿ ಹೋಯ್ತು ಆ   ದಿನಗಳು . .......?ಮನಸಾರೆ ನಕ್ಕು ತುಂಬ ದಿನಾನೇ ಆಗೋಯ್ತು .
       ದಿನ ಓಡ್ತಿದೆ ಅದರ ಕಾಲಿಗೆ ಕಟ್ಟಿಕೊಡವಳ ಹಾಗೆ ನಾನು ಓಡ್ತಿತಿದೇನೆ.ಬೇಡದ  ಜಂಜಾಟಗಳೊಂದಿಗೆ ನಾನೆಲ್ಲೋ ಕಳೆದು ಹೋಗ್ತಿದ್ದೇನೆ ಅನಿಸ್ತಿದೆ. ಅಳುವುದಕ್ಕೂ ಟೈಮ್ ಇಲ್ಲ. ನನ್ನೊಳಗೆ ನಾನು ಮಾತನಾಡದೆ ಎಷ್ಟೋ ಕಾಲ ಆಗಿದೆ.

ಎರಡು ಸಾಲಿನ ಕಥೆಗಳು


ದಿನವೂ ಪ್ರೇಮ ಪತ್ರವನ್ನು ನನ್ನಿಂದಲೇ ಬರೆಸಿಕೊಂಡು ಹೋಗುತ್ತಿದ್ದ.
ಕೊನೆಗೊಂದು ದಿನ ಆತ್ಮಹತ್ಯ ಪತ್ರವನ್ನು ಮಾತ್ರ ತಾನೇ ಬರೆದ.

 

***

 

ಒಂದು ಎತ್ತು ಇನ್ನೊಂದು ಎತ್ತಿಗೆ ಹೇಳಿತು "ಈ ಮನುಷ್ಯನ ಗಾಡಿ ಎಳೆದುಕೊಂಡು ಎಷ್ಟು ದಿನ ಅಂತ ಬದುಕೋದು? ಆ ಬೆಟ್ಟದಲ್ಲಿ ತುಂಬಾ ಹುಲ್ಲು ಬೆಳೆದಿದೆ, ಅಲ್ಲಿ ಹೋಗಿ ತಿಂದುಕೊಂಡು ಆರಾಮಾಗಿ ಇರೋಣವೇ?"
ಇನ್ನೊಂದು ಎತ್ತು ಹೇಳಿತು "ಅಲ್ಲಿ ಸಂಜೆಯಾದ ನಂತರ ನಮ್ಮನ್ನು ಕಟ್ಟಿ ಹಾಕಲು ಯಾರೂ ಇರಲ್ಲ, ಏನು ಮಾಡೋದು ?"

 

***

 

ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ....

ರಚನೆ: ಕೆ.ಎಸ್. ನರಸಿಂಹಸ್ವಾಮಿ
ಕವನ ಸಂಕಲನ: ಮೈಸೂರು ಮಲ್ಲಿಗೆ


 
ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು
ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು


ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವುವು ಶ್ರೀತುಳಸಿ ಕೃಷ್ಣತುಳಸಿ
ನೀಲಾಂಬರನ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ


ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ
ಇನ್ನು ತಂಗಿಯ ಮದುವೆ ತಿಂಗಳಿಹುದು
ತೌರಪಂಜರದೊಳಗೆ ಸೆರೆಯಾದ ಗಿಳಿಯಲ್ಲ
ಐದು ತಿಂಗಳ ಕಂದ ನಗುತಲಿಹುದು


ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದು ನಾನು ಬಲ್ಲೆ
ನಾಳೆ ಮಂಗಳವಾರ ಮಾರನೆಯ ದಿನ ನವಮಿ
ಆಮೇಲೆ ನಿಲ್ಲುವೆನೇ ನಾನು ಇಲ್ಲಿ

ಎಚ್ಚರಿಕೆಯ ಗಂಟೆ: ಕಿವುಡನ ಮುಂದಣ ಕಿನ್ನರಿ!

                ಲೋಕಾಯುಕ್ತರು ಝಾಡಿಸಿದ ಎಫ್‌ಐಆರ್ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಕಟ್ಟಾ ಅವರು ಮಾಡಿದ ಪದ’ತ್ಯಾಗ’ವನ್ನು ಡಿ. 4ರ ಸಂಯುಕ್ತ ಕರ್ನಾಟಕ ಸಂಪಾದಕೀಯ ಸ್ವಾಗತಿಸಿ “ಎಚ್ಚರಿಕೆಯ ಗಂಟೆ” ಬಣ್ಣಿಸಿದೆ. ಆದರೆ ಇದರಿಂದ ಯಾರಾದರೂ ನಿಜವಾಗಿ ಎಚ್ಚೆತ್ತುಕೊಂಡಾರೇ? ಅಂತಹ “ಮರ‍್ಯಾದೆ ಪ್ರಜ್ಞೆ”ಯ ಆವಶ್ಯಕತೆಯಾದರೂ ನಮ್ಮ ಇಂದಿನ ರಾಜಕಾರಣಕ್ಕಿದೆಯೇ? ಇದು ನನ್ನಂಥಾ ಸಾಮಾನ್ಯ ಮತದಾರನೊಬ್ಬನ ಅಚ್ಚರಿ!


‘ನಮ್ಮ ರಾಜಕಾರಣಿಗಳಲ್ಲಿ ಆತ್ಮಸಾಕ್ಷಿ ಎನ್ನುವುದು ಸತ್ತುಹೋಗಿದೆ’ ಎಂದು ಅವರಿವರು ಹಲಬುವುದನ್ನು ಕೇಳುತ್ತೇವೆ. ಆದರೆ ಈ ಅಲಾಲಟೋಪಿಗಳನ್ನು ಸೊಪ್ಪು-ನೀರೂ ಹಾಕಿ ಬೆಳೆಸಿಟ್ಟಿರುವುದೂ ನಮ್ಮ “ವ್ಯವಸ್ಥೆ”ಯೇ ಅಲ್ಲವೇ?!

ಡಾಲ್ಫಿನ್: ನೀರೊಳಗಿನ ಬೆರಗು

ಪ್ರಾಣಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿರುವ ನಮಗೆ, ಅವುಗಳನ್ನು ನಮ್ಮ ಸಮಜೀವಿಗಳೆಂದು ಪರಿಗಣಿಸುವುದು ಸಾಧ್ಯವಿಲ್ಲ.

-ಚಾರ್ಲ್ಸ್ ಡಾರ್ವಿನ್