ಮಾದರಿ ಮಹನೀಯರು

ಮಾದರಿ ಮಹನೀಯರು

ಇತ್ತೀಚಿನ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಭೂ ಕಬಳಿಕೆಯ ವಾರ್ತೆಯು ಧಾರಾವಾಹಿಯ ಸಂಚಿಕೆಯಂತೆ ದಿನವು ಕುತೂಹಲಕಾರಿಯಾಗಿ ಮೂಡಿಬರುತ್ತಿವೆ. ಪ್ರತಿ ಸಂಚಿಕೆಯಲ್ಲು ನಂಬಲು ಅಸಾಧ್ಯವಾದಂತಹ ಪ್ರಸಂಗಗಳು. ಆಡಳಿತ ಹಾಗು ಪ್ರತಿಪಕ್ಷದವರಿಗೆ ಒಬ್ಬರಿಗೊಬ್ಬರು ಕೆಸರೆರಚಿಕೊಂಡು ರಾಜಕೀಯದ ತತ್ತ್ವವನ್ನೇ ಬುಡಮೇಲು ಮಾಡುತ್ತಿದ್ದಾರೆ. ಇನ್ನು ಕೇಂದ್ರ ಸರಕಾರದತ್ತ ನೋಡಿದರೂ ಕೂಡ ಹಗರಣಗಳ ಸರಮಾಲೆಯನ್ನೆ ಪೋಣಿಸಬಹುದು, ಅಷ್ಟು ಸುಲಭವಾಗಿ ಬಿಟ್ಟಿದೆ ನಮ್ಮ ಜನ ಪ್ರತಿನಿಧಿಗಳಿಗೆ ಭ್ರಷ್ಟಾಚಾರದ ಪರಮಾವಧಿ ತುತ್ತತುದಿ ತಲುಪಲು.
ದೇಶ ಹಾಗು ರಾಜ್ಯದ ಜನತೆ ಇವೆಲ್ಲ ಕಂಡು ರೋಸಿಹೋಗಿದ್ದಾರೆ. 
ಇವೆಲ್ಲದರ ಮಧ್ಯೆ ಸಂತಸ ಹಾಗು ಹೆಮ್ಮೆ ಪಡುವ ಸಂಗತಿ ಎಂದರೆ ಶ್ರೀಯುತ ಅಜೀಂ ಪ್ರೇಮ್ಜಿಯವರ ತಮ್ಮ ಕಂಪನಿಯ 8,846 ಕೋಟಿ ರೂಪಾಯಿಯನ್ನು ತಮ್ಮದೆ ಸಂಸ್ಥೆಯಾದ
ಅಜೀಂ ಪ್ರೇಮ್ಜಿ ಟ್ರಸ್ಟ್ ಗೆ ವರ್ಗಾಯಿಸಿರುವದನ್ನು ಕಂಡರೆ ನಿಜಕ್ಕು ಶ್ಲಾಘನೀಯದ ಕೆಲಸ. ಇವರ ಕೊಡುಗೆಯಿಂದ ಗ್ರಾಮೀಣ ಪ್ರದೇಶಗಳಲ್ಲಿರುವ ಶಾಲೆಗಳನ್ನು ನಿರ್ಮಿಸಲು ಹಾಗು ಇತರ ಶೈಕ್ಷಣಿಕ 
ಚಟುವಟಿಕೆಗಳಿಗೆ ಭಾರಿ ಸಹಾಯವಾಗಲಿದೆ. ದೇಶದ ಆರ್ಥಿಕ ಹಾಗು ಸಾಮಾಜಿಕ ಅಭಿವೃದ್ಧಿಗಾಗಿ ಕೊಡುಗೆಯನ್ನು ನೀಡಿ ಇಂದಿನ ಪೀಳಿಗೆಯ ಯುವಕರಿಗೆ ಮಾದರಿಯಾಗಿರುವರು. 
ಪ್ರೇಮ್ಜಿಯವರಂತೆ ಭಾರತದಲ್ಲಿ ಶಿಕ್ಷಣ ವಲಯದ ಸುಧಾರಣೆಗೆ ವೇದಾಂತ ರಿಸೋರ್ಸಸ್ ಕಂಪನಿಯ ಪ್ರಧಾನ ಅಧಿಕಾರಿಗಳಾದ ಶ್ರೀಯುತ ಅನಿಲ್ ಅಗರ್ವಾಲ್ ರವರು ಒರಿಸ್ಸಾದಲ್ಲಿ ವೇದಾಂತ ವಿಶ್ವ ವಿದ್ಯಾಲಯ ಸ್ಥಾಪನೆಗೆ 100 ಕೋಟಿ ಡಾಲರ್ ಕೊಡುಗೆಯಾಗಿ 2006 ರಲ್ಲಿ ನೀಡಿದರು. ಒಂದು ಲಕ್ಶಕ್ಕೂ ಮಿಗಿಲಾಗಿ ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯಕ್ಕೆ ಸೇರಬಹುದಾದಂತಹ ದೊಡ್ದ ವಿದ್ಯಾಲಯ. 
ನಮ್ಮ ಜನ ಪ್ರತಿನಿಧಿಗಳು ಇಂತಹ ಮಹನೀಯರನ್ನು ಕಂಡಾದರು ದೇಶದ ಅಭಿವೃದ್ಧಿಗಾಗಿ ಶ್ರಮವಹಿಸಿದ್ದರೆ ಇಂದು ಭಾರತ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತಿತ್ತು. ಎಲ್ಲ ರೀತಿಯ ಕಬಳಿಕೆಯಲ್ಲಿ ನಿರತರಾಗಿರುವ  ರಾಜಕೀಯ ಮುಖಂಡರು ಮೇಲ್ಕಂಡ ಧರ್ಮಭೀರುಗಳನ್ನು ಕಂಡಾದರು ಅವರ ಆದರ್ಶವನ್ನು ಪಾಲಿಸಿದರೆ ಸೂಕ್ತ ಹಾಗು ದೇಶಕ್ಕು ಹಿತ.

ಇತ್ತೀಚಿನ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಭೂ ಕಬಳಿಕೆಯ ವಾರ್ತೆಯು ಧಾರಾವಾಹಿಯ ಸಂಚಿಕೆಯಂತೆ ದಿನವು ಕುತೂಹಲಕಾರಿಯಾಗಿ

ಮೂಡಿಬರುತ್ತಿವೆ. ಪ್ರತಿ ಸಂಚಿಕೆಯಲ್ಲು ನಂಬಲು ಅಸಾಧ್ಯವಾದಂತಹ ಪ್ರಸಂಗಗಳು. ಆಡಳಿತ ಹಾಗು ಪ್ರತಿಪಕ್ಷದವರಿಗೆ ಒಬ್ಬರಿಗೊಬ್ಬರು ಕೆಸರೆರಚಿಕೊಂಡು ರಾಜಕೀಯದ

ತತ್ತ್ವವನ್ನೇ ಬುಡಮೇಲು ಮಾಡುತ್ತಿದ್ದಾರೆ. ಇನ್ನು ಕೇಂದ್ರ ಸರಕಾರದತ್ತ ನೋಡಿದರೂ ಕೂಡ ಹಗರಣಗಳ ಸರಮಾಲೆಯನ್ನೆ ಪೋಣಿಸಬಹುದು, ಅಷ್ಟು ಸುಲಭವಾಗಿ ಬಿಟ್ಟಿದೆ ನಮ್ಮ ಜನ ಪ್ರತಿನಿಧಿಗಳಿಗೆ ಭ್ರಷ್ಟಾಚಾರದ ಪರಮಾವಧಿ ತುತ್ತತುದಿ ತಲುಪಲು.ದೇಶ ಹಾಗು ರಾಜ್ಯದ ಜನತೆ ಇವೆಲ್ಲ ಕಂಡು ರೋಸಿಹೋಗಿದ್ದಾರೆ. 

ಇವೆಲ್ಲದರ ಮಧ್ಯೆ ಸಂತಸ ಹಾಗು ಹೆಮ್ಮೆ ಪಡುವ ಸಂಗತಿ ಎಂದರೆ ಶ್ರೀಯುತ ಅಜೀಂ ಪ್ರೇಮ್ಜಿಯವರ ತಮ್ಮ ಕಂಪನಿಯ 8,846 ಕೋಟಿ ರೂಪಾಯಿಯನ್ನು ತಮ್ಮದೆ ಸಂಸ್ಥೆಯಾದ ಅಜೀಂ ಪ್ರೇಮ್ಜಿ ಟ್ರಸ್ಟ್ ಗೆ ವರ್ಗಾಯಿಸಿರುವದನ್ನು ಕಂಡರೆ ನಿಜಕ್ಕು ಶ್ಲಾಘನೀಯದ ಕೆಲಸ. ಇವರ ಕೊಡುಗೆಯಿಂದ ಗ್ರಾಮೀಣ ಪ್ರದೇಶಗಳಲ್ಲಿರುವ ಶಾಲೆಗಳನ್ನು ನಿರ್ಮಿಸಲು ಹಾಗು ಇತರ ಶೈಕ್ಷಣಿಕ  ಚಟುವಟಿಕೆಗಳಿಗೆ ಭಾರಿ ಸಹಾಯವಾಗಲಿದೆ. ದೇಶದ ಆರ್ಥಿಕ ಹಾಗು ಸಾಮಾಜಿಕ ಅಭಿವೃದ್ಧಿಗಾಗಿ ಕೊಡುಗೆಯನ್ನು ನೀಡಿ ಇಂದಿನ ಪೀಳಿಗೆಯ ಯುವಕರಿಗೆ ಮಾದರಿಯಾಗಿರುವರು.