ತನು ಚಂದನವು, ಚಂಚಲ ಮನವು...!
ಇನ್ನೊಂದು ಬಹುಪ್ರಸಿದ್ಧ ಹಿಂದೀ ಚಲನಚಿತ್ರಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ:
ಚಿತ್ರ: ಸರಸ್ವತೀ ಚಂದ್ರ
ಗಾಯಕರು: ದಿ. ಮುಕೇಶ್
ತನು ಚಂದನವು ಚಂಚಲ ಮನವು
ಬಲುಮೋಹಕ ನಿನ್ನಾ ಕಿರುನಗು
ದೋಷಿ ನಾನೆಂದು ಹಳಿಯದಿರಿ
ನಾನಾದರೆ ಹುಚ್ಚ, ಪ್ರೀತಿಯಲಿ
ನಿನ್ನ ಹುಬ್ಬು ಕಾಮನಬಿಲ್ಲಂತೆ
ರೆಪ್ಪೆಗಳಂಚಿನಲಿ ಕಾಡಿಗೆಯಂತೆ
ಹಣೆಯ ಕುಂಕುಮ ಸವಿತಾರೂಪ
ನಿನ್ನ ತುಟಿಗಳಲಿ ಈ ಬಿಸಿ ತಾಪ
ನಿನ್ನ ನೆರಳು ಸೋಕಿದರೆ ಸಾಕು
ಬರಡಾಗಿಹ ಹೃದಯ ಅರಳುವುದು
||ತನು ಚಂದನವು ಚಂಚಲ ಮನವು||
ತನು ಸುಂದರ ಮನವೂ ಸುಂದರ
ನೀನೇ ಸೌಂದರ್ಯದ ಮೂರುತಿಯು
ಇನ್ನಾರಿಗೂ ನೀನು ಬೇಡಾದರೂ
- Read more about ತನು ಚಂದನವು, ಚಂಚಲ ಮನವು...!
- 15 comments
- Log in or register to post comments